ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mysore : ಮೈಸೂರಿನ ಜೈಲಿನಲ್ಲೂ ನಡೀತಿದ್ಯಾ ಕೈದಿಗಳಿಗೆ ಆತಿಥ್ಯ….?

Mysore : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್​ ಆದ ಹಿನ್ನಲೆ ಇಬ್ಬರು ಅಧಿಕಾರಿಗಳ ಎತ್ತಂಗಡಿ ಹಾಗೂ ಒಬ್ಬರನ್ನು ವರ್ಗಾವಣೆ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೇ, ಉಗ್ರ ಮತ್ತು ಅತ್ಯಾಚಾರಿಗಳೂ ಮೊಬೈಲ್​ ಬಳಸುತ್ತಿದ್ದ ಕ್ಲಿಪ್​ಗಳು ಹೊರ ಬಂದಿದ್ದು. ಇದು ಸಾಮಾನ್ಯ ಜನರ ಹಾಗೂ‌ ಕಾನೂನಿನ ನಿರ್ಲಕ್ಷದ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ ಮೈಸೂರು ಜಿಲ್ಲೆಯಲ್ಲಿಯೂ ಕೇಂದ್ರ ಕಾರಾಗೃಹದಲ್ಲಿಯೂ ಕೈದಿಗಳಿಗೆ ಸಕಲ ಸೌಕರ್ಯ ಸಿಗುತ್ತಿರುವ ಬಗ್ಗೆ ವರದಿಯಾಗಿದೆ.

ಮೈಸೂರು ಕೇಂದ್ರ ಕಾರಾಗ್ರಹದಲ್ಲಿ ಕೆಲ ಕೈದಿಗಳಿಗೆ ಬೇಕಾದ ಸೌಲಭ್ಯ ಒದಗಿಸಲಾಗುತ್ತಿದ್ದು, ಮದ್ಯ, ಮಾಂಸಾಹಾರ, ಸಿಗರೇಟುಗಳು ಮತ್ತು ಬೀಡಿ, ಮೊಬೈಲ್ ಫೋನ್​ಗಳು ನಿರ್ದಿಷ್ಟ ಬೆಲೆಗೆ ಲಭ್ಯವಾಗುತ್ತಿವೆ ಎಂದೂ ತಿಳಿದು ಬಂದಿದೆ. ಆ ಮೂಲಕ ಕೈದಿಗಳ ಮನಃ ಪರಿವರ್ತನಾ ಕೇಂದ್ರಗಳಾಗಬೇಕಿದ್ದ ಜೈಲು, ಮೋಜಿನ ಸ್ಥಳವಾಗಿ ಮಾರ್ಪಟ್ಟಿದೆ. ಕಾರಾಗೃಹದ ಒಳಭಾಗದಲ್ಲಿ ಪ್ರತಿ ವಸ್ತುವಿಗೂ ನಿಗದಿತ ಬೆಲೆ ಇದ್ದು, ಮಾರುಕಟ್ಟೆಯಲ್ಲಿ ದರ ಬದಲಾದರೂ ಇಲ್ಲಿ ಯಾವುದೇ ಏರಿಳಿತ ಆಗಲ್ಲ. ಒಂದು ವಸ್ತುವಿನ ಕನಿಷ್ಟ ಬೆಲೆಯೇ 150 ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸುವ ಸಾಮರ್ಥ್ಯ ಇರುವವರಿಗಾಗಿ ಪ್ರತಿ ವಾರ ಮದ್ಯ ಮತ್ತು ಮಾಂಸವನ್ನು ಆರ್ಡರ್​ ಮಾಡಲಾಗುತ್ತೆ ಎಂದು ವರದಿಯಾಗಿರುತ್ತದೆ.

ಇನ್ನು ತಿಳಿಯದಿರುವ ಅದೆಷ್ಟೋ ಅಪರಾಧಿಗಳ ಆತಿಥ್ಯಗಳು ಒಂದೊಂದಾಗಿ ಬೆಳಕಿಗೆ ಬರುವಂತಿದೆ. ಕಾನೂನು ಅಂದ್ರೆ ಎಲ್ಲರಿಗೂ ಶಿಕ್ಷೆ ಅನ್ವಯಿಸುವಂತದ್ದು, ಒಬ್ಬರಿಗೆ ಒಂದು ರೀತಿ ಕಾನೂನು ಇನ್ನೊಬ್ಬನಿಗೆ ಐಶಾರಾಮಿ ಕಾನೂನು ಇದೆಲ್ಲಾ ನ್ಯಾಯಕ್ಕೆ ವಿರುದ್ಧವಾಗಿದೆ.

ಇದನ್ನೂ ಓದಿ :Bollywood : ಹಿರಿಯ ನಟ ನಿಧನದ ಸುದ್ದಿ ಸುಳ್ಳು : ನಟ ಧರ್ಮೇಂಧ ಆರೋಗ್ಯದಲ್ಲಿ ಚೇತರಿಕೆಯಿದೆ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/_3lkVv4R_q4?si=x3mk09U2SLlOUcmv

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page