ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಬಿಗ್‌ ಬಾಸ್‌ ಮನೇಲಿ ಮಾತಲ್ಲೇ ಗತ್ತು ತೋರಿಸುವ ಮಾಳು ಆಟ ಹೇಗಿದೆ.?‌ ಈತ ನಿಜಕ್ಕೂ ಮುಗ್ಧನಾ?

BBK12: ಮಾಳು ನಿಪನಾಳ ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಮನೆಯ ಒಳಗಡೆ ಮಾಳು ಅವರ ಕ್ಯಾಪ್ಟನ್ ಶಿಪ್ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಬಿಗ್ ಬಾಸ್ ಮನೆಯಲ್ಲಿ ಮಾಳು ನಿಪ್ಪನಾಳ ಅವರು ಬಹಳ ಸೈಲೆಂಟ್ ಆಗಿದ್ದರು, ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದ ನಂತರ ಮಾಳು ಸಿಕ್ಕಾಪಟ್ಟೆ ಜೋರಾಗಿ ಧ್ವನಿ ಎತ್ತಿ ಮಾತನಾಡುತ್ತಿದ್ದಾರೆ. ತನ್ನ ಮಾತಿನಲ್ಲಿ ಕೂಡ ಗತ್ತನ್ನು ತೋರಿಸುತ್ತಿದ್ದಾರೆ. ಕೆಲವೊಂದು ಬಾರಿ ವೀಕ್ಷಕರಿಗೆ ಮಾಳು ಅವರು ಮಾತನಾಡುವುದು ಅರ್ಥವೇ ಆಗುತ್ತಿಲ್ಲ. ಆದರೂ ಕೂಡ ಪ್ರೇಕ್ಷಕರು ಮಾಳು ಅವರನ್ನು ಸೇವ್ ಮಾಡುತ್ತಲೇ ಬಂದಿದ್ದಾರೆ. ಇದರಿಂದ ಮಾಳು ಅವರ ಜೊತೆ ಇವರ ಅಭಿಮಾನಿಗಳು ಇದ್ದಾರೆ ಅನ್ನೋದು ತಿಳಿಯುತ್ತದೆ.

ಸೈಲೆಂಟ್‌ ಇದ್ದ ಮಾಳು ಫುಲ್‌ ವೈಲೆಂಟ್..!

ಕಳೆದ ವಾರ ಬಿಗ್ ಬಾಸ್ ಮನೆಯ ಒಳಗಡೆ ಬಂದರುವಂತಹ ಪ್ರೇಕ್ಷಕರ ಆಸೆಯಂತೆ ಮಾಳು ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲಿಯವರೆಗೆ ಮಾಳು ಅವರು ಮನೆಯಲ್ಲಿ ಇದ್ದಾರೆ ಎಂದು ಗೊತ್ತಾಗುತ್ತಿರಲಿಲ್ಲ ಯಾವತ್ತೂ ಬಿಗ್ ಬಾಸ್ ಮನೆಯ ಒಳಗಡೆ ಪ್ರೇಕ್ಷಕರು ಎಂಟ್ರಿ ಆದ್ರೂ ಆ ಸಮಯದಿಂದ ಮಾಳು ಬಹಳನೇ ಆಕ್ಟಿವ್ ಆಗಿದ್ದಾರೆ ತನ್ನ ಮಾತಿನಿಂದ ಮನೆಯಲ್ಲಿ ತಾನು ಇದ್ದೀನಿ ಅಂತ ತೋರಿಸಿ ಕೊಡುತ್ತಿದ್ದಾರೆ. ಇನ್ನು ಕ್ಯಾಪ್ಟನ್ ಪಟ್ಟವನ್ನು ಏರಿದ ನಂತರ ಮಾಳು ಅವರು ಗಿಲ್ಲಿ ಅವರನ್ನು ಟಾರ್ಗೆಟ್ ಮಾಡಿರುವ ತರಹ ಕಾಣಿಸಿಕೊಳ್ಳುತ್ತಾರೆ ಇನ್ನು, ಮನೆ ಮಂದಿ ಎಲ್ಲಾ ಕೂಡ ಸೈಲೆಂಟ್ ಆಗಿದ್ದಂತಹ ಮಾಳು ಅವರ ವರ್ತನೆಯನ್ನು ನೋಡಿ ಶಾಕ್ ಆಗಿದ್ದಾರೆ, ಇನ್ನೂ ರಿಲೀಸ್ ಆದಂತಹ ಪ್ರೊಮೋ ದಲ್ಲಿ ಮಾಳು ಹಾಗೂ ರಾಶಿಕಾ ಜಗಳ ಮಾಡುತ್ತಿರುವುದು ನೋಡಬಹುದು. ಇನ್ನೂ ಕಾಕ್ರೋಚ್ ಸುಧಿ ಅವರು ಕೂಡ ಮಾಳು ಅವರನ್ನು ಮಾಡಿದ ನಂತರ ತುಂಬಾ ಪ್ರಾಬ್ಲೆಮ್ಸ್ ಆಗಿದೆ ಅಂತ ಹೇಳಿಕೊಳ್ಳುತ್ತಾರೆ. ಇದರಿಂದ ಮಾಳು ಅವರನ್ನು ಮನೆಯವರೆಲ್ಲರೂ ಕೂಡ ಟಾರ್ಗೆಟ್ ಮಾಡಿರುವ ಹಾಗೆ ಕಾಣುತ್ತದೆ.

ಹಳ್ಳಿಯ ಮುಗ್ಧನಾ ಮಾಳು..?

ತನ್ನ ಭಾಷೆ ತನ್ನ ಹಳ್ಳಿಯ ಮುಗ್ಧತೆಯನ್ನು ಮಾಳು ನಿಪನಾಳ ಅವರು ಮನೆಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಿಗ್ ಬಾಸ್ ನೋಡುವ ಜನರ ಮನಸ್ಸನ್ನು ಇವರು ಗೆಲ್ಲುತ್ತಿದ್ದಾರೆ ಅಂತ ಮೇಲ್ನೋಟಕ್ಕೆ ಅನಿಸುತ್ತದೆ. ಕಿಚ್ಚ ಸುದೀಪ್ ಅವರು ಕೂಡ ವೇದಿಕೆಯಲ್ಲಿ ಈ ಹಿಂದೆ ಮಾಳು ಅವರನ್ನು ಹೊಗಳಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಆಚೆ  ತನ್ನ ಹಾಡುಗಳಿಂದ ಜನರ ಪ್ರೀತಿ ಗಳಿಸಿದ್ದಾರೆ. ಇನ್ನು ಮನೆಯೊಳಗಡೆ ಕೂಡ ಆಗಾಗ ತನ್ನ ಹಾಡುಗಳಿಂದ ಜನರ ಮನಸ್ಸನ್ನು ಗೆಲ್ಲಲು ಟ್ರೈ ಮಾಡುತ್ತಾ ಇರುತ್ತಾರೆ. ಹೀಗಾಗಿ ಮಾಳು ಅವರು ಪ್ರತಿ ವಾರದಲ್ಲೂ ಕೂಡ ಸೇಫ್ ಆಗಿ ಆಟ ಆಡುತ್ತಿದ್ದಾರೆ. ನಿಮಗೆ ಮಾಳು ನಿಪನಾಳ ಅವರು ಇಷ್ಟವಾಗುತ್ತಾರಾ? ಅವರ ಆಟವನ್ನು ನೋಡಿ ನಿಮಗೆ ಏನನಿಸುತ್ತದೆ ತಿಳಿಸಿ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page