ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಡುಪಿ: ಪಬ್‌ ಬಳಿ ಹೊಡೆದಾಟ – ನಾಲ್ವರ ಬಂಧನ

ಉಡುಪಿ: ರೆಸ್ಟೋರೆಂಟ್ ಮುಂಭಾಗದಲ್ಲಿ ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನ.8ರಂದು ರಾತ್ರಿ ಈಶ್ವನಗರದ ಬಳಿ ಇರುವ ಡೌನ್ ಟೌನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ಘಟನೆ ನಡೆದಿತ್ತು.

ಚಂದನ್ ಸಿ ಸಾಲ್ಯಾನ್, ಅಮರ್ ಶೆಟ್ಟಿ, ಧನುಷ್ ಮತ್ತು ಅಜಯ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾರ್ ನಲ್ಲಿ ಅಮ‌ರ್ ಶೆಟ್ಟಿ, ಧನುಷ್, ನಿತೇಶ್, ಸುಜನ್, ನಿನಾದ್ ಅಜಯ್ ಊಟ ಮಾಡುತ್ತಿರುವಾಗ ಚಂದನ್ ಎಂಬಾತನ ಕೈ ಅಮ‌ರ್ ಶೆಟ್ಟಿಯ ಮೈಗೆ ತಾಗಿದೆ. ಈ ಕ್ಷುಲ್ಲಕ ವಿಚಾರದಲ್ಲಿ ರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ASI ಮೋಹನ್ ದಾಸ್‌ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: Vitla: ಚರಂಡಿಗೆ ಬಿದ್ದ ವ್ಯಕ್ತಿ ದುರ್ಮರಣ

===============

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page