ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bangalore : ಮರಗಳನ್ನು ಕಡಿದು‌ ಹೂವಿನ ಮಾರ್ಕೆಟ್ ಮಾಡೋದು ಎಷ್ಟೊಂದು ಸರಿ ?

Bangalore : ಪರಿಸರ ದಿನಾಚರಣೆ ದಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಎಲ್ಲರೂ ಮುಂದೆ ಹೋಗುತ್ತಾರೆ. ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ ಹಾಗೂ ಗಿಡ ಮರ ಬೆಳೆಸಿ ಎಂದು ದೊಡ್ಡದಾಗಿ‌‌ ಮಾತನಾಡ್ತಾರೆ. ಆದ್ರೆ ಇದು ಕೇವಲ‌ ಮಾತಿಗೆ ಸೀಮಿತ ಆದ್ರೆ ಹೇಗೆ ?

ಹೌದು….ಯಲಹಂಕ ಬಳಿಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರಾಜ್ಯ ಸರ್ಕಾರ ಐದು ಎಕರೆಯಲ್ಲಿ ಹೂವಿನ ಮಾರ್ಕೆಟ್ ಮಾಡಲು ತೀರ್ಮಾನಿಸಿದ್ದು, ಇದಕ್ಕಾಗಿ ಇಲಾಖೆ 942 ಮರಗಳನ್ನು ಕಡಿಯಲು ಸಿದ್ಧತೆ ಮಾಡಿಕೊಂಡಿದೆ. ಈ ಸಲುವಾಗಿ ತೋಟಗಾರಿಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನವಂಬರ್ 3 ರಂದು ಎಪಿಎಂಸಿ ಯ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳು ಕ್ಯಾಂಪಸ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಇಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ ಒಳಗಾಗಿ ಹೊಸ ಮಾರುಕಟ್ಟೆಗಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಮಾರುಕಟ್ಟೆ ಪ್ರಾಜೆಕ್ಟ್ ಕೈಬಿಡುವಂತೆ ವಿದ್ಯಾರ್ಥಿಗಳು ಮತ್ತು ಪರಿಸರ ಹೋರಾಟಗಾರರು ಈ ಸಲುವಾಗಿ ಪ್ರತಿಭಟನೆ ಮಾಡಿದ್ದಾರೆ. ಮರಗಳನ್ನು ಕಡಿಯದಂತೆ ಆನ್ಲೈನ್ ನಲ್ಲಿ ಕ್ಯಾಂಪೇನ್ ಮಾಡಿ ಎರಡು ಸಾವಿರಕ್ಕೂ ಅಧಿಕ ಸಹಿಗಳ ಸಂಗ್ರಹವನ್ನು ಮಾಡಲಾಗಿರುತ್ತದೆ. ಎಲ್ಲರೂ ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳ ಈ ಹೋರಾಟಕ್ಕೆ‌ ಶಕ್ತಿ ಹೆಚ್ಚಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಬಳಸಲಾಗಿದ್ದ ಹಲಸು, ಮಾವು,‌ ಗೋಡಂಬಿ, ತೆಂಗು ಇತ್ಯಾದಿ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದ್ದು ವಿದ್ಯಾರ್ಥಿಗಳು ನೊಂದುಕೊಂಡಿರುವುದು ಕಂಡುಬಂದಿದೆ. ಒಂದು ವೇಳೆ ಜಿಕೆವಿಕೆ ಕ್ಯಾಂಪಸ್ ನಲ್ಲಿ ಮಾರುಕಟ್ಟೆ ಬಂದರೆ ತುಂಬಾ ಕಷ್ಟವಾಗುತ್ತದೆ‌ ಎಂದು ವರದಿಯಾಗಿರುತ್ತದೆ. ಇಷ್ಟೆಲ್ಲಾ ಮರಗಳನ್ನು ನೆಲಕುರುಳಿಸಿ‌ ಕಟ್ಟುವ‌ ಮಾರುಕಟ್ಟೆಯ ಬಗ್ಗೆ ವಿದ್ಯಾರ್ಥಿಗಳು ಕೆಂಡಾಮಂಡಲವಾಗಿದ್ದಾರೆ.

ಇದನ್ನೂ ಓದಿ :T20 Cricket : ವಿಶ್ವಕಪ್ ಟಿ 20 – 2026ಕ್ಕೆ ನಿಗದಿಯಾಯ್ತು ದಿನ :‌ ಕ್ರಿಕೆಟ್ ಅಭಿಮಾನಿಗಳಿಗಿದು ಸಿಹಿ ಸುದ್ದಿ

………….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/zBY4CXdK86U?si=njDy5b6YvC72mp8Y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page