ಬ್ರೇಕಿಂಗ್ ನ್ಯೂಸ್
ದೇಶ

T20 Cricket : ವಿಶ್ವಕಪ್ ಟಿ 20 – 2026ಕ್ಕೆ ನಿಗದಿಯಾಯ್ತು ದಿನ :‌ ಕ್ರಿಕೆಟ್ ಅಭಿಮಾನಿಗಳಿಗಿದು ಸಿಹಿ ಸುದ್ದಿ

T20 Cricket: ಟಿ 20 ವಲ್ಡ್ ಕಪ್ 2026 ರ ದಿನ ನಿಗದಿಯನ್ನು ಮಾಡಲಾಗಿದೆ. ಪ್ರೇಕ್ಷಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಆತುರದಿಂದ ಕಾಯುತ್ತಿರುವ ದಿನಾಂಕವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ ನಲ್ಲಿ 20 ತಂಡಗಳು ಭಾಗವಹಿಸಲಿದ್ದು, ಈ ತಂಡಗಳ ನಡುವಿನ ಕದನವು ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನಡೆಯಲಿದ್ದು ಇದಕ್ಕಾಗಿ ದಿನಾಂಕವನ್ನು ನಿಗದಿ ಮಾಡಲಾಗಿದೆ ಹಾಗೂ ಅದರ ಅಧಿಕೃತ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದೂ ವರದಿಯಾಗಿದೆ.

ಬಹು ನಿರೀಕ್ಷಿತ ಟಿ 20 ವಿಶ್ವಕಪ್ ಫೆಬ್ರವರಿ 7ರಿಂದ ಶುರುವಾಗಲಿದ್ದು, ಮೊದಲ ಪಂದ್ಯಕ್ಕೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಲಿದೆ. ಸೆಮಿಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಫೆಬ್ರವರಿ 7 ರಿಂದ ಮಾರ್ಚ್ 8 ರ ನಡುವೆ ಮುಂಬರುವ ಟಿ 20 ವಿಶ್ವಕಪ್ ಆಯೋಜಿಸಲು ಐಸಿಸಿ ಮತ್ತು ಬಿಸಿಸಿಐ ನಿರ್ಧರಿಸಿದ್ದು ಶೀರ್ಘದಲ್ಲೇ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಟಿ 20 ವಿಶ್ವಕಪ್ ನಲ್ಲಿ ಕಣಕ್ಕಿಳಿಯುವ ತಂಡಗಳು : ಭಾರತ, ಶ್ರೀಲಂಕಾ, ‌ಪಾಕಿಸ್ತಾನ್, ಬಾಂಗ್ಲಾದೇಶ, ಆಸ್ಟ್ರೇಲಿಯಾ, ‌ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ, ಸೌತ್ ಆಫ್ರಿಕಾ, ಯುಎಸ್ ಎ, ಕೆನಡಾ, ನೆದರ್ ಲೆಂಡ್ಸ್, ಇಟಲಿ,‌ ನಮೀಬಿಯಾ, ಝಿಂಬಾಬ್ವೆ ನೇಪಾಳ, ಒಮಾನ್ ಮತ್ತು ಯುಎಇ ಎಂದು ವರದಿಯಾಗಿದೆ.

ಇದನ್ನೂ ಓದಿ :Kempegowda ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್‌; ಬಿಜೆಪಿ ಗರಂ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=njDy5b6YvC72mp8Y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page