Bengaluru: ಕಾಂತಾರ ಸಿನಿಮಾಗೆ ತನ್ನ ಸುಮಧುರ ಕಂಠದಿಂದ ಹಾಡಿದ ಗಾಯಕಿ ಅನನ್ಯ ಭಟ್ ತಿರುಪತಿಯಲ್ಲಿ ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್, ಡ್ರಮ್ಮರ್ ಮಂಜು ಅವರನ್ನು ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.
ಕೆಜಿಎಫ್, ಕಾಂತಾರ ಹಾಡುಗಳ ಗಾಯಕಿ ಅನನ್ಯ ಭಟ್!
ಅನನ್ಯ ಭಟ್ ಬಗ್ಗೆ ನೀವು ಕೇಳಿರ್ತೀರಿ, ಕೆಜಿಎಫ್, ಕಾಂತಾರ, ಸೋಜುಗದ ಸೂಜಿ ಮಲ್ಲಿಗೆ ಹೀಗೆ ಹತ್ತು ಹಲವು ಗೀತೆಗಳಿಗೆ ಧ್ವನಿಯಾದ ಗಾಯಕಿ ಅನನ್ಯ ಭಟ್ ನಿನ್ನೆ ಹಸೆಮಣೆ ಏರಿದ್ದಾರೆ. ತಿರುಪತಿಯಲ್ಲಿ ಕುಟುಂಬಸ್ಥರು, ಆಪ್ತ ಬಳಗದ ಸಮ್ಮುಖದಲ್ಲಿ ಬಹಳ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅನನ್ಯ ಭಟ್ ಮದುವೆಯಾದ ಹುಡುಗ ಯಾರು..?
ಇನ್ನು ಇಂಟರ್‌ನ್ಯಾಷನಲ್ ಮ್ಯೂಜಿಷಿಯನ್, ಡ್ರಮ್ಮರ್ ಮಂಜು ಅವರನ್ನಅನನ್ಯ ಭಟ್ ಮದುವೆ ಆಗಿದ್ದಾರೆ. ಸರಳ ವಿವಾಹವು ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕರು, ಪಂಡಿತರು ಆದ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ವಿವಾಹವಾಗಿದ್ದಾರೆ.ಅನನ್ಯ ಭಟ್ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಚಲನಚಿತ್ರ ಗೀತೆ, ಭಕ್ತಿ ಗೀತೆ, ಜಾನಪದ ಗೀತೆಗಳನ್ನ ತಮ್ಮ ಮಧುರ ಕಂಠದಿಂದ ಹಾಡಿ ಖ್ಯಾತಿ ಪಡೆದಿರುವ ಅನನ್ಯ ಭಟ್ ತಮ್ಮದೇ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಅನನ್ಯ ಭಟ್ ಮಂಜು ಅವರನ್ನು ವಿವಾಹವಾಗಿದ್ದಾರೆ. ‘ಕೆಜಿಎಫ್’ ಮತ್ತು ‘ಕಾಂತಾರ’ ಸೇರಿದಂತೆ ಹಲವು ಜನಪ್ರಿಯ ಕನ್ನಡ ಚಲನಚಿತ್ರಗಳ ಗೀತೆಗಳನ್ನು ಹಾಡಿದ್ದಾರೆ. ರಾಮ ರಾಮಾ ರೇ’ ಚಿತ್ರದ ‘ನಮ್ಮ ಕಾಯೋ ದೇವನೆ’ ಹಾಡಿಗೆ 64ನೇ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. ‘ಕೆಜಿಎಫ್’ ಗೀತೆಗಾಗಿ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ಇದನ್ನೂ ಓದಿ: ಜಿಮ್ ಟ್ರೈನರ್ ಅರುಣ್ ಜೊತೆ ಹಸೆಮಣೆ ಏರಿದ ಅಮೃತವರ್ಷಿಣಿ ರಜನಿ..!
ಇನ್ನು ಅನನ್ಯ ಭಟ್, ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲದೇ, ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿಯೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಗಾಯನದ ಜೊತೆಗೆ ಅನನ್ಯ ಭಟ್ ಫ್ಯಾಶನ್ ಡಿಸೈನರ್ ಹಾಗೂ ಆಯುರ್ವೇದಿಕ್ ಡಾಕ್ಟರ್ ಕೂಡ ಹೌದು. ರಾಜು ಅನಂತಸ್ವಾಮಿ ಗರಡಿಯಲ್ಲಿ ಪಳಗಿರುವ ಅನನ್ಯ ಭಟ್, ಸುಮಧುರ ಹಾಡುಗಳಿಗೆ ದನಿಯಾಗಬೇಕು ಎಂಬ ಇಚ್ಛೆ ಹೊಂದಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











