ಬ್ರೇಕಿಂಗ್ ನ್ಯೂಸ್
ಕರ್ನಾಟಕ

Actress Rajani: ಜಿಮ್ ಟ್ರೈನರ್ ಅರುಣ್ ಜೊತೆ ಹಸೆಮಣೆ ಏರಿದ ಅಮೃತವರ್ಷಿಣಿ ರಜನಿ..!

Actress Rajani: ಅಮೃತವರ್ಷಿಣಿ ಖ್ಯಾತಿಯ ನಟಿ ರಜನಿತನ್ನ ಗೆಳೆಯ ಜಿಮ್ ಟ್ರೈನರ್ ಅರುಣ್ ಜೊತೆ ಹಸೆಮಣೆ ಏರಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆಯಿಂದಲೂ ಈ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು, ಇದೀಗ ಇದಕ್ಕೆಲ್ಲ ಉತ್ತರ ಸಿಕ್ಕಿದೆ.

ಜಿಮ್‌ ಟ್ರೈನರ್‌ ಜೊತೆ ರಜನಿ ಮದ್ವೆ..!

ನಟಿ ರಜಿನಿ ಹಾಗೂ ಜಿಮ್ ಟ್ರೈನರ್ ಅರುಣ್ ಮದ್ವೆ ಆಗಿದ್ದಾರೆ.  ಯಾವುದೇ ಸದ್ದು-ಗದ್ದಲವೇ ಇಲ್ಲದೆ ಆಪ್ತರ ಸಮ್ಮುಖದಲ್ಲಿಯೇ ಇಬ್ಬರು ಮದುವೆಯಾಗಿದ್ದಾರೆ. ಇಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುತ್ತಾ ಜನರಿಗೆ ಪರಿಚಯ ಆಗಿದ್ದರು.  ವೀಡಿಯೋಗಳು ವೈರಲ್‌ ಕೂಡ ಆಗಿತ್ತು.  ಇಂದು ಬೆಳಗ್ಗೆ 9.30 ರಿಂದ 10.30 ರ ಶುಭ ಮುಹೂರ್ತದಲ್ಲಿಯೇ ಇವರಿಬ್ಬರ ಮದುವೆ ನಡೆದಿದೆ.  ಕಳೆದ ಎರಡ್ಮೂರು ವರ್ಷಗಳಿಂದಲೂ ಈ ಜೋಡಿ ರೀಲ್ಸ್ ಮಾಡ್ತಾ ಜನರ ಪ್ರೀತಿ ಗಳಿಸಿದ್ದರು. ಆದರೆ, ಇಬ್ಬರೂ ಕೂಡ ನಾವು ಲವರ್ಸ್ ಅಲ್ಲ ಸ್ನೇಹಿತರು ಅಂತಲೇ ಹೇಳಿಕೊಂಡಿದ್ದರು. ಇವರನ್ನು ನೋಡಿದ ಜನ, ಇವರು ಸ್ನೇಹಿತರು ಅಲ್ವೇ ಅಲ್ಲ. ಲವರ್ಸ್ ಅನ್ನೋದೇ ಹೆಚ್ಚಿನ ಜನಕ್ಕೆ ಇದ್ದ ಅನುಮಾನವೇ ಆಗಿತ್ತು. ಆದರೆ,  ಏನೂ ಹೇಳಿಕೊಳ್ಳದ ಈ ಜೋಡಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಷಿಯ್ ಮೀಡಿಯಾದಲ್ಲಿ ಈ ಜೋಡಿ ಸಖತ್ ಫೇಮಸ್ ಆಗಿದೆ.  ಅರುಣ್-ರಜನಿ ರೀಲ್ಸ್ ಜೋಡಿ ರೀಲ್ಸ್ ನೋಡಿದವರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಂತಹ ಕಂಟೆಂಟ್‌ಗಳನ್ನೆ ಇವರು ಕ್ರಿಯೇಟ್ ಮಾಡುತ್ತಿರುತ್ತಾರೆ.

ಅಮೃತವರ್ಷಿಣಿ ತಂದ ಕೀರ್ತಿ ಅಪಾರ..!

ಇಂದು ಬೆಂಗಳೂರಿನಲ್ಲಿಯೇ  ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗಳು, ಸಾಂಪ್ರದಾಯಿವಾಗಿಯೇ ಇವರ ವಿವಾಹ ಆಗಿದೆ. ಆದರೆ, ಅದ್ದೂರಿ ಏನು ಅಲ್ಲ. ಸಿಂಪಲ್ ಆಗಿಯೇ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಇವರು ಮದುವೆಯ ಫೋಟೋ ಹಾಗೂ ವಿಡಿಯೋ ಶೇರ್ ಆಗಿವೆ. ರಜನಿ ಸದ್ಯ ಸ್ಟಾರ್ ಸುವರ್ಣ ವಾಹಿನಿಯ ನೀ ಇರಲು ಜೊತೆಯಲ್ಲಿ ಸೀರಿಯಲ್ ಮಾಡ್ತಿದ್ದಾರೆ. ಈ ಸೀರಿಯಲ್ ಅಲ್ಲಿ ಖಡಕ್ ಅತ್ತಿಗೆಯ ಪಾತ್ರವನ್ನೆ ಮಾಡುತ್ತಿದ್ದಾರೆ.

ಇನ್ನು ರಜನಿ ಅಮೃತವರ್ಷಿಣಿ ಧಾರಾವಾಹಿ ಮೂಲಕ ಅಪಾರ ಜನರ ಪ್ರೀತಿ ಗಳಿಸಿದ್ದಾರೆ. ಇದರ ಜೊತೆಗೆ ರಜನಿ ಫಿಟ್‌ನೆಸ್‌ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆ. ಪ್ರತೀ ದಿನ  ಯೋಗ ಮಾಡುತ್ತಾರೆ. ವರ್ಕೌಟ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದ ರಜನಿ ಅವರಿಗೆ  ಕೆಟ್ಟ ಕಾಮೆಂಟ್‌ಗಳೂ ಬರುತ್ತಿದ್ದವು. ಇದೀಗ ರಜನಿ ಜೀವನದಲ್ಲಿ ಗೆಳೆಯ ಅರುಣ್ ಗೌಡ ಜೊತೆ ಸಪ್ತಪದಿ ತುಳಿದಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page