ಬೆಂಗಳೂರು : ಕರ್ನಾಟಕದಲ್ಲಿ ಈ ಬಾರಿ ದಸರಾ ರಜೆ (Karnataka Dasara Holiday) ಅವಧಿಗೂ ಮೊದಲೇ ನೀಡಲಾಗುತ್ತಿದೆ. ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರ ವರೆಗೆ ಕರ್ನಾಟಕ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಕರ್ನಾಟದಲ್ಲಿ ಮಕ್ಕಳಿಗೆ ದಸರಾ ರಜೆ ನೀಡುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತವಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ, ಕರ್ನಾಟಕದ ಶಾಲೆಗಳಿಗೆ ದಸರಾ ರಜೆ ಸೆಪ್ಟೆಂಬರ್ 20, 2025 ರಿಂದ ಅಕ್ಟೋಬರ್ 7, 2025 ರವರೆಗೆ ಇರುತ್ತದೆ. ಒಟ್ಟು 18 ದಿನಗಳ ಕಾಲ ರಜೆ ಇರಲಿದೆ.
ಅಕ್ಟೋಬರ್ 08, 2025ಕ್ಕೆ ಶಾಲೆಗಳು ಪುನರಾರಂಭಗೊಳ್ಳಲಿದೆ. ಈ ರಜೆಯ ಅವಧಿಯು ದಸರಾ ಹಬ್ಬದ ಜೊತೆಗೆ ಗಾಂಧಿ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿಯಂತಹ ಪ್ರಮುಖ ರಜೆಗಳನ್ನು ಒಳಗೊಂಡಿರುತ್ತದೆ.
ಕರ್ನಾಟಕದ ಶಿಕ್ಷಣ ಇಲಾಖೆ ಹೊರಡಿಸಿರುವ ದಸರಾ ರಜೆಯ ಆದೇಶವು ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮವನ್ನು ಅನುಸರಿಸುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯಿಸುತ್ತದೆ.
Karnataka Dasara Holiday : ಮಂಗಳೂರಲ್ಲೂ ಮಕ್ಕಳಿಗೆ ದಸರಾ ಸಂಭ್ರಮ
ಕಳೆದ ಕೆಲವು ವರ್ಷಗಳಿಂದಲೂ ದಸರಾ ರಜೆ ನೀಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗುತ್ತಿತ್ತು. ಹೀಗಾಗಿ ಮಂಗಳೂರು, ಮೈಸೂರಿಗೆ ದಸರಾ ರಜೆಯ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುತ್ತಿದೆ. ಆದರೆ ಈ ಬಾರಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಏಕರೂಪದ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.
ನವರಾತ್ರಿ ಆರಂಭಗೊಂಡು, ವಿಜಯ ದಶಮಿಯವರೆಗೂ ಕೂಡ ಕರ್ನಾಟಕದ ಎಲ್ಲಾ ಶಾಲೆಗಳಿಗೆ ದಸರಾ ರಜೆ ಇರಲಿದ್ದು, ಮಕ್ಕಳು ಈ ಬಾರಿ ಖುಷಿಯಿಂದಲೇ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
Karnataka Dasara Holiday Start Till September 20 2025











