ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Kempegowda ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್‌; ಬಿಜೆಪಿ ಗರಂ

Namaz in Public: ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್‌ ಮಾಡುವುದು ಹೊಸತೇನಲ್ಲ. ರಸ್ತೆ, ಮೆಟ್ರೋ, ಮೈದಾನ ಹೀಗೆ ಅನೇಕ ಕಡೆ ಸಾರ್ವಜನಿಕವಾಗಿ ನಮಾಜ್‌ ಮಾಡಿದ ಘಟನೆಗಳು ನಡೆದಿತ್ತು. ಈಗ ವಿಮಾನ ನಿಲ್ದಾಣದಲ್ಲೇ ನಮಾಜ್‌ ಮಾಡಿರೋ ಘಟನೆ ನಡೆದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಒಳಗಡೆ ನಮಾಜ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ನಮಾಜ್ ಮಾಡಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ನಮಾಜ್ ಮಾಡಲು ಅನುಮತಿ ಇದ್ಯಾ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಪ್ರಶ್ನಿಸಿ ಕಿಡಿಕಾರಿದ್ದಾರೆ.

 

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಆರ್‌ಎಸ್‌ಎಸ್‌ ಪಥಸಂಚಲನ ಮಾಡೋದಕ್ಕೆ ಅನುಮತಿ ಕೊಡಲ್ಲ. ಆದರೆ ಅತ್ಯಂತ ಭದ್ರತಾ ಪ್ರದೇಶವಾದ ಏರ್‌ಪೋರ್ಟ್‌ನಲ್ಲಿ ನಮಾಜ್‌ ಮಾಡುವುದು ಸರಿಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ ಅನುಮತಿ ಕೊಟ್ಟಿದ್ದೀರಾ? ಆರ್‌ಎಸ್‌ಎಸ್‌ ಪಥಸಂಚಲನ ವಿರೋಧಿಸುವ ನಿಮ್ಮ ಸರ್ಕಾರ ನಮಾಜ್ ಮಾಡಲು ಬಿಟ್ಟಿದ್ದೇಕೆ? ಕಾಂಗ್ರೆಸ್‌ ನಮಾಜ್ ಮಾಡುವುದನ್ನು ಕಂಡು ಕಾಣದಂತೆ ಕುಳಿತಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

https://x.com/vijayrpbjp/status/1987556778377465937?s=20

ಈ ವ್ಯಕ್ತಿಗಳು ಹೆಚ್ಚಿನ ಭದ್ರತೆಯ ವಿಮಾನ ನಿಲ್ದಾಣ ವಲಯದಲ್ಲಿ ನಮಾಜ್ ಮಾಡಲು ಪೂರ್ವಾನುಮತಿ ಪಡೆದಿದ್ದಾರೆಯೇ? ಸಂಬಂಧಿತ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ ಆರ್‌ಎಸ್‌ಎಸ್ ಪಥ ಸಂಚಲನೆ ನಡೆಸಿದಾಗ ಸರ್ಕಾರ ಏಕೆ ಆಕ್ಷೇಪಿಸುತ್ತದೆ. ಆದರೆ ನಿರ್ಬಂಧಿತ ಸಾರ್ವಜನಿಕ ಪ್ರದೇಶದಲ್ಲಿ ಅಂತಹ ಚಟುವಟಿಕೆಗಳಿಗೆ ಕಣ್ಣು ಮುಚ್ಚುತ್ತದೆ? ಇದು ಅಂತಹ ಸೂಕ್ಷ್ಮ ವಲಯದಲ್ಲಿ ಗಂಭೀರ ಭದ್ರತಾ ಕಾಳಜಿಯನ್ನು ಉಂಟುಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Job : ಸರಕಾರಿ ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್…!

================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=njDy5b6YvC72mp8Y

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page