ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Bengaluru: ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿ: ಪಿ.ರಾಜೀವ್

Bengaluru: ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಮೆಕ್ಕೆಜೋಳ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಸರಕಾರ ಧಾವಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಮಳೆಗಾಗಿ ಕಾಯುತ್ತಿದ್ದ ಕೃಷಿಕರು : ಸುಳ್ಯದಲ್ಲಿ ಸುರಿದ ಭಾರೀ ಮಳೆ

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುತ್ತಾರೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮೆಕ್ಕೆ ಜೋಳ ಬೆಳೆಯುವ ರಾಜ್ಯ ಕರ್ನಾಟಕ ಎಂದು ಗಮನಕ್ಕೆ ತಂದರು. ರಾಜ್ಯದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆಗಳು ಎಂದರು.

ಇದನ್ನೂ ಓದಿ : ಚಳಿಗಾಲದಲ್ಲಿ ದೇಹದ ಕ್ಯಾಲೋರಿ ಕರಗಿಸಲು ಇಲ್ಲಿದೆ ಸುಲಭೋಪಾಯ…!

ಅಕ್ಟೋಬರ್ 15ಕ್ಕೆ ಕೇಂದ್ರ ಸರಕಾರ ಎಂಎಸ್‍ಪಿ ಘೋಷಿಸಿದೆ. ಕೇಂದ್ರ ಸರ್ಕಾರ ಕ್ವಿಂಟಾಲ್ ಗೆ ರೂ. 2,400 ಘೋಷಣೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ ರೂ. 1,500 ರಿಂದ 1,700 ಇದೆ. ಇವತ್ತಿನ ಮಾರುಕಟ್ಟೆ ಬೆಲೆ ಮತ್ತು ಎಂಎಸ್‍ಪಿಗೆ ಹೋಲಿಸಿದರೆ ರೈತರು ಪ್ರತಿ ಕ್ವಿಂಟಾಲ್ ಗೆ ಸುಮಾರು 700 ರೂ. ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರಕಾರವೇ ಮೆಕ್ಕೆಜೋಳ ಖರೀದಿಸಬೇಕಿತ್ತು. ತಕ್ಷಣವೇ ಸರಕಾರವು ಮೆಕ್ಕೆಜೋಳ ಖರೀದಿಸಬೇಕು. ಇಲ್ಲದಿದ್ದರೆ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆ. ತಕ್ಷಣವೇ ಅಂದರೆ ನಾಳೆಯಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: 21 ಲಕ್ಷ ರೂ. ದಂಡದಿಂದ 4 ಸಾವಿರ ರೂ. ಗೆ ಇಳಿದ ಚಲನ್ ಕಥೆ…!

ಒಂದೇ ಒಂದು ಖರೀದಿ ಕೇಂದ್ರವನ್ನು ಸರಕಾರ ತೆರೆದಿಲ್ಲ. ರಾಜ್ಯದಲ್ಲಿ ಬಹುತೇಕ 39 ಲಕ್ಷ ಟನ್ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಸಣ್ಣ ರೈತರಿಗೆ ಮೆಕ್ಕೆಜೋಳ ದಾಸ್ತಾನಿಗೆ ವ್ಯವಸ್ಥೆ ಇಲ್ಲ; ಅನಿವಾರ್ಯವಾಗಿ ರೈತರು ಕಡಿಮೆ ಬೆಲೆಗೆ ಮೆಕ್ಕೆಜೋಳ ಮಾರಾಟ ಮಾಡುವಂತಾಗಿದೆ ಎಂದು ತಿಳಿಸಿದರು. ದಲ್ಲಾಳಿಗಳ ಜೊತೆ ಈ ಸರಕಾರ ಷಾಮೀಲಾಗಿದೆ ಎಂದು ಅವರು ಆರೋಪಿಸಿದರು. ಮಹಾರಾಷ್ಟ್ರದಲ್ಲಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ರೈತರು ಬೀದಿಗೆ ಇಳಿದರೆ ಬಿಜೆಪಿ ರೈತರ ಪರ ನಿಲ್ಲಲಿದೆ ಎಂದು ಎಚ್ಚರಿಸಿದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page