ಬ್ರೇಕಿಂಗ್ ನ್ಯೂಸ್
ಸುಳ್ಯ

Sullia : ಮಳೆಗಾಗಿ ಕಾಯುತ್ತಿದ್ದ ಕೃಷಿಕರು : ಸುಳ್ಯದಲ್ಲಿ ಸುರಿದ ಭಾರೀ ಮಳೆ

Sullia : ನವೆಂಬರ್ ಆರಂಭವಾಗುತ್ತಿದ್ದಂತೆ ಮೊದಲ ವಾರದಲ್ಲಿ ಸ್ವಲ್ಪ ಚಳಿಯ ಅನುಭವ, ಸಂಜೆಯಾಗುತ್ತಿದ್ದಂತೆ ಮೋಡ‌ ಕವಿದ ವಾತಾವರಣದ ಜೊತೆ, ಇತ್ತೀಚೆಗೆ ಬಂದಿರುವ ಹವಾಮಾನ ವರದಿಯಂತೆ ನ.6 ರಿಂದ ಹನಿ ಮಳೆಯ ಜೊತೆ ಇಂದು ಸುಳ್ಯದಲ್ಲಿ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ವಾಹನ ಸವಾರರು ನಡುರಸ್ತೆಯಲ್ಲೇ ಪರದಾಡುವಂತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ, ಇಲ್ಲಿನ ಹಳೆಗೇಟು ಮುಖ್ಯ ರಸ್ತೆಯ ಬಳಿ ಸಂಪೂರ್ಣ ಕೆಸರುಮಯವಾಗಿದ್ದು, ರಸ್ತೆಯ ಹದಗೆಟ್ಟಿರುವುದೂ ಇದಕ್ಕೆ ಮುಖ್ಯ ಕಾರಣವಾಗಿದೆ. ಸುಳ್ಯದ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಈ ಕಾರಣ ಚರಂಡಿ, ರಸ್ತೆಗಳು ಮೊದಲೇ ಹದಗೆಟ್ಟ ಪರಿಸ್ಥಿತಿಯಲ್ಲಿದ್ದವು. ಈಗಾಗಲೇ ಮಳೆ ಸುರಿದ ಕಾರಣ ರಸ್ತೆಯ ಪಾಡು ಹೇಳತೀರದಾಗಿದೆ.

ಕೃಷಿಕರು ಮಳೆಗಾಗಿ ಕಾಯುತ್ತಿದ್ದು, ಕೆಲವೆಡೆ ಮಳೆ ಹನಿಯ ಅನುಭವವಾಗಿದ್ದು, ಸಂಜೆ ವಾತಾವರಣ ತಂಪಾಗಿದೆ. ಅಡಕೆ ಗಿಡ, ರಬ್ಬರ್ ಇನ್ನು ಕೆಲವೆಡೆ ಕಾಫಿ ಬೆಳೆಯುತ್ತಿರುವ ಕೃಷಿಕರು ಗೊಬ್ಬರ ಹಾಕಿರುವ ನೆಲೆಯಲ್ಲಿ ಮಳೆ ಹನಿಗಾಗಿ ಇಷ್ಟು ದಿನ ಮುಗಿಲು ನೋಡಿ ಕಾಯುವಂತ ಪರಿಸ್ಥಿತಿಯಿತ್ತು. ಇದೀಗ, ಸುಳ್ಯದಲ್ಲಿ ಬಂದಿರುವ ಮಳೆಯಿಂದಾಗಿ ಕೃಷಿಕರು ನೆಮ್ಮದಿಯಿಂದಿರಬಹುದಾಗಿದೆ.

ಇದನ್ನೂ ಓದಿ :Sullia : 2023 – 24 ನೇ ಸಾಲಿನ ಅರೆಭಾಷೆ ಪ್ರಶಸ್ತಿ ಘೋಷಣೆ

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=uhW0m4m6MEcfeGN7

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page