ಬ್ರೇಕಿಂಗ್ ನ್ಯೂಸ್
ಕರ್ನಾಟಕ

Winter : ಚಳಿಗಾಲದಲ್ಲಿ ದೇಹದ ಕ್ಯಾಲೋರಿ ಕರಗಿಸಲು ಇಲ್ಲಿದೆ ಸುಲಭೋಪಾಯ…!

Winter : ಚಳಿಗಾಲದಲ್ಲಿ ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ತೂಕ ನಿಯಂತ್ರಿಸಬಹುದಾಗಿದೆ. ಈ ಸಮಯದಲ್ಲಿ ಜನರು ಸೋಮಾರಿಗಳಾಗುತ್ತಾರೆ. ಅಷ್ಟೇ ಅಲ್ಲದೆ ಬೆಳಗ್ಗೆ ಬೇಗ ಏಳೋದಕ್ಕೂ ಉದಾಸೀನಗೊಳ್ಳುತ್ತೇವೆ. ಚಳಿ ಅಂತಾ ಹೊದಿಕೆ ಹೊದ್ದಿಕೊಂಡು ಮಲಗುತ್ತವೆ. ಹಾಗೆ ವರ್ಕೌಟ್ ಮಾಡೋದು ಸ್ಪಲ್ಪ ಕಡಿಮೆಯಾಗಿ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಚಳಿಗಾಲದ ಸೋಮಾರಿತನದಿಂದ ದೇಹದ ತೂಕ ಹೆಚ್ಚಳವಾಗುತ್ತದೆ.‌ಆದ್ರೆ ಚಳಿಗಾಲದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚಿಸಿದರೆ, ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕ್ಯಾಲೋರಿಯನ್ನು ಸರಳವಾಗಿ ಬರ್ನ್ ಮಾಡಬಹುದು;

ಈಗಿನ ಹವಾಮಾನ ನೋಡಿದ್ರೆ ಮುಂಚಿನಷ್ಟು ಚಳಿಯ ಅನುಭವ ಆಗಿರಲಿಕ್ಕಿಲ್ಲ. ಮೋಡ ಕವಿದ ವಾತಾವರಣ, ಬಿಸಿಲು ಮಿಶ್ರಣದ ಹವಾಮಾನವಿರುತ್ತದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಬೆಳಗ್ಗೆ ಚಳಿ ಬಹುತೇಕ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ವಾಕಿಂಗ್ ಮತ್ತು ವರ್ಕೌಟ್ ಮಾಡೋದು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಚಳಿ ಕಡಿಮೆಯಾದ ಮೇಲೆ ಅಥವಾ ಸಂಜೆಯ ಸಮಯ ವರ್ಕೌಟ್ ಮಾಡಬಹುದು. ಈ ಚಳಿಗಾಲದಲ್ಲಿಯೇ ತೂಕ ಕಡಿಮೆ ಮಾಡಿಕೊಳ್ಳುವ ಅವಕಾಶಗಳು ಅಧಿಕವಾಗಿರುತ್ತವೆ. ಈ ಸಮಯದಲ್ಲಿ ಕ್ಯಾಲೋರಿಯನ್ನು ಸರಳವಾಗಿ ಬರ್ನ್ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಬ್ಲಾಕ್ ಟೀ, ಕಾಫಿ ಕುಡಿಯಿರಿ;

ಚಳಿಗಾಲದ ಸಮಯ ನಿಮ್ಮನ್ನು ಹೆಚ್ಚು ತಿನ್ನಲು ಪ್ರೇರೇಪಿಸುತ್ತದೆ. ಹಸಿವಿನ ಕ್ರೇವಿಂಗ್‌ನಿಂದಾಗಿ ಕ್ಯಾಲೋರಿ ಬರ್ನ್ ಆಗುತ್ತಿರುತ್ತದೆ. ಹಾಗಾಗಿ ಸ್ವಲ್ಪ ವರ್ಕೌಟ್ ಮಾಡಿದ್ರೂ ತೂಕ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ನಾರಿನಂಶವಿರೋ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಇದರಲ್ಲಿನ ಫೈಬರ್ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದಾಗಿ ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಬಹುದು. ಚಳಿಗಾಲದಲ್ಲಿ ಬಿಸಿಯಾದ ಚಹಾ ಮತ್ತು ಕಾಫಿಯನ್ನು ಒಂದು ಕಪ್ ಹೆಚ್ಚಾಗಿ ಕುಡಿಯುತ್ತಾರೆ. ಆದ್ರೆ ಹಾಲು ಮತ್ತು ಸಕ್ಕರೆ ಹಾಕದಿರುವ ಬ್ಲಾಕ್ ಟೀ, ಕಾಫಿ ಕುಡಿಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಈ ಪಾನೀಯಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸೋದರ ಜೊತೆ ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ.

ಮನೆಗೆಲಸಗಳನ್ನು ಮಾಡುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು;

ಚಳಿಗಾಲದಲ್ಲಿ ಬಹುತೇಕರು ಬಿಸಿನೀರು ಕುಡಿಯುತ್ತಾರೆ. ಈ ಸಮಯದಲ್ಲಿ ತೂಕ ಇಳಿಸಿಕೊಳ್ಳಬೇಕಂದ್ರೆ ತಣ್ಣೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಪ್ರಕ್ರಿಯೆಯು ಕೆಜಿ ತೂಕ ಇಳಿಸಿಕೊಳ್ಳಲು ಅಗತ್ಯವಾದ ಹಲವು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿ ತಣ್ಣನೆ ನೀರು ಆಗದಿದ್ದರೂ ಸಾಮಾನ್ಯ ತಾಪಮಾನದಲ್ಲಿರುವ ನೀರು ಕುಡಿಯಬೇಕು. ಚಳಿಯಿಂದಾಗಿ ವರ್ಕೌಟ್ ಮಾಡಲು ಹೊರಗೆ ಹೋಗಲು ಆಗದಿದ್ದರೆ ಮನೆಯೊಳಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಕ್ಲೀನಿಂಗ್, ತೊಳೆಯುವುದು, ಒರೆಸುವುದು, ತೋಟಗಾರಿಕೆ ಮತ್ತು ಇತರ ಮನೆಗೆಲಸಗಳನ್ನು ಮಾಡುವುದರಿಂದ ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸಬಹುದು. ಪ್ರತಿ 30 ನಿಮಿಷಗಳಿಗೊಮ್ಮೆ ಎದ್ದು ಓಡಾಡಬೇಕು. ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದರೆ ಪ್ರತಿ ಅರ್ಧ ಗಂಟೆಗೊಮ್ಮೆ ಎದ್ದು ಓಡಾಡಬೇಕು. ಈ ಪ್ರಕ್ರಿಯೆ ತೂಕ ಇಳಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ :Parappana Agrahara : ಪರಪ್ಪನ ಅಗ್ರಹಾರದಲ್ಲಿ ಮುಗಿದಿಲ್ಲ ಕೈದಿಗಳ ಆತಿಥ್ಯ…!

…………..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=1ghZjx3pR0xM7eZZ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page