maddur Ganesh festival Lathi Charge : ಬೆಂಗಳೂರು : ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆಯ ವೇಳೆಯಲ್ಲಿ ಕಲ್ಲುತೂರಾಟ ನಡೆಸಿದವರ ವಿರುದ್ದ ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ. ಆದರೆ ಹಿಂದೂಗಳ ಮೇಲೆ ಕಾಂಗ್ರೆಸ್ ಲಾಠಿಚಾರ್ಜ್ ನಡೆಸಿದೆ ಎಂದು ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಣೇಶಮೂರ್ತಿಯ ವಿಸರ್ಜನೆಯ ವೇಳೆಯಲ್ಲಿ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ದುಷ್ಕರ್ಮಿಗಳ ಮೇಲೆ ಸರಕಾರ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆದರೆ ಕಲ್ಲುತೂರಾಟ ಖಂಡಿಸಿ ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ಕಾಂಗ್ರೆಸ್ ಲಾಠಿಚಾರ್ಜ್ ನಡೆಸಿದೆ ಎಂದು ಸುನಿಲ್ ಕುಮಾರ್ ಅವರು ಆರೋಫಿಸಿದ್ದಾರೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ (maddur Ganesh festival Lathi Charge) ನಡೆಸುವ ವೇಳೆಯಲ್ಲಿ ಮತಾಂಧರು ಕಲ್ಲು ತೂರಾಟ ನಡೆಸಿರುವುದು ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಪ್ರತಿವರ್ಷವೂ ಇಂತಹದ್ದೇ ಘಟನೆ ಮರುಕಳಿಸುತ್ತಿದೆ ಎಂದಿದ್ದಾರೆ.
ಹಿಂದೂಗಳ ಸಾಂಸ್ಕೃತಿಕ ಚಟುವಟಿಕೆಯ ಕುರಿತು ಅಸಹನೆ ಮತ್ತು ಅಸಹಿಷ್ಣತೆ ಹೆಚ್ಚುತ್ತಿದೆ. ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದುನ್ನು ನೋಡಿದ್ರೆ ಮಂಡ್ಯ ಜಿಹಾರಿ ಮನಸ್ಸು ಉಳ್ಳ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ.











