Traffic Rules : ಟ್ರಾಫಿಕ್ ಸಂಬಂಧಿತ ಅಧಿಕಾರಿಗಳು ಎಷ್ಟೇ ಜಾಗೃತಿಯನ್ನು ವಹಿಸಿದರೂ ವಾಹನ ಸವಾರರು ಆ ನಿಯಮಗಳನ್ನು ಕಿವಿಗೆ ಹಾಕಿಕೊಳ್ಳದೇ ರಸ್ತೆಯಲ್ಲಿ ವಾಹನ ಚಲಾಯಿಸುತ್ತಾ ಇರುತ್ತಾರೆ. ಆದರೆ, ಮುಜಫರ್ ನಗರದಲ್ಲಿ ಒಬ್ಬ ಸ್ಕೂಟರ್ ಸವಾರನು ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಬರೋಬ್ಬರಿ 21 ಲಕ್ಷ ರೂ. ದಂಡವನ್ನ ವಿಧಿಸಿ ಚಲನ್ ನೀಡಿದ್ದಾರೆ.
ದಂಡದ ಮೊತ್ತವನ್ನು ಕಂಡ ಸ್ಕೂಟರ್ ಸವಾರ ಆಶ್ಚರ್ಯ ಚಕಿತನಾಗಿದ್ದು, ಹೆಲ್ಮೆಟ್ ಧರಿಸದೆಯೇ ಜೊತೆಗೆ ವಾಹನದ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳದೇ ಸಂಚಾರಿಸಿದ್ದಾನೆಂದು, ಈ ವೇಳೆ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಈ ಕಾರಣ ದಂಡ ವಿಧಿಸಿ ಚಲನ್ ನೀಡಲಾಗಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಸ್ಕೂಟರ್ ನ ತೆರಿಗೆ, ವಿಮೆ ಮತ್ತು ಇತರ ದಾಖಲೆಗಳನ್ನು ಆತ ಹಲವಾರು ತಿಂಗಳುಗಳಿಂದ ನವೀಕರಿಸಿರುವುದಿಲ್ಲ. ಪರಿಣಾಮವಾಗಿ ಅದರ ಜೊತೆ ಸಂಚಾರ ನಿಯಮವನ್ನು ಕೂಡ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಇಲ್ಲಿ ಸಂಚಾರಿ ಪೊಲೀಸರು ಸ್ಕೂಟರ್ ಸವಾರನಿಗೆ ದಂಡ ವಿಧಿಸುವ ವೇಳೆ ಚಲನ್ ನಲ್ಲಿ ಮೋಟರು ವಾಹನ ಕಾಯ್ದೆ ಸೆಕ್ಷನ್ 207 ಅನ್ನು ಸೇರಿಸಲು ಮರೆತಿದ್ದರಿಂದ ಇಷ್ಟೊಂದು ದೊಡ್ಡ ಮೊತ್ತವಾಗಿ ಮಾರ್ಪಾಟಿತ್ತು ಎನ್ನಲಾಗಿದೆ.
ಆದರೆ ತನಿಖೆ ಪೂರ್ಣಗೊಂಡ ನಂತರ ಚಲನ್ ನೀಡಿದ ಸಬ್ ಇನ್ಸ್ಪೆಕ್ಟರ್ ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 27ನ್ನು ಸೇರಿಸಲು ಮರೆತಿರುವುದು ಗಮನಕ್ಕೆ ಬಂದಿದ್ದು ಬಳಿಕ ಸ್ಕೂಟರ್ ಸವಾರರಿಗೆ 21 ಲಕ್ಷದಿಂದ ದಂಡವು ನಾಲ್ಕು ಸಾವಿರ ರೂಪಾಯಿವರೆಗೆ ಇಳಿಸಲಾಯಿತು ಎಂದು ವರದಿಯಾಗಿದೆ. ಇಷ್ಟು ದೊಡ್ಡ ಚಲನ್ ಮೊತ್ತವನ್ನು ನೋಡಿದ ಸ್ಕೂಟರ್ ಸವಾರ ಆಶ್ಚರ್ಯ ಚಕಿತನಾಗಿ ಅದನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹರಿಬಿಟ್ಟು ಅದನ್ನು ವೈರಲ್ ಮಾಡಿರುತ್ತಾನೆ.
ಇದನ್ನೂ ಓದಿ :Kanakadasa Jayanti: ರಾಜ್ಯ ಬಿಜೆಪಿ ಕಚೇರಿಯಲ್ಲಿ ಕನಕದಾಸರ ಜಯಂತಿ..!
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=eN-uBG4rXhPOtTUK











