ಬ್ರೇಕಿಂಗ್ ನ್ಯೂಸ್
ದೇಶ

Online Business : ಲೋಹದ ಸೇಫ್ಟಿ ಫಿನ್ ಗೆ ಇಲ್ಲಿದೆ ಬರೋಬ್ಬರಿ 69 ಸಾವಿರ ರೂ.

Online Business : ಈಗಿನ ಸ್ಪರ್ಧಾತ್ಮಕ ಜಗತ್ತಲ್ಲಿ ಆಧುನಿಕತೆಯನ್ನೇ ಅವಲಂಬಿಸಿರುವ ಯುವ ಜನರಿಗೆ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿಸುವುದೆಂದರೆ ಭಾರೀ ಉದಾಸೀನದ ಕೆಲಸ. ಆದರೆ, ಆನ್ಲೈನ್ ನಲ್ಲಿ ವಸ್ತುಗಳು ಮಾರಾಟಕ್ಕೆ ಬಂದ ನಂತರ ಕೂತಲ್ಲಿ, ನಿಂತಲ್ಲಿ, ಮಲಗಿದ್ದಲ್ಲಿಯೇ ಮೊಬೈಲ್ ಫೋನ್ ನ‌ ಹಿಡಿದು ತಮಗಿಷ್ಟವಾದ, ಬೇಕಾದ ರೀತಿಯ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾರೆ. ನಿಮಗೆ ಇಷ್ಟವಾದ ಬಣ್ಣಕ್ಕೆ, ಗಾತ್ರಕ್ಕೆ, ನೀವು ಇಚ್ಛಿಸಿದ ವಿಳಾಸಕ್ಕೆ ಅದೂ ಕೂಡ ಗೂಗಲ್ ಫೇ , ಫೋನ್ ಫೇ ಅಥವಾ ಇತರ ಬ್ಯಾಂಕ್ ಖಾತೆಗಳಿಂದ ನಿಮ್ಮ ಹಣ ವರ್ಗಾವಣೆ ಮಾಡಿ ಆ ವಸ್ತುಗಳನ್ನು ಪಡೆದುಕೊಳ್ಳುತ್ತೀರಿ.‌ ಇದಕ್ಕೆ ತಕ್ಕಂತೆ ಇ ಕಾಮರ್ಸ್ ವ್ಯವಹಾರಗಳು ಹೆಚ್ಚಾಗುತ್ತಿವೆ. ವಿವಿಧ ರೀತಿಯ ವ್ಯವಹಾರಗಳ ಪಟ್ಟಿಯೇ ಮೊಬೈಲ್ ಫೋನ್ ಓಪನ್ ಮಾಡುವಾಗ ಜಾಹಿರಾತಿನ ಮೂಲಕ ಕಾಣಸಿಗುತ್ತವೆ.

ಆದ್ರೆ ಇದೀಗ ಪ್ರಚಲಿತದಲ್ಲಿರುವ ಪ್ರದಾ ಎನ್ನುವ ಜಾಲತಾಣವು ಬಾರೀ ಸೌಂಡ್ ಮಾಡ್ತಿದೆ. ಸಣ್ಣ ಸಣ್ಣ ವಸ್ತುಗಳಿಂದ ಹಿಡಿದು ಅತ್ಯುತ್ತಮ ಬ್ರಾಂಡಿನ ಉಡುಪುಗಳು ಇಲ್ಲಿ ಕಾಣಸಿಗುತ್ತವೆ. ಆದ್ರೆ ಇಲ್ಲಿ ಅಚ್ಚರಿ ಏನಪ್ಪಾ ಅಂದ್ರೆ, ಸೇಫ್ಟಿ ಪಿನ್ ಒಂದಕ್ಕೆ ಈ ಪ್ರದಾ ಬ್ರಾಂಡ್ 69 ಸಾವಿರ ರೂ. ಗೆ ಮಾರಾಟ ಮಾಡಲು ಸಿದ್ಧವಾಗಿದೆ. ಅಬ್ಬಬ್ಬಾ…ಅದೇನು ಅಷ್ಟೊಂದು ಬೆಲೆಯ ಸೇಫ್ಟಿ ಫಿನ್ ಎಂದು ಕೆಲವರು ಅಚ್ಚರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವಸ್ತುವಿನ ಸ್ಕ್ರೀನ್ ಶಾಟ್ ತೆಗೆದು ಹಂಚಿಕೊಂಡಿರುತ್ತಾರೆ. ಇದನ್ನೇನು ಬಂಗಾರದಿಂದ ಮಾಡಿದ್ದಾ ಎಂದು ಕೇಳಿದ್ರೆ. ಇಲ್ಲ….‌ಇದು ಲೋಹದಿಂದ ಮಾಡಿರುವುದಾಗಿದೆ. ಆದ್ರೂ ಒಂದಲ್ಲ, ಎರಡಲ್ಲ ಬರೋಬ್ಬರಿ ಒಂದು ಚಿಕ್ಕ ವಸ್ತುವಿಗೆ ಅದೂ 5 ರಿಂದ 10 ರೂ. ನ‌ ಒಳಗಾಗಿ ಸಿಗುವ ವಸ್ತುವಿನ ಬೆಲೆ ಬರೋಬ್ಬರಿ 69,000 ರೂ. ಅಂದ್ರೆ ಯಾರಿಗೆ ತಾನೇ ಆಶ್ಚರ್ಯವಾಗೋದಿಲ್ಲ.

ಇನ್ನು ಇದಕ್ಕೆ ಕೆಲವೊಬ್ಬರು ತಮಾಷೆಯ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದು. ಇಷ್ಟು ಚಿಕ್ಕ ವಸ್ತುವಿಗೆ ಇಷ್ಟೊಂದು ಮೌಲ್ಯವನ್ನು ಇಟ್ಟಿರುವುದು ಜನರ ನಗುವಿಗೂ ಕಾರಣವಾಗಿದೆ. ಇನ್ನು ಇದೇ ಪ್ರದಾದಲ್ಲಿ 1 ಲಕ್ಷಕ್ಕೂ ಮೀರಿದ ಚಪ್ಪಲಿಯೊಂದು ಮಾರಾಟಕ್ಕಿಟ್ಟಿದ್ದು ಇದೂ ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೊಲ್ಹಾಪುರಿ ಚಪ್ಪಲಿಯ ರೀತಿ ನಕಲಿ ಮಾಡಿದ್ದಾಗಿ ಚಮ್ಮಾರರು ಕೋರ್ಟ್ ಮೆಟ್ಟಿಲು ಏರಿದ್ದು ವರದಿಯಾಗಿದೆ.

ಇದನ್ನೂ ಓದಿ :Bengaluru: ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಪಕ್ಷಬೇಧ ಮರೆತು ಭಾಗವಹಿಸಿದ್ದಾರೆ..!

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=eN-uBG4rXhPOtTUK

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page