Parappana Agrahara : ಪರಪ್ಪನ ಅಗ್ರಹಾರದ ಮೇಲೆ ಸಾಕಷ್ಟು ತನಿಖೆಗಳು ನಡೆಯುತ್ತಿವೆಯಾದರೂ, ಅವರೊಳಗಿನ ಕೆಲವೊಂದು ಕಾನೂನಿನ ವಿರುದ್ಧ ಕಾರ್ಯಗಳು ಬಗೆಹರಿಯುವಂತೆ ಕಾಣುತ್ತಿಲ್ಲ. ಜೈಲಿನ ಒಳಗಿನ ಕೈದಿಗಳ ವ್ಯವಸ್ಥೆಗಳು ಐಶಾರಾಮಿ ಆಗುತ್ತಿವೆ. ಶಿಕ್ಷೆ ನೀಡಿದ ನಂತರ ಕೈದಿಗೆ ಯಾವ ರೀತಿಯ ಕಾನೂನಿನ ಕ್ರಮವನ್ನ ಕೈಗೊಳ್ಳಬೇಕು ಎನ್ನುವಂಥದ್ದು, ಜೈಲಿನ ಒಳಗೆ ಆ ಕೈದಿಗಳಿಗೆ ಸಿಗುವಂತಹ ಆಥಿತ್ಯವನ್ನು ನೋಡಿದರೆ ಗೊತ್ತಾಗುತ್ತದೆ.
ಉದಾಹರಣೆಗೆ ಕಳೆದ ವರ್ಷ ನಟ ದರ್ಶನ್ ಹಾಗೂ ಅವರ ಸಂಗಡಿಗರು ಪರಪ್ಪನ ಅಗ್ರಹಾರದ ಜೈಲಿನಲ್ಲಿ ರಾಜಾಥಿತ್ಯವನ್ನು ಸ್ವೀಕರಿಸಿದ್ದು ಮತ್ತು ಅವರನ್ನು ನಡೆಸಿಕೊಂಡ ರೀತಿ ಬಹುದೊಡ್ಡ ಸುದ್ದಿಯಾಗಿತ್ತು. ಆಗ ನ್ಯಾಯಾಲಯವು ಕೂಡ ಸಿಟ್ಟಾಗಿ ಪರಪ್ಪನ ಅಗ್ರಹಾರದ ಜೈಲಾಧಿಕಾರಿಗಳಿಗೆ ಖಡಕ್ ಆಗಿ, ಸೂಚನೆಗಳನ್ನು ಸರಿಯಾಗಿ ಪಾಲಿಸುವಂತೆಯೂ ಹೇಳಿತ್ತು. ಅದಾಗ್ಯೂ ಕೆಲವೇ ತಿಂಗಳುಗಳು ಕಳೆದಿವೆ ಅಷ್ಟೇ, ಪರಪ್ಪನ ಅಗ್ರಹಾರ ಈಗ ಕೈದಿಗಳಿಗೆ ಮತ್ತೆ ಆತಿಥ್ಯವನ್ನು ನೀಡಲು ಶುರು ಮಾಡಿದೆ. ಹೌದು…! ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದರಲ್ಲಿ ನಾನಾ ರೀತಿಯ ಅಪರಾಧಗಳನ್ನು ಮಾಡಿ ನ್ಯಾಯಾಲಯದಲ್ಲಿ ಅವು ಸಾಬೀತಾಗಿಯೂ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಕೈದಿಗಳು ಈಗ ಜೈಲಿನ ಒಳಗಡೆ ಮೊಬೈಲ್ ಫೋನ್ ಗಳನ್ನು ಟಿ ವಿ ಹಾಗೂ ಇತರ ಸ್ಮಾರ್ಟ್ ಫೋನ್ ಗಳನ್ನು ಬಳಸುವುದು ಕಂಡುಬಂದಿದೆ.
ಅತ್ಯಾಚಾರ ಕೇಸಿನ ಮೇರೆಗೆ ಸುಪ್ರೀಂಕೋರ್ಟ್ 30 ವರ್ಷಗಳ ಕಾಲ ಕಠಿಣ ಶಿಕ್ಷೆಯನ್ನು ವಿಧಿಸಿದ ಕೊಲೆ ಆರೋಪಿಯು ಆಗಿರುವಂತಹ ಉಮೇಶ್ ರೆಡ್ಡಿಯು, ಸೆಲ್ ನಲ್ಲಿ ಎರಡು ಆಂಡ್ರಾಯ್ಡ್ ಫೋನ್ ಹಾಗೂ ಒಂದು ಕೀ ಪ್ಯಾಡ್ ಫೋನ್ ಬಳಸುತ್ತಿರುವುದು ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ ಹಾಗೂ ಆತ ಫೋನ್ ಬಳಸುತ್ತಿರುವಾಗ ಈತನ ಹಿಂದೆ ಟಿವಿ ಕೂಡ ಆನ್ ಆಗಿದ್ದು ಅದರಲ್ಲಿ ಸಿನಿಮಾ ಹಾಡೊಂದು ಪ್ರಸಾರವಾಗುತ್ತಿರುವುದನ್ನು ಕಾಣಬಹುದಾಗಿದೆ. ಇವೆಲ್ಲಾ ಗೊತ್ತಿದ್ದರೂ ಜೈಲಾಧಿಕಾರಿಗಳು ಸುಮ್ಮನಿದ್ದಾರೆಯೇ…? ಎಂದು ವರದಿಗಳಲ್ಲಿ ಆರೋಪಿಸಲಾಗಿದೆ. ಇನ್ನು ಜೈಲಿನಲ್ಲಿ ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಸಂಭ್ರಮಾಚರಣೆಯಲ್ಲಿ ಎಲ್ಲಾ ಸೌಲಭ್ಯವನ್ನು ಬಳಸುತ್ತಿರುವುದು ಮುಂದುವರೆಯುತ್ತಲೇ ಇದೆ. ಇದರ ಬಗ್ಗೆ ಸದ್ಯ ತನಿಖೆಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ :D. K. Shivakumar: ಮತ ಅಕ್ರಮದಲ್ಲಿ ಚುನಾವಣೆ ಆಯೋಗವೇ ಭಾಗಿ..!
…………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=eN-uBG4rXhPOtTUK











