Winter Session : ಸಂಸತ್ತು ಅಥವಾ ವಿಧಾನಸಭೆಗಳಲ್ಲಿ, ನಿಗದಿತ ಅವಧಿಗೆ ನಡೆಸುವ ಅಧಿಕೃತ ಸಭಾ ಅವಧಿಯನ್ನೇ ಅಧಿವೇಶನ ಅಂತ ಕರೆಯಲಾಗುತ್ತದೆ. ಒಂದು ವರ್ಷದಲ್ಲಿ ಶಾಸಕರು ಸೇರಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಿ, ಬಜೆಟ್ ಮಂಡನೆಯನ್ನು ನಿಗದಿಪಡಿಸಿಕೊಂಡು, ಕೊನೆಯದಾಗಿ ಅಧಿವೇಶನವನ್ನು ಹೊರಡಿಸಲಾಗುತ್ತದೆ. ಭಾರತೀಯ ಸಂಸತ್ತಿನಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಮೂರು ಅಧಿವೇಶನಗಳು ನಡೆಯುತ್ತದೆ. ಫೆಬ್ರವರಿ ಯಿಂದ ಮೇ ತನಕ ಬಜೆಟ್ ಅಧಿವೇಶನವು ನಡೆದರೆ, ಜುಲೈಯಿಂದ ಆಗಸ್ಟ್ ತನಕ ಮಳೆಗಾಲದ ಅಧಿವೇಶನ ಹಾಗೂ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸಲಾಗುತ್ತದೆ. ಅಧಿವೇಶನ ಅಂದ್ರೆ ಸಭೆಯ ಒಂದು ಅಧಿಕೃತ ಅವಧಿಯಾಗಿದ್ದು, ಇದು ಆರಂಭವಾಗಿ ಅದು ಮುಗಿಯಲು ಕೆಲವು ದಿನಗಳು ಹಿಡಿಯಬಹುದು ಅಥವಾ ವಾರಗಟ್ಟಲೆ ಅಧಿವೇಶನವು ಮುಂದುವರೆಯಲೂಬಹುದು. ಕೊನೆಯದಾಗಿ ಶಾಸಕರು ಸಂಸದರು ಅಥವಾ ಸದಸ್ಯರು ಸೇರಿ ರಾಷ್ಟ್ರ ಅಥವಾ ರಾಜ್ಯದ ವಿಚಾರಗಳನ್ನ ಚರ್ಚಿಸಿ ಒಂದು ಉತ್ತಮ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ.
ಡಿಸೆಂಬರ್ 1 ರಿಂದ 19 ರವರೆಗೆ ಚಳಿಗಾಲದ ಅಧಿವೇಶನ ;
ಇದೀಗ ಚಳಿಗಾಲದ ಅಧಿವೇಶನದ ಬಗ್ಗೆ ಚರ್ಚಿಸಲಾಗಿದ್ದು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅರ್ಥಪೂರ್ಣ ಹಾಗೂ ರಚನಾತ್ಮಕ ಅಧಿವೇಶನವನ್ನು ಎದುರು ನೋಡುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಿಂದ 19ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಮಾಹಿತಿ ನೀಡಿರುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ ಒಂದರಿಂದ 19ರವರೆಗೆ ಸಂಸತ್ತಿನ ಚಳಿಗಾಲ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾಪವನ್ನು ಅನುಮೋದಿಸಿರುತ್ತಾರೆ.
ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಜನರ ಆಕಾಂಕ್ಷೆಗಳನ್ನು ಪೂರೈಸುವ ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನವನ್ನು ಎದುರು ನೋಡುತ್ತೇನೆ ಎಂದು ದ್ರೌಪದಿ ಮುರ್ಮು ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿರುತ್ತಾರೆ. ಬಿಹಾರದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಸಂಸತ್ತಿನ ಚಳಿಗಾಲದ ಅಧಿವೇಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಹೆಚ್ಚುವರಿಯಾಗಿ ಭಾರತದ ಚುನಾವಣಾ ಆಯೋಗ 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಿರುವ ಎರಡನೇ ಹಂತದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿಷಯದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಸಿಲುಕಿಸಲು ಪ್ರಯತ್ನಿಸಬಹುದು ಎಂದು ಕೂಡ ಹೇಳಲಾಗಿದೆ.
ಇದನ್ನೂ ಓದಿ :Rukmini Vasanth: ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರಾ ನಟಿ ರುಕ್ಮಿಣಿ ವಸಂತ್? ಏನಿದು ಕಥೆ?
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Qg7ctTd7pfY?si=eN-uBG4rXhPOtTUK











