shiva rajkumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹುಭಾಷೆ ನಟ. ವಿವಿಧ ಭಾಷೆಗಳಲ್ಲಿ ನಟಿಸಿ ಶಿವಣ್ಣ ಮೋಡಿ ಮಾಡಿದ್ದಾರೆ. ತನ್ನ ಎನರ್ಜಿ ಜೊತೆಗೆ ಜನ ಪ್ರೀತಿಯನ್ನು ಗಳಿಸಿದ ಶಿವಣ್ಣ ಈಗಲೂ ಹದಿಹರೆಯದ ಯುವಕನಂತೆ ತನ್ನ ಜೀವನವನ್ನು ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ.
ಇದೀಗ ತೆಲುಗಿನತ್ತ ಶಿವಣ್ಣ ಎಂಟ್ರಿಯಾಗಿದ್ದು, ತೆಲುಗು ಭಾಷೆಯಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಸ್ಟಾರ್ ಹೀರೋಗಳು ಮಾಸ್ ಕಥೆಗಳನ್ನು ಹೊಂದಿರುವ ಸಿನಿಮಾಗಳ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಇದರ ಸಾಲಿನಲ್ಲಿ ಇದೀಗ ಶಿವಣ್ಣ ಅವರು ಕಾಲಿಟ್ಟಿದ್ದಾರೆ.
ತೆಲುಗಿನ ಗುಮ್ಮಡಿ ನರಸಯ್ಯ ಎನ್ನುವಂತಹ ಸಿನಿಮಾದಲ್ಲಿ ನಾಯಕನಾಗಿ ಶಿವಣ್ಣ ನಟಿಸಲಿದ್ದಾರೆ. ತೆಲುಗು ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಶಾಸಕ ಹೋರಾಟಗಾರ ಜನ ಸೇವೆಯಲ್ಲಿಯೇ ಜೀವನ ನಡೆಸಿರುವಂತಹ ವ್ಯಕ್ತಿ ಗುಮ್ಮಡಿ ನರಸಯ್ಯ ಎನ್ನುವ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ತೆಲಂಗಾಣ ರಾಜ್ಯಕ್ಕೆ ಸೇರಿರುವ ಖಮ್ಮಂ ಜಿಲ್ಲೆಯ ಇಲ್ಲಂದು ಕ್ಷೇತ್ರದಿಂದ ಬರೋಬ್ಬರಿ ಐದು ಬಾರಿ ಶಾಸಕರಾಗಿರುವ ಗುಮ್ಮಡಿ ನರಸಯ್ಯ ಅವರ ಪಾತ್ರವನ್ನು ಶಿವಣ್ಣ ನಿರ್ವಹಿಸುತ್ತಿದ್ದಾರೆ. ತಮ್ಮ ಸೇವೆಯ ಜೊತೆಗೆ ಸರಳತೆಯಿಂದಲೂ ಹೆಸರುಗಳಿಸಿರುವ ಇವರ ಪಾತ್ರವನ್ನು ಶಿವಣ್ಣ ಒಪ್ಪಿಕೊಂಡು ಮಾಡುತ್ತಿದ್ದಾರೆ.
ಇನ್ನು ತೆಲುಗಿನಿಂದ ಶಿವರಾಜ್ ಕುಮಾರ್ ಅವರಿಗೆ ಅವಕಾಶ ಕೊಟ್ಟಿರುವ ಬಗ್ಗೆ ಮಾತನಾಡುವುದಾದರೆ ತೆಲುಗಿನಲ್ಲಿ ಯಾರು ಸ್ಟಾರ್ ನಟರು ಈ ಪಾತ್ರಕ್ಕೆ ಸೂಕ್ತ ಅಲ್ವಾ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ನಟನನ್ನು ಆಯ್ಕೆ ಮಾಡಿರುವುದು ಯಾಕೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದ್ರೆ ತೆಲುಗಿನಲ್ಲಿ ಯಾರೂ ಕೂಡ ಈ ಪಾತ್ರಕ್ಕೆ ಸೂಕ್ತ ಆಗುವವರು ಸಿಕ್ಕಿಲ್ವಾ ಎನ್ನಬಹುದು. ತೆಲುಗಿನಲ್ಲಿ ಅನೇಕ ಸ್ಟಾರ್ ನಟರಿದ್ದಾರೆ ಆದರೆ ಶಿವಣ್ಣನನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಗೊಂದಲ ಜನರಲ್ಲಿದೆ. ಇನ್ನು ಶಿವಣ್ಣ ಅವರ ಮಾತು ಅವರ ಸರಳತೆ ಇದಲ್ಲದರ ಜೊತೆಗೆ ಶಿವಣ್ಣ ಅವರ ವ್ಯಕ್ತಿತ್ವ, ಭಾಷೆ ಹಿಡಿತ ಜನರಿಗೆ ಇಷ್ಟವಾಗುತ್ತದೆ ಎನ್ನುವ ಕಾರಣದಿಂದ ಗುಮ್ಮಡಿ ನರಸಯ್ಯ ಪಾತ್ರಕ್ಕೆ ಇವರನ್ನು ಆಯ್ಕೆ ಮಾಡಿರುವುದು ಎಂಬ ಮಾತು ಕೂಡ ಕೇಳಿಬರುತ್ತದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರುವ ಶಿವಣ್ಣ ಈ ವಯಸ್ಸಿನಲ್ಲೂ ಕೂಡ ವಿಭಿನ್ನವಾದ ಅಂತಹ ಪಾತ್ರಗಳನ್ನು ನಿಭಾಯಿಸುತ್ತಾ ನಿಜವಾದ ನಟ ಅಂತ ಎನಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ಗುಮ್ಮಡಿ ನರಸಯ್ಯ ಎನ್ನುವ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಈ ಹಿಂದೆ ಚಿತ್ರತಂಡ ಗುಮ್ಮಡಿ ನರಸಯ್ಯ ಅವರು ಹೈದರಾಬಾದ್ಕೆ ವಿಧಾನಸಭೆಯಲ್ಲಿ ಪಾಲ್ಗೊಳ್ಳಲು ಸೈಕಲ್ ನಿಂದ ಬಂದಿರುವಂತಹ ಪೋಸ್ಟರ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಶಿವಣ್ಣ ಈ ಪೋಸ್ಟರ್ ನಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಗುಮ್ಮಡಿ ನರಸಯ್ಯ ತಮ್ಮ ಜೀವನದಲ್ಲಿ ಒಂದೇ ಒಂದು ಆಸ್ತಿಯನ್ನು ಖರೀದಿ ಮಾಡಲಿಲ್ಲ. ಬ್ಯಾಂಕ್ ಖಾತೆಯಲ್ಲಿ ಸ್ವಲ್ಪವೂ ಹಣವಿಲ್ಲ. ಆದರೆ, ಕೋಟ್ಯಾಂತರ ಜನರ ಪ್ರೀತಿ ಅಭಿಮಾನವನ್ನು ಗುಮ್ಮಡಿ ನರಸಯ್ಯ ಅವರು ಗಳಿಸಿದ್ದಾರೆ. ಇವರ ಜೀವನ ಕಥೆಯನ್ನು ತಿಳಿಸುವಂತಹ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಗುಮ್ಮಡಿ ನರಸಯ್ಯ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ತೆಲುಗು ರಾಜಕೀಯ ನಾಯಕನ ಸಿನಿಮಾ ತೆಲುಗಿನ ಫ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ ಸಿನಿಮಾ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಶಿವರಾಜ್ ಕುಮಾರ್ ಅವರು ಸಿಪಿಐ ಬಾವುಟ ಕಟ್ಟಿದ ಸೈಕಲ್ ತಳ್ಳಿಕೊಂಡು ಅಸೆಂಬ್ಲಿ ಗೆ ಹೋಗುತ್ತಿರುವ ಚಿತ್ರ ವೈರಲ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರಿದ್ದರು ಕೂಡ ಶಿವಣ್ಣ ಅವರನ್ನೇ ಆಯ್ಕೆ ಮಾಡಿರುವುದು ಶಿವಣ್ಣ ಅವರಿಗೆ ಇರುವಂತಹ ನಟನಾ ಕೌಶಲ್ಯ ವನ್ನು ಎತ್ತಿ ತೋರಿಸುತ್ತದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











