America : ಅಮೇರಿಕಾ ತನ್ನಡೆಗೆ ಬರುವ ವಲಸಿಗರಿಗೆ ವೀಸಾ ಕಡ್ಡಾಯದ ಜೊತೆಗೆ ಕೆಲವೊಂದು ನಿರ್ಬಂಧಗಳನ್ನು ಹೇರುತ್ತಿವೆ. ಈ ನಿರ್ಬಂಧನೆಗಳು ಸಾಮಾನ್ಯವಾಗಿದ್ದರೆ ಪರವಾಗಿಲ್ಲ. ಆದರೆ ಎಲ್ಲರೂ ಆಶ್ಚರ್ಯದಿಂದ ತಿರುಗಿ ನೋಡುವಂತಹ ಶರತ್ತುಗಳನ್ನೇ ಇತ್ತೀಚೆಗೆ ಅಮೆರಿಕ ನೀಡುತ್ತಾ ಇರುವುದು ವಲಸಿಗರಿಗೆ ಹೇಳತೀರದ ಆಘಾತವಾಗಿದೆ.
ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಆಡಳಿತದಲ್ಲಿ ವೀಸಾ ನಿರಾಕರಣೆಗಾಗಿ ವಿಚಿತ್ರವಾದ ಕೆಲವೊಂದು ನಿಯಮಗಳನ್ನು ತರುತ್ತಿದೆ. ಅದೇ ರೀತಿ ಈ ಹೊಸ ನಿಯಮದ ಅಡಿಯಲ್ಲಿ ಹೃದ್ರೋಗ ಕಾಯಿಲೆ ಇರುವ ವ್ಯಕ್ತಿಗಳು ಹಾಗೂ ಶುಗರ್ (ಮಧುಮೇಹ) ಕಾಯಿಲೆ ಇರುವವರ ವೀಸಾ ಮತ್ತು ಗ್ರೀನ್ ಕಾರ್ಡ್ ಅರ್ಜಿಗಳನ್ನು ತಿರಸ್ಕರಿಸುವಂತೆಯೂ, ಅವರಿಗೆ ಈ ಎರಡು ವ್ಯವಸ್ಥೆಗಳು ನೀಡದಂತೆ ಟ್ರಂಪ್ ಆಡಳಿತದಲ್ಲಿ ತಿಳಿಸಲಾಗಿದೆ.
ಇದೊಂದು ವಿಶೇಷ ಕಾನೂನಾಗಿದ್ದು ವಯಸ್ಸಾದವರಿಂದ ಹಿಡಿದು ಯುವಕ ಯುವತಿಯರವರೆಗೂ ಅನೇಕರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಆದರೆ, ಆರೋಗ್ಯ ಸಂಬಂಧಿತ ಕಾರಣವನ್ನು ಇಟ್ಟುಕೊಂಡು ವೀಸಾ ರದ್ದು ಮಾಡುವುದು ಇದು ಅಮೆರಿಕಕ್ಕೆ ಯಾವ ರೀತಿಯ ಉಪಯೋಗ ಎಂಬುದು ಎಲ್ಲರಿಗೂ ಪ್ರಶ್ನೆಯಾಗಿದೆ. ವಿದೇಶಾಂಗ ಇಲಾಖೆಯು ವೀಸಾ ಅಧಿಕಾರಿಗಳಿಗೆ ಕಳುಹಿಸಿದ ನೋಟಿಸ್ ನಲ್ಲಿ ಲಕ್ಷಾಂತರ ಡಾಲರ್ ಗಳ ಮೌಲ್ಯದ ಆರೈಕೆ ಅಗತ್ಯವಿರುವ ವೈದ್ಯಕೀಯ ಪರಿಸ್ಥಿತಿಗಳ ಅರ್ಜಿದಾರರನ್ನು ಗುರುತಿಸಲು ಸೂಚಿಸಲಾಗಿದೆ. ಇದರಲ್ಲಿ ಉಲ್ಲೇಖಿಸಿದಂತೆ, ಹೃದಯ ರಕ್ತನಾಳದ ಕಾಯಿಲೆ, ಉಸಿರಾಟದ ಕಾಯಿಲೆ, ಕ್ಯಾನ್ಸರ್ ನರವೈಜ್ಞಾನಿಕ ಕಾಯಿಲೆ, ಮಾನಸಿಕ ಆರೋಗ್ಯ ಸ್ಥಿತಿಗತಿಗಳು, ಮಧುಮೇಹ ಇತ್ಯಾದಿಗಳು ಒಳಗೊಂಡಿದ್ದು ಈ ಪಟ್ಟಿ ಇಷ್ಟಕ್ಕೆ ಸೀಮಿತ ಆಗಿರುವುದಿಲ್ಲ ಎಂದು ವರದಿ ಆಗಿರುತ್ತದೆ. ಅಮೆರಿಕ ವಿದೇಶಾಂಗ ಇಲಾಖೆಯು ವಿಶ್ವದಾದ್ಯಂತ ಯುಎಸ್ ರಾಯಭಾರ ಮತ್ತು ಕಾನ್ಸುಲೇಟ್ ಕಚೇರಿಗಳಿಗೆ ಕಳುಹಿಸಿದ ನಿರ್ದೇಶನದಲ್ಲಿ ಅತಿ ಬೊಜ್ಜು ಸಮಸ್ಯೆಯನ್ನು ಎದುರಿಸುತ್ತಿರುವವರು ಕೂಡ ವೀಸಾ ಅರ್ಜಿದಾರರನ್ನು ನಿರಾಕರಣೆಗೆ ಪರಿಗಣಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡುತ್ತದೆ.
ಇದನ್ನೂ ಓದಿ :Shiradi Ghat: ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗುತ್ತಾ..?
……
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/_-yUScaBexM?si=OSzEakNkWfnKDaig











