Rukmini Vasanth: ಕಾಂತಾರ ಚಾಪ್ಟರ್ 1 ನ ಖ್ಯಾತ ನಟಿ ಕನಕವತಿ ನಂಬರ್ ನಿಂದ ಅಪರಿಚಿತ ಖದೀಮರು ಫೋನ್, ಮೆಸೆಜ್ ಮಾಡುತ್ತಿದ್ದಾರೆ, ಯಾರೂ ಕೂಡ ರಿಪ್ಲೈ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪುಟ್ಟಿ ಅಲಿಯಾಸ್ ಪ್ರಿಯಾ ಆಗಿ ಕನ್ನಡಿಗರ ಮನಗೆದ್ದ, ಕನಕವತಿಯಾಗಿ ಭಾರತೀಯ ಚಿತ್ರರಂಗದ ಗಮನ ಸೆಳೆದ ರುಕ್ಮಿಣಿ ವಸಂತ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಕಾಂತಾರಾ ಖ್ಯಾತಿಯ ಖುಷಿಯಲ್ಲಿರುವ ರುಕ್ಮಿಣಿ ವಸಂತ್ ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ರುಕ್ಮಿಣಿ ವಸಂತ್ ಮೆಸೆಜ್ ಮಾಡ್ತಿದ್ದಾರೆ ಎಂದು ಖುಷಿ ಪಡಬೇಡಿ. ಅಲರ್ಟ್ ಆಗಿ. ರುಕ್ಮಿಣಿ ವಸಂತ್ ಹೆಸರಲ್ಲಿ ಯಾರೆೋ ಖದೀಮರು ಕಾಲ್ ಮಾಡ್ತಿದ್ದಾರಂತೆ. ಜೊತೆಗೆ ಮೇಸೆಜ್ ಕೂಡ ಕಳಿಸುತ್ತಿದ್ದಾರಂತೆ. 9445893273 ಎಂಬ ನಂಬರ್‌ನಿಂದ ನಕಲಿ ಕಾಲ್ ಬಂದರೆ ಎತ್ತಬೇಡಿ ಎಂದು ಖುದ್ದು ರುಕ್ಮಿಣಿ ವಸಂತ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಹೇಳಿದ್ದಾರೆ.
ರುಕ್ಮಿಣಿ ವಸಂತ್ ಕಾಲ್ ಅಂತ ಖುಷಿ ಆಗ್ಬೇಡಿ!
ನಿಮ್ಮ ಮೊಬೈಲ್‌ಗೆ ರುಕ್ಮಿಣಿ ವಸಂತ್ ನಂಬರ್‌ನಿಂದ ಕಾಲ್ ಬಂದ್ರೆ ನೀವು ಖುಷಿ ಪಡಬೇಕಿಲ್ಲ, ಬದಲಾಗಿ ಅಲರ್ಟ್ ಆಗ್ಬೇಕು! ಕಾರಣ ಅವರ ಈ ಸಂಖ್ಯೆ ನನಗೆ ಸೇರಿಲ್ಲ. ಇದರಿಂದ ಬರುವ ಯಾವುದೇ ಸಂದೇಶಗಳು ಅಥವಾ ಕರೆಗಳು ಸಂಪೂರ್ಣವಾಗಿ ನಕಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ಸಂಪರ್ಕಗೊಳ್ಳಬೇಡಿ ಅಂತ ರುಕ್ಮಿಣಿ ವಸಂತ್ ಮನವಿ ಮಾಡಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ರುಕ್ಮಿಣಿ, ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ಇದು ನಿಮ್ಮ ತಿಳುವಳಿಕೆಗಾಗಿ. ನಿಮ್ಮ ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಅಂತ ರುಕ್ಮಿಣಿ ವಸಂತ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ನು ರುಕ್ಮಿಣಿ ವಸಂತ್, ಹುತಾತ್ಮ ಸೈನಿಕ ಕರ್ನಲ್ ವಸಂತ್ ವೇಣುಗೋಪಾಲ್ ಮತ್ತು ಭರತನಾಟ್ಯ ನರ್ತಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸುಭಾಷಿಣಿ ವಸಂತ್ ಅವರ ಹಿರಿಯ ಮಗಳಾಗಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











