ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bangalore : ಆರ್ ಟಿಒ ಅಧಿಕಾರಿಗಳೇ ನಿಯಮ ಪಾಲಿಸಿಲ್ಲ : ಲೋಕಾಯುಕ್ತರ ಕೈ ಗೆ ಸಿಕ್ಕಿದ ಅಕ್ರಮಗಳ ಪಟ್ಟಿ

Bangalore : ಆರ್ ಟಿ‌ ಒ ಕಛೇರಿಯು ಸರ್ಕಾರದ ಸಾರಿಗೆ ಇಲಾಖೆಯ ಒಂದು ಶಾಖೆಯಾಗಿದ್ದು, ಇದು ವಾಹನ ಮತ್ತು ಚಾಲಕರಿಗೆ ಸಂಬಂಧಿಸಿದ ಎಲ್ಲಾ ನಿಖರ ಮಾಹಿತಿಯನ್ನು ನೀಡುವುದಾಗಿದೆ. ಮುಖ್ಯವಾಗಿ, ವಾಹನ ನೋಂದಣಿ, ಚಾಲನಾ ಪರವಾನಗಿ, ರೋಡ್ ಟ್ಯಾಕ್ಸ್ ವಾಹನ ವರ್ಗಾವಣೆ ಇತ್ಯಾದಿ… ಮುಖ್ಯ ಕಾರ್ಯಗಳನ್ನು ಈ ಕಚೇರಿಯಲ್ಲಿ ನಿರ್ವಹಿಸಲಾಗುತ್ತದೆ.
ಕರ್ನಾಟಕದಲ್ಲಿ ಇದರ ಆರು‌ ಶಾಖೆಗಳಿದ್ದು, ಮುಖ್ಯವಾಗಿ ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ ಇಲ್ಲಿ ವಾಹನ ಸಂಬಂಧಿತ ಮುಖ್ಯ ಶಾಖೆಗಳಿದ್ದು ಈ ಆರ್ ಟಿಒ ಕಛೇರಿಗಳಲ್ಲಿ ಮಾಹಿತಿಯನ್ನು ನೀವು ಕೇಳಿ ಪಡೆದುಕೊಳ್ಳಬಹುದಾಗಿದೆ. ಆದರೆ, ಬೆಂಗಳೂರಿನ ಆರ್ ಟಿ ಒ ಕಚೇರಿಯಲ್ಲಿ ಇದೀಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಹಲವು ಲೋಪದೋಷಗಳು ಕಂಡು ಬಂದಿರುತ್ತದೆ.

ಕಚೇರಿಗಳಲ್ಲಿ ಅನೇಕ ದಾಖಲೆಗಳು, ಅಕ್ರಮ ಹಣ ಸಂಗ್ರಹಣೆಗಳು ಮತ್ತು ಏಜೆಂಟರ ಹಾವಳಿಯು ಕಂಡು ಬಂದಿರುವುದು ವರದಿಯಾಗಿದೆ. ಕೆಲವು ಅಧಿಕಾರಿಗಳು ಮುಖ್ಯವಾಗಿ ಫೋನ್ ಪೇ, ಗೂಗಲ್ ಪೇ ನಲ್ಲಿ ನಡೆಸಿದಂತಹ ಹಣಕಾಸಿನ ವಹಿವಾಟುಗಳನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಅಳಿಸಿರುವಂಥದ್ದು ಕೂಡಾ ಕಂಡು ಬಂದಿರುವುದು ಬಯಲಾಗಿದೆ. ಲೋಕಾಯುಕ್ತ ಅಧಿಕಾರಿಗಳ ಬರುವ ಮಾಹಿತಿಯು ಗುಟ್ಟಾಗಿರಬೇಕಿತ್ತು. ಆದರೆ, ಅದ್ಯಾವುದೋ ಮೂಲದಿಂದ ಮಾಹಿತಿ ಸೋರಿಕೆಯಾಗಿ ಕೆಲ ಏಜೆಂಟರು ಪರಾರಿಯಾಗಲು ಕೂಡ ಯತ್ನಿಸಿರುತ್ತಾರೆ. ಇದು ಆರ್‌ಟಿಓ ಕಚೇರಿಯಲ್ಲಿ ಶುಕ್ರವಾರ ನಡೆಸಿದ ಶೋಧದಿಂದ ಕಂಡು ಬಂದಿರುವ ಮಾಹಿತಿಯಾಗಿದ್ದು, ನಗರದಲ್ಲಿರುವ ಆರು ಆರ್ ಟಿಒ ಕಚೇರಿಗಳಲ್ಲಿ ಲೋಕಾಯುಕ್ತರು ಸೇರಿದಂತೆ ಪ್ರತ್ಯೇಕ ತಂಡಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಕಂಡುಬಂದಿರುವಂತಹ ಸಮಸ್ಯೆ ಇದಾಗಿದೆ.

ಕಾರ್ಯಚರಣೆ ವೇಳೆ ಕಚೇರಿಗಳಲ್ಲಿ ಅದೆಷ್ಟೋ ಲೋಪದೋಷಗಳು ಕಂಡುಬಂದಿದ್ದು, ಅಧಿಕಾರಿಗಳು ನಗದು ವಹಿವಾಟು ಘೋಷಣೆ ಮಾಡಿಕೊಳ್ಳದಿರುವುದು, ಅನಧಿಕೃತ ಗೈರು ಹಾಗೂ ಏಜೆಂಟರು ಅಲ್ಲಿ ಬಂದು ತಮ್ಮದೇ ಹವಾ ಎನ್ನುವಂತೆ ನಡೆಸಿದ ಚಟುವಟಿಕೆಗಳೆಲ್ಲವೂ ಬಯಲಾಗಿದೆ. ಸಾರ್ವಜನಿಕರು ಅಧಿಕಾರಿಗಳ ಕುರಿತು ಹತ್ತಾರು ಆರೋಪಗಳನ್ನು ಮಾಡಿದರೂ ಕೂಡ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿರಲಿಲ್ಲ. ಕಸ್ತೂರಿ ನಗರ ಆರ್‌ಟಿಓ ಕಚೇರಿಗೆ ಲೋಕಾಯುಕ್ತ ನೇತೃತ್ವದ ತಂಡವು ಭೇಟಿ ನೀಡಿದ್ದು ಈ ತಪಾಸಣೆಯ ಸಂದರ್ಭದಲ್ಲಿ ತರಬೇತಿ ಶಾಲೆ ಅಂದ್ರೆ ಮಾರುತಿ ಮೋಟಾರ್ ಪ್ರೈವೇಟ್ ಲಿಮಿಟೆಡ್ ಪರಿಶೀಲಿಸಿದಾಗ 49 ವಾಹನಗಳನ್ನು 83 ಚಾಲನಾ ಪರವಾನಗಿಗಳು ಇದ್ದಿರುವುದು ಕಂಡುಬಂದಿದ್ದು, ಅದರ ಮೇಲೆ ಹಣದ ಮೊತ್ತವನ್ನು ಬರೆಯಲಾಗಿತ್ತು. ಈ ರೀತಿಯಾದ ತಪ್ಪುಗಳು ಅದೆಷ್ಟೋ ಆರ್ ಟಿ ಓ ಕಚೇರಿಗಳಲ್ಲಿ ಕಂಡುಬಂದಿದ್ದು ಇಲ್ಲಿಯೂ ಕೂಡ ಹಣದ ದುರುಪಯೋಗವನ್ನು ಮಾಡಲಾಗಿದೆ ಎಂದು ವರದಿಯಾಗಿರುತ್ತದೆ.

ಇದನ್ನೂ ಓದಿ :Puttur: ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚಿಸಿದಾತ ಅರೆಸ್ಟ್

…….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/_-yUScaBexM?si=OSzEakNkWfnKDaig

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page