BBK12: ಬಿಗ್ ಬಾಸ್ ಸೀಸನ್ 12 ರಲ್ಲಿ ಮೂರನೇ ವಾರ ಮಾಳು ನಿಪನಾಳ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಆಟ ನೋಡುತ್ತಿರುವ ವೀಕ್ಷಕರಿಗೆ ಇತ್ತೀಚೆಗೆ ಓವರ್ ಕಾನ್ಫಿಡೆನ್ಸ್ನಿಂದ ಆಟ ಹಾಳು ಮಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗುತ್ತಾ..?
ಗಿಲ್ಲಿ ಹಾಸ್ಯ ಶೋಗಳನ್ನು ಮಾಡಿ ಬಂದವರು, ಬಿಗ್ ಬಾಸ್ನಲ್ಲಿ ಅವರ ಆಟ ಯಾವಾಗಲೂ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಅವರ ಆತ್ಮಸ್ಥೈರ್ ಮತ್ತಷ್ಟು ಹೆಚ್ಚಿದೆ. ಆದರೆ, ಈಗ ಅದು ಓವರ್ ಕಾನ್ಫಿಡೆನ್ಸ್ ಆಗಿ ಬದಲಾಗಿದೆಯೇ ಎಂದು ಕೆಲ ವೀಕ್ಷಕರಿಗೆ ಅನಿಸಿಕೆ ಆಗಿದೆ.
ಇದನ್ನೂ ಓದಿ: ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಬಿಳಿ ಕೂದಲು ಕಣ್ಮರೆ…!
ʻಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂರನೇ ಕ್ಯಾಪ್ಟನ್ ಆಗಿ ಮಾಳು ನಿಪನಾಳ ಆಯ್ಕೆ ಆಗಿದ್ದಾರೆ. ಬಿಗ್ ಬಾಸ್ʼ ಮನೆಗೆ ಬಂದಿದ್ದ ಜನರ ವೋಟ್‌ನ ಪ್ರಕಾರ ಈ ವಾರದ ಕ್ಯಾಪ್ಟನ್ ಆಗಿ ಮಾಳು ನಿಪನಾಳ ಆಯ್ಕೆ ಆಗಿದ್ದಾರೆ. ಹೌದು.. ಈ ವಾರ ಅಭಿಷೇಕ್ ಶ್ರೀಕಾಂತ್, ಜಾಹ್ನವಿ, ರಘು, ರಿಷಾ ಗೌಡ, ಮಾಳು ನಿಪನಾಳ್, ಕಾವ್ಯ ಶೈವ ಇವರೆಲ್ಲಾ ಕ್ಯಾಪ್ಟನ್ಸಿ ಓಟದಲ್ಲಿದ್ದರು. ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆ ಮಾಡುವ ಅಧಿಕಾರವನ್ನ ʻಬಿಗ್ ಬಾಸ್ʼ ವೀಕ್ಷಕರಿಗೆ ನೀಡಿದ್ದರು.
ಇದನ್ನೂ ಓದಿ: ಗಂಡು ಮಗುವಿಗೆ ತಾಯಿಯಾದ ಬಾಲಿವುಡ್ ನಟಿ ಕತ್ರಿನಾ ಕೈಫ್..!
ಗಿಲ್ಲಿಗೆ ಮನೆಯವರಿಂದ ಕಳಪೆ ಪಟ್ಟ ಸಿಕ್ಕಿರೋದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಾರಣ, “ಗಿಲ್ಲಿಗೆ ಕಳಪೆ ಪಟ್ಟ ಕೊಡಬೇಕು ಅಂತ ಬೆಳಗ್ಗೆಯಿಂದಲೇ ಪ್ಲ್ಯಾನ್ ಮಾಡಿದ್ರು. ಗಿಲ್ಲಿಗೆ ಈ ವಾರ ಮ್ಯಾನ್ ಹ್ಯಾಂಡಲಿಂಗ್ ಮಾಡಲಾಯ್ತು. ಅವರ ಲೆಟರ್ ಅನ್ನು ಕೂಡ ತ್ಯಾಗ ಮಾಡಿದ್ರು. ಇವೆಲ್ಲದರ ಜೊತೆಗೆ ಮನೆಯನ್ನ ಎಂದಿನಂತೆ ಸಖತ್ ಎಂಟರ್‌ಟೈನಿಂಗ್ ಆಗಿ ಇಟ್ಟುಕೊಂಡಿದ್ದರು. ಆದರೂ, ಗಿಲ್ಲಿಗೆ ಕಳಪೆ ಸಿಕ್ಕಿದ್ದು ಸರಿಯಲ್ಲ” ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫೆ.26ಕ್ಕೆ ರಶ್ಮಿಕಾ-ವಿಜಯ್ ಮದುವೆ..?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











