ಬ್ರೇಕಿಂಗ್ ನ್ಯೂಸ್
ಕರ್ನಾಟಕ

Supreme Court : ಬೀದಿನಾಯಿ ಕಾಟಕ್ಕೆ ಸುಪ್ರೀಂ ಕೋರ್ಟ್ ನಿಂದ ಹೊಸ ಆದೇಶ…!

Supreme Court : ಮುಗ್ಧ ಬಾಲಕಿ ಒಬ್ಬಳು ನಡೆದುಕೊಂಡು ಹೋಗುತ್ತಿರುವಾಗ ಬರೋಬ್ಬರಿ 6 ಬೀದಿ ನಾಯಿಗಳು ಅಟ್ಟಾಡಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಬಾಲಕಿಯ ಕೈ ಕಾಲಿಗೆ ಕಚ್ಚಿದ ದೃಶ್ಯವು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಬಾಲಕಿಯ ಜೀವ ಉಳಿಸಿರುತ್ತಾರೆ.

ವಿಜಯಪುರದಲ್ಲಿ 500 ರಿಂದ 600 ಜನರಿಗೆ ಬೀದಿ ನಾಯಿಗಳು ಕಚ್ಚಿದ ಪ್ರಸಂಗಗಳು ಹೆಚ್ಚಾಗುತ್ತಲೇ ಇವೆ. ಇದರಿಂದ ಜನ ಬೇಸತ್ತಿದ್ದಾರೆ. ಈ ಬೀದಿನಾಯಿಗಳಿಗೆ ಕಡಿವಾಣ ಹಾಕದಿರುವವರ ವಿರುದ್ಧ, ಬಾಲಕಿಯ ನೆನೆದು ಜನರು ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರು ಬಜಪೆ ಕಂದಾವರದಲ್ಲಿಯೂ ಬೀದಿನಾಯಿಯು‌ ಬಾಲಕನ ಮೇಲೆ‌ ದಾಳಿ ನಡೆಸಿರುತ್ತದೆ. ಹುಡುಗನ ಕಿರುಚಾಟವನ್ನು ಕೇಳಿ ಮನೆಯಿಂದ ಹೊರ ಬಂದ ತಾಯಿಯು ಮಗನ ರಕ್ಷಣೆಯನ್ನು ಮಾಡಿರುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಜಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದಿರುವುದು ವಿಪರ್ಯಾಸ. ಕಂದಾವರ ಗ್ರಾಮಪಂಚಾಯಿತಿ ನಿರ್ಲಕ್ಷ ತೋರಿಸುತ್ತಿದೆ ಎಂದು ಸ್ಥಳೀಯರು ಇಲ್ಲಿಯೋ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

ಬೀದಿ ನಾಯಿಗಳ ಉಪಟಳ ಮತ್ತು ಮನುಷ್ಯರ ಮೇಲಿನ ದಾಳಿಗಳು ಹೆಚ್ಚಾಗುತ್ತಿರುವುದನ್ನು ತಿಳಿದ ಸುಪ್ರೀಂಕೋರ್ಟ್ ಬೀದಿ ನಾಯಿ ಕಾಟಕ್ಕೆ ಹೊಸ ಆದೇಶವನ್ನು ಹೊರಡಿಸಿದೆ. ಬೀದಿ ನಾಯಿಗಳನ್ನು ತಡೆಯಲು ಆಸ್ಪತ್ರೆ, ಶಾಲೆ ಕಾಲೇಜುಗಳಿಗೆ ಬೇಲಿ ಹಾಕುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನಾಯಿಗಳು, ಇತರೆ ಪ್ರಾಣಿಗಳ ಓಡಾಟವಿದ್ದರೆ ಇಂತಹಾ ಸ್ಥಳದಿಂದ ಸ್ಥಳಾಂತರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದಂತೆ ಸೆರೆಹಿಡಿದು ಶೆಲ್ಟರ್ ಸ್ಥಾಪಿಸಿ ಅಲ್ಲಿಗೆ ಸ್ಥಳಾಂತರಗೊಳಿಸಿ, ಇದರ ನಿರ್ವಹಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಬೇಕು. ಸ್ಥಳೀಯ ಸಂಸ್ಥೆಗಳು ಮೂರು ತಿಂಗಳಿಗೊಮ್ಮೆ ಇದನ್ನು ಪರಿಶೀಲಿಸಬೇಕು ಹೆದ್ದಾರಿಗಳಲ್ಲಿ ಪ್ರಾಣಿಗಳನ್ನು ಪತ್ತೆಹಚ್ಚಲು ಗಸ್ತು ತಂಡವನ್ನು ರಚಿಸಬೇಕು. ಪ್ರಾಣಿಗಳ ಬಗ್ಗೆ ದೂರನ್ನು ನೀಡಲು ಸಹಾಯವಾಣಿಯನ್ನು ಕೂಡ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿದೆ. ಇದು ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ ಆದೇಶವಾಗಿದೆ ಆದಷ್ಟು ಬೇಗ ಬೀದಿ ನಾಯಿ ಕಾಟವನ್ನು ತಪ್ಪಿಸಿ ಸಾರ್ವಜನಿಕರ ಓಡಾಟಕ್ಕೆ ಯಾವುದೇ ರೀತಿಯ ಅಪಾಯಗಳು ಪ್ರಾಣಿಗಳಿಂದ ಬಾರದಂತೆ ಮುಕ್ತಗೊಳಿಸಬೇಕು ಎನ್ನುವುದು ಸುಪ್ರೀಂ ಕೋರ್ಟ್ ನ ಆದೇಶವಾಗಿದೆ.

ಇದನ್ನೂ ಓದಿ :Airport : ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ಪರದಾಟ : ವಿಮಾನ ನಿರ್ಗಮನದಲ್ಲಿ ವ್ಯತ್ಯಯ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/AYP_nK8o1Rw?si=6gOb6xoMtg9GLTeu

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page