ಬ್ರೇಕಿಂಗ್ ನ್ಯೂಸ್
ಕರ್ನಾಟಕ

National Livestock Mission : ಕೋಳಿ ಸಾಕಣೆ ಜೊತೆ ಕುರಿ, ಹಂದಿ‌ಸಾಕಣೆಗೂ 25 ಲಕ್ಷ ರೂ. ಸಹಾಯಧನ

National Livestock Mission : ಜಾನುವಾರು ಮಿಷನ್ ಎಂಬುದು ಭಾರತದ ಸರ್ಕಾರವು ಆರಂಭಿಸಿದ ಒಂದು ಪ್ರಮುಖ ಯೋಜನೆಯಾಗಿದೆ. ಇದರ ಉದ್ದೇಶ ದೇಶದ ಪಶುಸಂಪತ್ತಿ ಅಭಿವೃದ್ಧಿ, ಹಾಲು ಉತ್ಪಾದನೆ ಹೆಚ್ಚಿಸುವುದಾಗಿದೆ. ಇದರಲ್ಲಿ ಕೋಳಿ ಸಾಕಾಣೆಯು ಒಂದು ಉಪಯೋಜನೆಯಾಗಿದ್ದು, ಇದು ಗ್ರಾಮೀಣ ಮಟ್ಟದಲ್ಲಿ ಕೋಳಿ ಸಾಕಾಣೆ ಮೂಲಕ ರೈತರ ಆದಾಯ ಹೆಚ್ಚಿಸುವುದು ಹಾಗೂ ಉದ್ಯೋಗ ಸೃಷ್ಟಿಸುವುದು ಮತ್ತು ಪೋಷಕಾಂಶ ಸಮೃದ್ಧ ಆಹಾರಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಗ್ರಾಮೀಣ ಕೋಳಿ ಸಾಕಾಣಿಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಸೃಷ್ಟಿಸಲು ಭಾರತ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ನ ಅಡಿಯಲ್ಲಿ ಕೋಳಿ ತಳಿ ಅಭಿವೃದ್ಧಿ ಯೋಜನೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಕೋಳಿ ಸಾಕಣೆ ಮಾಡಲು ಉದ್ದೇಶ ಇರುವ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಪಶು ಸಂಪತ್ತು ಮತ್ತು ಕೋಳಿ ತಳಿ ಅಭಿವೃದ್ಧಿಯ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೋಳಿ ತಳಿ ಅಭಿವೃದ್ಧಿ ಉದ್ದೇಶಕ್ಕಾಗಿ ಉದ್ಯಮಿಗಳಿಗೆ ಯೋಜನಾ ಬಂಡವಾಳ ವೆಚ್ಚಕ್ಕೆ ಅನುಗುಣವಾಗಿ ಸಹಾಯಧನವನ್ನು ನೀಡಲಾಗುವುದು ಎಂದು ವರದಿಯಾಗಿದೆ.

ಈ ಯೋಜನೆಯ ಪ್ರಕಾರ ಬಂಡವಾಳ ವೆಚ್ಚದ 50% ರಷ್ಟು ಸಹಾಯಧನವನ್ನು ನೀಡಲಾಗುತ್ತಿದ್ದು ಇದರ ಗರಿಷ್ಠ ಮಿತಿ 25 ಲಕ್ಷ ರೂ. ಆಗಿದೆ. ಈ ಸಹಾಯಧನವು ವೈಯಕ್ತಿಕ ರೈತರು, ಸ್ವಸಹಾಯ ಸಂಘಗಳು ಸೇರಿದಂತೆ ಇತರ ಸಂಸ್ಥೆಗಳಿಗೆ ಲಭ್ಯವಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಕೋಳಿ ಉತ್ಪಾದನೆಗೆ ಅಗತ್ಯವಾದ ವಾತಾವರಣವನ್ನು ಸೃಷ್ಟಿಸಲು ಮತ್ತು ತಳಿ ಸುಧಾರಣೆಗೆ ಉತ್ತೇಜನ ನೀಡುತ್ತದೆ. ಈ ಯೋಜನೆಯ ಅಡಿ ಕುರಿ ಹಾಗೂ ಹಂದಿ ಸಾಕಣೆಗೂ ಸಹಾಯಧನ ಲಭ್ಯವಾಗಲಿದೆ.

ಈ ಯೋಜನೆಯು ನಿಮ್ಮ ಆರಂಭಿಕ ಹೂಡಿಕೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಮಾರುಕಟ್ಟೆಗಳು ಮತ್ತು ಪೂರೈಕೆಗಳು ಸಂಪರ್ಕವನ್ನು ಅಭಿವೃದ್ಧಿಪಡಿಸಿ ನಿಮ್ಮ ಉತ್ಪನ್ನಗಳಿಗೆ ಸ್ಥಿರವಾದ ಬೇಡಿಕೆ ಮತ್ತು ಉತ್ತಮ ಬೆಲೆಗಳನ್ನು ಖಚಿತಪಡಿಸುವುದು, ಸಹಾಯಧನಕ್ಕೆ ಸ್ವಂತ ಅಥವಾ ಗುತ್ತಿಗೆ ಪಡೆದ ಭೂಮಿ ಹೊಂದಿರುವ ರೈತರು, ಸ್ವಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರಿ ಸಂಸ್ಥೆಗಳು, ಖಾಸಗಿ ಕಂಪನಿಗಳು, ಉದ್ಯಮಿಗಳು, ಸರ್ಕಾರೇತರ ಸಂಸ್ಥೆಗಳು ಈ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ :Southadka Temple: ಸೌತಡ್ಕ ದೇವಸ್ಥಾನಕ್ಕೆ ಬಂದು ಭಕ್ತರು ಗಂಟೆ ಕಟ್ಟೋದು ಯಾಕೆ ಗೊತ್ತಾ..?

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/AYP_nK8o1Rw?si=6gOb6xoMtg9GLTeu

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page