Airport : ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳ ಸಂಪರ್ಕ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಅಮೇರಿಕಾ, ಯೂರೋಪ್, ಏಷ್ಯಾ ಇತ್ಯಾದಿ ಹಲವಾರು ದೇಶಗಳಿಗೆ ನೇರ ವಿಮಾನಗಳು ಇಲ್ಲಿಂದಲೇ ಹೊರಡುವಂತದ್ದು.
ಹೀಗಿರುವಾಗ, ಗುರುವಾರ ಸಂಜೆಯಿಂದಲೇ ಈ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷವು ಕಂಡು ಬಂದಿರುವುದರಿಂದ 300ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ತಡಕಾಡುವ ಪರಿಸ್ಥಿತಿ ನಿರ್ಮಾಣವಾಯಿತು ಮತ್ತು ವಿಮಾನ ಹಾರಾಟದಲ್ಲಿಯೂ ವ್ಯತ್ಯಾಸ ಉಂಟಾದ ಕಾರಣ ವಿಮಾನಯಾನ ಸಂಸ್ಥೆಗಳು ಟ್ವೀಟ್ ನಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುತ್ತಾರೆ.
ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ಆನ್ಲೈನ್ ಅಥವಾ ಏರ್ಲೈನ್ ಕಚೇರಿಯಲ್ಲಿ ಮೊದಲೇ ಬುಕಿಂಗ್ ಮಾಡಿ ವಿಮಾನ ಹಾರಾಟದ ಎರಡರಿಂದ ಮೂರು ಗಂಟೆಗಳ ಮೊದಲೇ ಏರ್ಪೋರ್ಟಿಗೆ ಬರುತ್ತಾರೆ ಆದರೆ ಇಲ್ಲಿ ಅಷ್ಟು ಬೇಗನೆ ಬಂದು ಕಾಯುತ್ತಿರುವ ಪ್ರಯಾಣಿಕರಿಗೆ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದಾಗ ಈ ಅನಿರೀಕ್ಷಿತ ಘಟನೆ ಯಿಂದ ತಲ್ಲಣಗೊಂಡಿದ್ದಾರೆ.
ಉತ್ತರ ಭಾರತದ ಲಕ್ನೋ, ಜೈಪುರ, ಚಂಢೀಗಡ, ಅಮೃತಸರ ವಿಮಾನ ನಿಲ್ದಾಣಗಳ ಮೇಲೂ ಇದರ ಪರಿಣಾಮವು ಬೀರಿದ್ದು, ಇಲ್ಲಿ ಪ್ರತಿನಿತ್ಯ ಒಂದೂವರೆ ಸಾವಿರ ವಿಮಾನಗಳು ಸೇವೆ ಸಲ್ಲಿಸುತ್ತಿದ್ದು ಏರ್ ಟ್ರಾಫಿಕ್ ಕಂಟ್ರೋಲ್ ದತ್ತಾಂಶಕ್ಕೆ ಸಹಾಯಕವಾಗಿರುವ ಸ್ವಯಂ ಚಾಲಿತ ಸಂದೇಶ ಬದಲಾವಣೆ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ದೆಹಲಿಯಿಂದ ದೇಶವಿದೇಶಕ್ಕೆ ಸೇವೆ ಸಲ್ಲಿಸುವ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಬೆಳಗ್ಗೆ 9:00 ಗಂಟೆಯ ಹೊತ್ತಿಗೆ ವಿಮಾನಗಳ ನಿರ್ಗಮನವು ಸರಾಸರಿ 45 ರಿಂದ 50 ನಿಮಿಷಗಳಷ್ಟು ವಿಳಂಬವಾಗಿದ್ದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : Southadka Temple: ಸೌತಡ್ಕ ದೇವಸ್ಥಾನಕ್ಕೆ ಬಂದು ಭಕ್ತರು ಗಂಟೆ ಕಟ್ಟೋದು ಯಾಕೆ ಗೊತ್ತಾ..?
…………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/AYP_nK8o1Rw?si=6gOb6xoMtg9GLTeu











