ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bangalore : ಅತಿರೇಕಕ್ಕೇರಿದೆ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು

Bangalore : ಒಂದೆಡೆ ಸಿಎಂ ಸಭೆ, ಇನ್ನೊಂದೆಡೆ ಬೆಳಗಾವಿ ಹತ್ತರಗಿಯಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ರೈತರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದು, ಎರಡು ದಿನದಿಂದ ಹಿಂದೆ ಅವರಿವರು‌ ಬಂದು‌ ಗಡುವು ತೆಗೆದುಕೊಂಡು ಹೋಗುತ್ತಾರೆಯೇ ವಿನಃ ಯಾರೂ ನ್ಯಾಯಕ್ಕಾಗಿ ತೀರ್ಪನ್ನು ಕೊಡ್ತಾನೇ ಇಲ್ಲ ಎಂದು ಆಕ್ರೋಶಗೊಂಡಿರುತ್ತಾರೆ. ಅಲ್ಲದೇ, ಕಿಲೋಮೀಟರ್ ಗಟ್ಟಲೆ ಹೆದ್ದಾರಿಯಲ್ಲೇ ನಿಂತ ವಾಹನಗಳು, ಕಬ್ಬು ಬೆಳೆಗಾರರ ಕಹಳೆ ಇದೀಗ ತಾರಕಕ್ಕೇರಿದೆ. ಆದಷ್ಟು ಬೇಗ ತೀರ್ಪನ್ನು‌ ನೀಡಿದರೆ ಉತ್ತಮ ಎನ್ನುವ ಎಚ್ಚರಿಕೆಗಳೂ ಕೇಳಿಬರುತ್ತಿವೆ.

ಮುಂದಿನ‌ ನಡೆ ಉಗ್ರ ಹೋರಾಟವಾಗಿರುತ್ತದೆ. ಈಗಾಗಲೇ ಮುಖ್ಯಮಂತ್ರಿಗಳಿಗೂ, ಸಕ್ಕರೆ ಸಚಿವರಿಗೂ ಹೇಳಿದ್ದಾಗಿದೆ. ರೈತರೆಂದರೆ ಅವರು ಏನು ತಿಳ್ಕೊಂಡಿದ್ದಾರೆ ಅಂತ ಅರ್ಥ ಆಗ್ತಾ ಇಲ್ಲ. ಇಡೀ ಭಾರತದಲ್ಲಿ ಆಗಬಾರದಂತ ಹೋರಾಟವನ್ನು ಮಾಡಿ ತೋರಿಸುತ್ತೇವೆ ಎಂದು ರೈತರು ಇನ್ನಷ್ಟು ರೊಚ್ಚಿಗೆದ್ದಿರುವುದು ಸರ್ಕಾರಕ್ಕೆ ದೊಡ್ಡದೊಂದು ಪರೀಕ್ಷೆ ಎದುರಾಗಿದೆ. ಅಂತಿಮ ತೀರ್ಪಿಗಾಗಿ ಕಾಯುತ್ತಿರುವ ರೈತರಿಗೆ ಶ್ರೀ ಶೈಲ ಸ್ವಾಮೀಜಿಗಳ ಸಾಥ್ ಕೂಡಾ ದೊರಕಿದೆ.

ಬೆಂಗಳೂರು ಚಾಮರಾಜನಗರ ಸೇರಿದಂತೆ ಜಿಲ್ಲೆ ಜಿಲ್ಲೆಗೂ ಹೆಚ್ಚುತ್ತಲೇ‌ ಇದೆ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು.
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕುರಿತು ಮಹತ್ವದ ಸಭೆ ನಡೆಯುತ್ತಿದೆ. 82 ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು 46 ಕ್ಕೂ ಹೆಚ್ಚು ರೈತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರೈತರು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಲಿದ್ದಾರೆ. ಸಭೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಇದನ್ನೂ ಓದಿ : Bengaluru: ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ..!

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2NUxdpIvL2A?si=fWmoMsoNw25i7mH_

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page