Katrina Kaif: ಬಾಲಿವುಡ್‌ನ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಮನೆಗೆ ಹೊಸ ಅತಿಥಿ ಆಗಮನವಾಗಿದ್ದು, ಕತ್ರಿನಾ ಕೈಫ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ: ಫೆ.26ಕ್ಕೆ ರಶ್ಮಿಕಾ-ವಿಜಯ್ ಮದುವೆ..?
ಮೊದಲ ಮಗುವನ್ನು ಸ್ವಾಗತಿಸಿದ ಬ್ಯೂಟಿಫುಲ್ ಕಪಲ್ಸ್…!
2021 ರಲ್ಲಿ ಮದುವೆಯಾದ ಈ ಜೋಡಿಗಳು, ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಸಂತಸದ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಪೋಷಕರಾಗಿರುವ ಈ ಜೋಡಿಗೆ ಸಿನಿಮಾರಂಗದ ಗಣ್ಯರು ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ತಾರಾ ದಂಪತಿಗಳು ಬೇಬಿ ಶೋವರ್ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದರು. ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ, ಕರಿನಾ ಕಪೂರ್, ಶ್ರೇಯಾ ಗೋಷಾಲ್ ಹಾಗೂ ಕತ್ರಿನಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ 71ನೇ ಬರ್ತ್ ಡೇ ಸ್ಪೆಷಲ್ ಏನು..?
2 ಮಿಲಿಯನ್ ಲೈಕ್ಸ್ ..! 42 ಸಾವಿರ ಮಂದಿ ಕಾಮೆಂಟ್!
ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಇದಕ್ಕೆ 2 ಮಿಲಿಯನ್ ಲೈಕ್ಸ್ ಸಿಕ್ಕಿವೆ. 42 ಸಾವಿರ ಮಂದಿ ಕಾಮೆಂಟ್ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಮಗುವಿಗಾಗಿ ಕುಕ್ಕೆ ಸುಬ್ರಮಣ್ಯ ದೇವರ ಮೊರೆ ಹೋಗಿದ್ದ ಬಾಲಿವುಡ್ ತಾರಾ ಜೋಡಿಗೆ ಮಗು ಜನಿಸಿದೆ. ಕತ್ರಿನಾ ಮದುವೆ ಬಳಿಕ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ, “ತುಂಬಾ ಸಂತೋಷ! ಅಭಿನಂದನೆಗಳು” ಎಂದು ಕಾಮೆಂಟ್ ಹಾಕಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್, “ಓಹ್! ಓಹ್! ಅಭಿನಂದನೆಗಳು, ನೀವು ಇಬ್ಬರು ತುಂಬಾ ಸಂತೋಷವಾಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಕರೀನಾ ಕಪೂರ್ ಖಾನ್, “ಕತ್ರಿನಾ ನಿಮಗೆ ತಾಯಂದಿರ ಕ್ಲಬ್‌ಗೆ ಸ್ವಾಗತ.. ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ನಟಿ ಪರಿಣೀತಿ ಚೋಪ್ರಾ ಕೂಡ ಕಾಮೆಂಟ್ ಮಾಡಿದ್ದು, “ಹೊಸ ಅಮ್ಮ ಮತ್ತು ಅಪ್ಪನಿಗೆ ಅಭಿನಂದನೆಗಳು” ಎಂದು ಬರೆದಿದ್ದಾರೆ. ಸದ್ಯ ಕತ್ರಿನಾ ಕೈಫ್ ಹೆಚ್ಚಿನ ಸಮಯ ಮಗುವಿನೊಂದಿಗೆ ಕಳೆಯಲು ಬಣ್ಣದ ಲೋಕದಿಂದ ವಿರಾಮ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕಬ್ಬು ವಿಚಾರದಲ್ಲಿ ಸಂಧಾನಕ್ಕೆ ಪ್ರಹ್ಲಾದ್ ಜೋಶಿ ಆಗ್ರಹ..!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











