Kamal Haasan Birthday: ಇಂದು ನಟ ಕಮಲ್ ಹಾಸನ್ ಅವರ 71ನೇ ಹುಟ್ಟುಹಬ್ಬ. ಚಿಕ್ಕ ವಯಸ್ಸಿನಲ್ಲಿಯೇ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಬಹುಭಾಷೆಗಳಲ್ಲ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇವರಿಗೆ ಅಭಿಮಾನಿಗಳ ಸಂಖ್ಯೆ ಅಪಾರ ಇದ್ದು, ಇಂದು ನಟನಿಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಷಯಗಳನ್ನು ಕೋರುತ್ತಿದ್ದಾರೆ.
ಇದನ್ನೂ ಓದಿ: ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಿಕರಿಗೆ ಉದ್ಯೋಗವಕಾಶ : ನಿರ್ಮಲಾ ಸೀತರಾಮನ್
ನಿರ್ದೇಶಕ, ಗಾಯಕರಾಗಿಯೂ ಗುರುತಿಸಿಕೊಂಡಿರುವ ಕಮಲ್ ಹಾಸನ್, ಒಟ್ಟು ಆಸ್ತಿ ಸುಮಾರು 450 ಕೋಟಿ ರೂಪಾಯಿ ಇದೆ. ತಮಿಳು ನಾಡಿನಲ್ಲಿ ಹೆಚ್ಚು ಫೇಮಸ್ ಆದ ಇವರು ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ತಮಿಳಿನ ಐಯ್ಯಂಗಾರ್ ಕುಟುಂಬದಲ್ಲಿ ಹುಟ್ಟಿದ ಇವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಕಲಾಧುರ ಕಣ್ಣಮ್ಮ ಕಮಲ್ ಹಾಸನ್ ನಟಿಸಿದ ಮೊದಲ ಚಿತ್ರ. ನಂತರ ಕಮಲ್ ಹಾಸನ್ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು.
ಇದನ್ನೂ ಓದಿ: ಅಪ್ರಾಪ್ತೆಯ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ರಾಜಕೀಯ ಮುಖಂಡನ ಪುತ್ರ
ಕಮಲ್ ಹಾಸನ್, ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಭಾಷೆಗಳಲ್ಲಿ ನಟಿಸಿ, ನಟ ಮಾತ್ರ ಅಲ್ಲ. ನಿರ್ದೇಶಕರ, ಚಿತ್ರಕಥೆ ಬರಹಗಾರ, ಗಾಯಕನಾಗಿಯೂ ಗಹೆಸರು ಗಳಿಸಿದ್ದಾರೆ. ಕಮಲ್ ಹಾಸನ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದು, ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿ ಪಡೆಯುತ್ತಾರೆ.
ಇದನ್ನೂ ಓದಿ: ಒಂಭತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಸುಮಾರು 450 ಕೋಟಿ ರೂಪಾಯಿ ಆಸ್ತಿ ಅವರನ್ನು ಹೊಂದಿದ್ದಾರೆ. ಕಮಲ್ ಹಾಸನ್ ಅವರು ಲಕ್ಷುರಿ ಜೀವನ ನಡೆಸುತ್ತಿದ್ದು, ಚೆನ್ನೈನಲ್ಲಿ ಮ್ಯಾನ್ಷನ್ ಹೊಂದಿದ್ದಾರೆ. ಇವರ ಬಳಿ ಬಿಎಂಡಬ್ಲ್ಯೂ 730, ಲೆಕ್ಸಸ್ ಎಲ್ಎಕ್ಸ್ 570 ಸೇರಿದಂತೆ ಹಲವಾರು ಕಾರುಗಳಿವೆ. ಥಗ್ ಲೈಫ್’ ಸಿನಿಮಾ ಸಂದರ್ಭದಲ್ಲಿ ಕಮಲ್ ಹಾಸನ್ ವಿವಾದ ಮಾಡಿಕೊಂಡಿದ್ದರು. ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿದ್ದರು. ಈ ವಿವಾದ ಚರ್ಚೆಗಳನ್ನು ಹುಟ್ಟುಹಾಕಿತ್ತು. ಆ ಬಳಿಕ ಕರ್ನಾಟಕದಲ್ಲಿ ಅವರ ಸಿನಿಮಾ ಬ್ಯಾನ್ ಆಯಿತು.
ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ತಂಡದಿಂದ ನೈತಿಕ ಪೊಲೀಸ್ ಗಿರಿ – ಇಬ್ಬರ ಬಂಧನ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











