ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರು

kadaba: ಒಂಭತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

Kadaba: ಶಾಲೆಯಿಂದ ಬಂದ ಬಾಲಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಲ್ಲಿ ನ.6 ರ ಸಂಜೆ ಈ ಘಟನೆ ನಡೆದಿದೆ.

ನೂಜಿಬಾಳ್ತಿಲ ಗ್ರಾಮದ ಖಂಡಿಗ‌ ಲೋಕೇಶ್ ಅವರ ಪುತ್ರ ಗಗನ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಗಗನ್‌ ಎಂದಿನಂತೆ ಶಾಲೆಗೆ ಹೋಗಿ ಬಂದಿದ್ದ.

ಸಂಜೆ ಮನೆಗೆ ಬಂದು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: Puttur: ವಿದ್ಯಾರ್ಥಿಗಳ ಮೇಲೆ ತಂಡದಿಂದ ನೈತಿಕ ಪೊಲೀಸ್‌ ಗಿರಿ – ಇಬ್ಬರ ಬಂಧನ

=========================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2NUxdpIvL2A?si=fWmoMsoNw25i7mH_

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 34

You cannot copy content of this page