Sullia : ಪ್ರಪ್ರಥಮ ಬಾರಿಗೆ ಸುಳ್ಯದಲ್ಲಿ ರಾಜ್ಯಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯು ಇಂದಿನಿಂದ ಅಂದ್ರೆ ನವೆಂಬರ್ 7ರಿಂದ ನಂಬರ್ 9 ರ ತನಕ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಸುಳ್ಯದ ಸ್ಪೋರ್ಟ್ಸ್ ಮತ್ತು ಅಸೋಸಿಯೇಷನ್ ಎನ್ನುವ ಸಂಸ್ಥೆ ಬೆಂಬಲ ನೀಡಲಿದ್ದು. ಸ್ಥಳೀಯ ಗಣ್ಯರನ್ನು ಸೇರಿಸಿಕೊಂಡು ಈ ಅಸೋಸಿಯೇಷನ್ ನ ಜೊತೆಯಲ್ಲಿ ಸಂಘಟನಾ ಸಮಿತಿಯ ಮೂಲಕ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಸಲು ಪೂರ್ವ ಸಿದ್ಧತೆಯಾಗಿರುತ್ತದೆ.
ಓಪನ್ ಗ್ರೌಂಡ್ ನಲ್ಲಿ ಇನ್ ಡೋರ್ ಸ್ಟೇಡಿಯಂ ರೀತಿ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಇರುವಂತಹ ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಫೆಡರೇಶನ್ ನವರ ಅಧಿಸೂಚನೆಯಂತೆ ಸ್ಟೇಡಿಯಂ ಸಿದ್ಧಪಡಿಸಲು ಮಾಹಿತಿಯನ್ನು ಪಡೆದುಕೊಳ್ಳಲಾಗಿರುತ್ತದೆ. ಜೊತೆಗೆ ಪೆವಿಲಿಯಮ್ ನಿರ್ಮಾಣವೂ ಅದ್ಭುತವಾಗಿರುತ್ತದೆ.
ರಾಜ್ಯದ 30-32 ಜಿಲ್ಲೆಗಳಿಂದ ಸುಮಾರು 350 ಕ್ಕೂ ಮೀರಿದ ವೇಯ್ಟ್ ಲಿಫ್ಟರ್ಸ್ ಗಳು ಸ್ಪರ್ಧೆಗೆ ಬರುವ ಅಂದಾಜಿದ್ದು, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ ಎಂದು ವರದಿಯಾಗಿರುತ್ತದೆ. ಸುಳ್ಯದಲ್ಲಿ ಸ್ಪರ್ಧಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿರುತ್ತದೆ.
25 ವರ್ಷದ ಹಿಂದೆ ಸುಳ್ಯದಲ್ಲಿ ಸ್ಥಾಪಿಸಲ್ಪಟ್ಟ ಸ್ಪೋರ್ಟ್ಸ್ ಮತ್ತು ಅಸೋಸಿಯೇಷನ್ ಸಂಸ್ಥೆಯ ನಿರ್ದೇಶಕರು, ಅಶೋಕ್ಪ್ರಭ ರವರು ಮಾತನಾಡಿ, ಕ್ರೀಡಾ ಇಲಾಖೆಯ ಕೆಲವು ನಿಭಂದನೆಯ ಮೂಲಕ ಕಳೆದ ಎರಡು ವರ್ಷಗಳಿಂದ ಈ ಸ್ಪರ್ಧೆ ಪ್ರಯತ್ನ ಪಟ್ಟಿರುವೆವು ಅದೆಲ್ಲವನ್ನು ಈಗ ಮುಗಿಸಿ ಪ್ರಾರಂಭದ ಹೊಸ್ತಿಲಲ್ಲಿ ಇರುವುದು ಹಾಗೂ ಸ್ಪರ್ಧೆಯನ್ನು ಪ್ರಪ್ರಥಮ ಬಾರಿಗೆ ಮಾಡುತ್ತಿರುವುದು ಸಂತೋಷ ಆಗ್ತಾ ಇದೆ. ಯಾವುದೇ ಕ್ರೀಡಾಕೂಡ ಇರಬಹುದು ಅದರ ಮೂಲ ಇರುವುದು ವೇಯ್ಟ್ ಲಿಫ್ಟಿಂಗ್ ನಲ್ಲಿ. ಕ್ರೀಡಾಪಟುವಿನ ಎನರ್ಜಿ ಉದ್ದೀಪನಗೊಳ್ಳಲು ಇದು ಸಹಕಾರಿ ಎಂದು ಹೇಳಿದರು.
ಇದನ್ನೂ ಓದಿ :Terrorist : ಪಹಲ್ಗಾಮ್ ದಾಳಿಯ ಬಳಿಕ ಜಮ್ಮುಕಾಶ್ಮೀರದಲ್ಲಿ ಮತ್ತೊಂದು ಉಗ್ರ ದಾಳಿಯ ಬಗ್ಗೆ ಸುಳಿವು
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2NUxdpIvL2A?si=fWmoMsoNw25i7mH_











