ಬ್ರೇಕಿಂಗ್ ನ್ಯೂಸ್
ದೇಶ

Gambling : ಬೆಟ್ಟಿಂಗ್ ದಂಧೆಯಲ್ಲಿ ಸಿಲುಕಿದ ಮಾಜಿ ಕ್ರಿಕೆಟಿಗರು

Gambling : ಮಾಜಿ ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಇವರಿಬ್ಬರೂ ವಿದೇಶಿ ಕಂಪನಿಗಳೊಂದಿಗೆ ಪ್ರಚಾರ ಒಪ್ಪಂದಗಳನ್ನು ಮಾಡಿಕೊಂಡಿದ್ದರು ಈ ಪ್ರಚಾರಕ್ಕಾಗಿ ವಿದೇಶಿ ಕಂಪನಿಗಳ ಮೂಲಕ ದೊರಕಿದ ಹಣವನ್ನು ಮರೆಮಾಚಲು ಹಲವು ಹಂತಗಳಲ್ಲಿ ಅದನ್ನ ವರ್ಗಾವಣೆಯನ್ನು ಕೂಡ ಮಾಡಿದ್ದರು ಈ ಹಣವು ಅಕ್ರಮ ಬೆಟ್ಟಿಂಗ್ ನಿಂದ ಬಂದ ಆದಾಯ ಎಂದು ತನಿಖಾ ಸಂಸ್ಥೆಗಳು ಇದರ ಬಗ್ಗೆ ತನಿಖೆ ಮಾಡಿ ತಿಳಿದುಕೊಂಡಿದೆ.

ಅಭಿಮಾನಿಗಳು ಇವರಿಬ್ಬರ ಈ ಕೆಲಸವನ್ನ ಮೆಚ್ಚಿಕೊಳ್ಳಲಾರದೆ ಆಶ್ಚರ್ಯ ಚಕಿತರಾಗಿದ್ದಾರೆ ಯಾರೂ ಕೂಡ ಊಹಿಸದಂತಹ ಕೆಲಸವನ್ನು ಮಾಡಿರುತ್ತಾರೆ. ಕೆಲವೊಂದು ವಿದೇಶಿ ಕಂಪನಿಗಳಿಂದ ಪಡೆದ ಹಣವನ್ನು ಅನುಮಾನಾಸ್ಪದವಾಗಿ ವಿವಿಧಡೆ ಹೂಡಿಕೆ ಮಾಡಿರುವ ಶಿಖರ ಧವನ್ ಮತ್ತು ಸುರೇಶ್ ರೈನ ಇದು ಕಾನೂನುಬಾಹಿರ ಎಂದು ತಿಳಿದು ಕೂಡ ಈ ದಂಧೆ ಜೊತೆ ಕೈಜೋಡಿಸಿರುವುದು ಈಡಿಗೆ ತಿಳಿದು ಬಂದಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 ಅಡಿಯಲ್ಲಿ ಈ ಕ್ರಮ ಜರುಗಿದೆ. ಸುರೇಶ್ ರೈನ ಅವರ ಹೆಸರಿನಲ್ಲಿರುವ 6.64 ಕೋಟಿ ರೂಪಾಯಿ ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಧವನ್ ಅವರ ಹೆಸರಿನಲ್ಲಿರುವ ನಾಲ್ಕು ಪಾಯಿಂಟ್ ಐದು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಡಿ ಮಾಹಿತಿಯನ್ನು ನೀಡಿರುತ್ತದೆ. ಈ ತನಿಖೆಯು ರಾಜ್ಯ ಪೊಲೀಸ್ ಇಲಾಖೆಗಳು ದಾಖಲಿಸಿದ್ದು ಹಲವು ಆಧಾರದ ಮೇಲೆ ನಡೆಯುತ್ತಿದ್ದು, ಪಾವತಿ ಗೇಟ್ ವೇ ಗಳ ಮೂಲಕ ಭಾರತೀಯ ಬಳಕೆದಾರರಿಗೆ ಆನ್ಲೈನ್ ಬೆಟ್ಟಿಂಗ್ ನಡೆಸಲು ಸಹಾಯ ಮಾಡುತ್ತಿದೆ ಈ ಒಂದು ವಿದೇಶಿ ಸಂಸ್ಥೆ. (1xBet) ಇದೀಗ ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ಹಳ್ಳಿಹಳ್ಳಿಗೂ ತಲುಪುತ್ತಿರುವುದು ಆತಂಕದ ವಿಷಯವಾಗಿದೆ. 1xBet (ಒಂದು ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್) ಭಾರತದಲ್ಲಿಯೂ ಬಹಳ ಜಟಿಲವಾದ ವಿಷಯವಾಗಿದೆ.

ಇದನ್ನೂ ಓದಿ : IPPB : ಕೇವಲ 299 ರೂ. ಪಾವತಿಗೆ 10 ಲಕ್ಷ ರೂ. ವಿಮೆ

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/2NUxdpIvL2A?si=6xLWN6mRMe2GnCgT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page