ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

Harish Roy: ಅಪ್ಪ ದೇಶಕ್ಕೋಸ್ಕರ ಕ್ರಿಕೆಟ್‌ ಆಡು ಅಂದ್ರು..ದೈವ ನಮ್ಮ ಕೈ ಬಿಡ್ತು..ಹರೀಶ್‌ ಮಗ ಕಣ್ಣೀರು!

Harish Roy: ಸ್ಯಾಂಡಲ್‌ ವುಡ್‌ ನಟ ಹರೀಶ್‌ ರಾಯ್‌ ಇಂದು ನಿಧನ ಹೊಂದಿದ್ದಾರೆ. ಐವತ್ತೆರಡನೇ ವಯಸ್ಸಿನಲ್ಲಿ ಕ್ಯಾನ್ಸರ್‌ ಕಾಯಿಲೆಯಿಂದ ಬಾಳಿ ಬದುಕಬೇಕಾದ ನಟ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಉಡುಪಿ ಭಟ್ಟರ ಮಗ..ಊರಿಂದ ಮುಂಬೈಗೆ ಓಡಿ ಹೋಗಿದ್ರು! ಭೂಗತಲೋಕ To ಬಣ್ಣದ ಲೋಕ!

ನಟನನ್ನು ಕಳೆದುಕೊಂಡ ಹರೀಶ್‌ ರಾಯ್‌ ಕುಟುಂಬ ಕಣ್ಣೀರಲ್ಲಿ ಮುಳುಗಿದ್ದು, ಹರೀಶ್‌ ರಾಯ್‌ ಅವರನ್ನು ಕಳೆದುಕೊಂಡ ನೋವಿನಲ್ಲಿದೆ. ಹಲವಾರು ನಟ ನಟಿಯರು ಇವರ ನಿಧನಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಹರೀಶ್‌ ರಾಯ್‌ ಅವರನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

ಇದೀಗ ಹರೀಶ್‌ ರಾಯ್‌ ಮಗ ತಂದೆಯ ಸಾವಿನ ಸುದ್ದಿಯಿಂದ ಕಣ್ಣೀರು ಹಾಕುತ್ತಿದ್ದಾರೆ. ನನ್ನ ತಂದೆಯ ಜೊತೆ ನಿನ್ನೆ ಮಾತನಾಡಿದೆ ಅವರು ಮಾತನಾಡಿದರು. ನನಗೆ ಏನಾದರೂ ಆದರೆ, ನನ್ನ ನಮ್ಮ ಉಡುಪಿಯ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಅಪ್ಪ ರಿಕ್ವೆಸ್ಟ್‌ ಮಾಡಿಕೊಂಡರು ಎಂದರು.

ದೈವ ಕಾಪಾಡ್ತೀನಿ ಅಂದು ಏನೂ ಮಾಡಲಿಲ್ಲ..ಹರೀಶ್‌ ರಾಯ್‌ ಮಗ ಕಣ್ಣೀರು!!

ಇನ್ನು ನನ್ನ ಅಪ್ಪನಿಗೆ ನಾನು ಕ್ರಿಕೆಟ್‌ ಆಟಗಾರ ಆಗಬೇಕು ಅಂತ ಆಸೆ, ನೀನು ದೇಶಕ್ಕೋಸ್ಕರ ಆಡು ಮಗ ಅಂದ್ರು. ನನ್ನ ಅಪ್ಪನಿಗೋಸ್ಕರ ದೇಶ ಅಲ್ಲ ಇಡೀ ದುನಿಯಾವನ್ನೇ ಕೊಂಡ್ಕೋತೀನಿ. ನಮ್ಮ ಮನೆಯಲ್ಲಿ ನನ್ನ ಅಣ್ಣನಿಗಿಂತಲೂ ನಾನೇ ಅಪ್ಪನಿಗೆ ತುಂಬಾ ಇಷ್ಟ. ಅವರು ಇಲ್ಲ ಅನ್ನೋವಾಗ ತಗೋಳ್ಳೋಕೆ ಆಗ್ತಿಲ್ಲ, ಕೆಲವೇ ದಿನ ಮತ್ತೆ ಮನೆಗೆ ಬರ್ತೀನಿ ಅಂತ ಹೇಳಿದ್ರು. ದೇಶಕ್ಕೋಸ್ಕರ ಆಡು ಮಗ ಅಂದ್ರು..ನೀನಿಲ್ಲ ಅಂದ್ರೆ ಆಡಲ್ಲ ಅಪ್ಪ ಅಂದೆ. ನಾ ನೋಡ್ತಾ ಇರ್ತೀನಿ ನೀ ಆಡು ಅಂತ ಹೇಳಿದ್ರು. ವಿರಾಟ್‌ ಕೊಹ್ಲಿ ಅಲ್ಲ ಅವರಿಗಿಂತ ತ್ರಿಬಲ್‌ ಆಡ್ತೀನಿ ನಮ್ಮ ಅಪ್ಪನಿಗೋಸ್ಕರ ಅಂತ ಅವರ ಮಗ ಹೇಳಿದ್ದಾರೆ. ಉಡುಪಿಯಲ್ಲಿ ದೈವದ ಜೊತೆ ಪ್ರಶ್ನೆ ಕೇಳಿದ್ದೆ, ಆಗ ಏನೂ ಆಗಲ್ಲ ಅಂತ ಹೇಳಿದ್ರು..ನಡೆಸ್ಕೊಡ್ತೀನಿ ಅಂತ ದೈವ ಹೇಳಿತ್ತು. ಆದ್ರೆ ಈಗ ದೈವವೇ ಕೈ ಬಿಟ್ಟಿದೆ.. ಎಲ್ಲಿದೆ ದೈವ ಅಂತ ಹರೀಶ್‌ ರಾಯ್‌ ಮಗ ಮಾಧ್ಯಮಗಳ ಜೊತೆ ಮಾತನಾಡಿ ಕಣ್ಣೀರು ಹಾಕಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 168

You cannot copy content of this page