Jci uppinangady:ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಜೇಸಿಐ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ತರಬೇತಿ ಮತ್ತು ಪೂರ್ವಾಧ್ಯಕ್ಷರುಗಳ ಸಮಾಲೋಚನೆ ಸಭೆ ನಡೆಯಿತು. ರಾಷ್ಟ್ರೀಯ ತರಬೇತುದಾರರಾದ ಜೇಸಿ ಸುಧಾಕರ್ ಪೂಜಾರಿ ಕಾರ್ಕಳ “Leadership Tomorrow “(creating leaders shaping the future”) ತರಬೇತಿಯನ್ನು ರೀತಿಯಲ್ಲಿ ನಡೆಸಿಕೊಟ್ಟರು.
ಟ್ರಸ್ಟ್ ಅಧ್ಯಕ್ಷರಾದ ಜೇಸಿ ಪ್ರಶಾಂತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪೂರ್ವಾಧ್ಯಕ್ಷರಾದ ಜೇಸಿ ಉಮೇಶ್ ಆಚಾರ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಜೇಸಿ ಗಣೇಶ್ ಜೇಸಿವಾಣಿ ವಾಚಿಸಿದರು.ಜೇಸಿ ಡಾ.ಶಿವರಾಮ್ ಪನ್ಯ ತರಬೇತುದಾರರನ್ನು ಸಭೆಗೆ ಪರಿಚಯಿಸಿದರು.
ನಿಕಟಪೂರ್ವ ಅಧ್ಯಕ್ಷರು ಮತ್ತು 2026ನೇ ಸಾಲಿನ ಜೇಸಿಐ ಘಟಕದ ಅಧ್ಯಕ್ಷರ ಆಯ್ಕೆಯ ಸಮಿತಿಯ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೋ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೇಸಿ ಅವನೀಶ್ ಪೆರಿಯಡ್ಕ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಜೇಸಿ ಗಣೇಶ್ ಅವರ ಹೆಸರನ್ನು ಸಭೆಯಲ್ಲಿ ಪ್ರಕಟಿಸಿದರು.
ಘಟಕದ ಹಿರಿಯ ಮತ್ತು ಕಿರಿಯ ಜೇಸಿ ಸದಸ್ಯರು ಜೇಸಿ ಉಮೇಶ್ ಆಚಾರ್ಯ ಅವರ ಮಗಳ ಆರೋಗ್ಯದ ಸುಧಾರಣೆಗೆ 52000 ಮಿಕ್ಕಿ ಆರ್ಥಿಕ ನೆರವು ನೀಡಿದ್ದನ್ನು ಸ್ಮರಿಸಿ, ಘಟಕದ ಕಾರ್ಯದರ್ಶಿ ಜೇಸಿ ಮಹೇಶ್ ಇವರ ಮಗನ ಅನಾರೋಗ್ಯಕ್ಕೆ ಕೂಡ ಆರ್ಥಿಕ ನೆರವು ನೀಡುವ ಚೆಕ್ ಅನ್ನು ಪೂರ್ವಾಧ್ಯಕ್ಷರಾದ ಜೇಸಿ ಡಾ. ರಾಜಾರಾಂ ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಜೇಸಿ ಡಾ.ಗೋವಿಂದ ಪ್ರಸಾದ್ ಕಜೆ, ಜೇಸಿ ವಿಜಯ್ ಕುಮಾರ್ ಕಲ್ಲಿಳಿಕೆ, ಜೇಸಿ ನೀರಜ್ ಕುಮಾರ್, ಜೇಸಿ ಮೋನಪ್ಪ ಪಮ್ಮನ ಮಜಲು, ಜೇಸಿ ಆನಂದ ರಾಮಕುಂಜ, ಜೇಸಿ ಕೆ.ವಿ ಕುಲಾಲ್, ಜೇಸಿ ಹರೀಶ್ ನಟ್ಟಿಬೈಲ್, ಜೇಸಿ ಶೇಖರ್ ಗೌಂಡತ್ತಿಗೆ ಸೇರಿದಂತೆ ಜೇಸಿ ಸದಸ್ಯರು ಉಪಸ್ಥಿತರಿದ್ದರುಕಾರ್ಯದರ್ಶಿ ಜೇಸಿ ಮಹೇಶ್ ಖಂಡಿಗ, ಪೂರ್ವಾಧ್ಯಕ್ಷ ಮತ್ತು ವಲಯಾಧಿಕಾರಿ ಜೇಸಿ ಮೋಹನ್ ಚಂದ್ರ ತೋಟದ ಮನೆ ಸಹಕರಿಸಿದರು.ಸದಸ್ಯರಾದ ಜೇಸಿ ಅತುಲ್ ಕಶ್ಯಪ್ ತಾಲ್ತಾಜೆ ದಂಪತಿ ಗಳು,ಜೇಸಿ ಆಕಾಶ್ ಪಿ ಬಿ, ಜೇಸಿ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ : WHO : ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ಸುದ್ದಿ : ವಿಶ್ವ ಆರೋಗ್ಯ ಸಂಸ್ಥೆ
.…………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess












