WHO : ಬರೋಬ್ಬರಿ ಐವತ್ತರಿಂದ ಅರವತ್ತು ವರ್ಷಗಳ ಕಾಲ ಫಲ ನೀಡುವ, ದಕ್ಷಿಣ ಕನ್ನಡದ ಪ್ರಮುಖ ಬೆಳೆಗಳಲ್ಲಿ ಅಡಿಕೆ ಬೆಳೆಯು ಒಂದಾಗಿದೆ. ಆರೋಗ್ಯ ಸಚಿವಾಲಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಗಳ ಪ್ರಕಾರ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಪದಾರ್ಥಗಳ ಪಟ್ಟಿಯಲ್ಲಿ ಅಡಿಕೆಯನ್ನು ಸೇರಿಸಿರುವುದು ಬೆಳೆಗಾರರಿಗೆ ಬೇಸರದ ವಿಚಾರವಾಗಿತ್ತು. ಆದರೆ ಈಗ ಬಂದಿರುವ ವರದಿಯ ಪ್ರಕಾರ, ಅಡಿಕೆ ಬೆಳಗಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಅಡಿಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿ ಬಂಧಕ ಗುಣಗಳನ್ನು ಹೊಂದಿವೆ ಎಂದು ಯೆನಪೊಯ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಕ್ಯಾನ್ಸರ್ ಕೋಶಗಳ ವೃದ್ಧಿಯನ್ನು ತಡೆಯುತ್ತವೆ ;
ಯೆನೆ ಪೊಯ ವಿಶ್ವವಿದ್ಯಾನಿಲಯವು ಅಡಿಕೆಯ ಮೇಲೆ ಸಂಶೋಧನಾ ಆಧಾರಿತ ಅಧ್ಯಯನ ನಡೆಸಿ ತಯಾರಿಸಿದ ವರದಿಯಲ್ಲಿ ಅಡಿಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ. ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂದು ತಿಳಿಸಲಾಗಿದೆ.
ಅಡಿಕೆಯು ಆರೋಗ್ಯದಾಯಕ ಲಾಭಗಳನ್ನು ಹೊಂದಿವೆ ;
ಅಡಿಕೆ ಸಾರ ಕ್ಯಾನ್ಸರ್ ಕೋಶಗಳ ವೃದ್ಧಿ ಮತ್ತು ಹರಡುವಿಕೆಯನ್ನು ತಡೆಯುತ್ತದೆ ಎಂಬುದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಸಾಂಪ್ರದಾಯಿಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದಲ್ಲಿ ಆರೋಗ್ಯದಾಯಕ ಲಾಭಗಳಿವೆ,ಅಡಿಕೆ ಸೇವನೆಯು ಆರೋಗ್ಯಕರ ಕೋಶಗಳಿಗೆ ಯಾವುದೇ ರೀತಿ ಹಾನಿ ಉಂಟು ಮಾಡುವುದಿಲ್ಲ ಎಂದು ಸಂಶೋಧನಾ ವರದಿಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ : Government Place : ಸರ್ಕಾರಿ ಸ್ಥಳಗಳ ಕಾರ್ಯಕ್ರಮಕ್ಕೆ ಅನುಮತಿ ಖಡ್ಡಾಯ : ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್
………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=ouBPhn5iTQwNIPSm











