ಬ್ರೇಕಿಂಗ್ ನ್ಯೂಸ್
ಕರ್ನಾಟಕ

Harish Roy : ನಾಲ್ಕೈದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹರೀಶ್ ರಾಯ್

Harish Roy : ಖಳನಟ ಹರೀಶ್ ರಾಯ್ (55 ವರ್ಷ) ಈಗಾಗಲೇ ಇಹ ಲೋಕ ತ್ಯಜಿಸಿದ್ದು, ಇವರು ಸತತ 4 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹಲವಾರು ಸಿನೆಮಾ ಗಳಲ್ಕಿ ಖಳನಟ ನಾಗಿಯೇ ಕಾಣಿಸಿಕೊಂಡ ಹರೀಶ್ ರವರು ಸಿನೆಮಾದಲ್ಲಿ ಬಂದಿರುವ ‘ರಾಯ್’ ಎಂಬ ಹೆಸರಿನಿಂದ ಹರೀಶ್ ರಾಯ್ ಅಂತ ಕರೆಯಿಸಿಕೊಳ್ತಾ ಇದ್ದರು.

ಮೂರು ನಾಲ್ಕು ವರ್ಷಗಳಿಂದ ಕ್ಯಾನ್ಸರ್ ;

ಮೂರು ನಾಲ್ಕು ವರ್ಷಗಳಿಂದ ಕ್ಯಾನ್ಸರ್ ಇದೆ ಅಂದ್ರೂ ಜೀವನೋತ್ಸಾಹವನ್ನು ಬಿಟ್ಟಿರಲಿಲ್ಲ. ಚಿಕಿತ್ಸೆಗಾಗಿ ಬರೋಬ್ಬರಿ 3 ವರೆ ಲಕ್ಷದ ಇಂಜೆಕ್ಷನ್ ನನ್ನು ಕೂಡಾ ಪಡೆದುಕೊಳ್ತಾ ಇದ್ದರು ಅಂತ ವರದಿಯಾಗಿದೆ. ಒಂದು ಇಂಜೆಕ್ಷನ್ ಇಷ್ಟೊಂದು‌ ಲಕ್ಷ ಬೆಲೆ ತೆರಬೇಕಾಯ್ತು ಅಂತ ಹಲವರ ಸಹಾಯವನ್ನೂ ಬೇಡಿಕೊಂಡಿದ್ರು. ಹಣಕಾಸಿನ ಸಮಸ್ಯೆಯಾದ ಕಾರಣ ಹಣದ ಸಹಾಯಕ್ಕಾಗಿ ಶಿವರಾಜ್ ಕುಮಾರ್, ದರ್ಶನ್ , ಯಶ್ ಮುಂತಾದ ನಟರೂ ಕೂಡ ಇವರಿಗೆ ಸಹಾಯ ಮಾಡಿದ್ದು, ಇದನ್ನು ಆಗಾಗ್ಗೆ ಹರೀಶ್ ರಾಯ್ ರವರು ನೆನಪಿಸಿಕೊಳ್ತಾ ಇದ್ರು ಕೂಡಾ.

ಮೊದಲ ಚಿತ್ರ ಓಂ ನಲ್ಲಿ ಹೆಸರು ಮಾಡಿದ್ದರು, ಇದು ಅವರ ಮೊದಲ ಚಿತ್ರವಾಗಿದ್ದು, ಕೆ.ಜಿ.ಎಫ್ ನಲ್ಲಿ ಶಾಜಾ ಅಂತಲೇ ಕನ್ನಡಿಗರ ಮನೆ ಮಾತಾಗಿದ್ರು ರಾಯ್. ತನ್ನ ಸಂಸಾರ ಹಾಗೂ ಮಕ್ಕಳಿಗೆ ಆಸರೆ ಆಗ್ಬೇಕು ಅಂತ ತಮ್ಮ ಶಕ್ತಿಗೆ ಮೀರಿ ಕ್ಯಾನ್ಸರ್ ಜೊತೆ ಹೋರಾಟ ಮಾಡ್ತಾ ಇದ್ರು. ಅನೇಕ ಕನಸುಗಳನ್ನು ಹೊತ್ತುಕೊಂಡು ನಡೆಯುತ್ತಿದ್ದ ನಟ ಅನೇಕ ಸ್ಯಾಂಡಲ್ ವುಡ್ ನ ಅನೇಕ ನಟರಿಗೂ ಆಪ್ತರಾಗಿದ್ದರು. ಸಿನೆಮಾ ದಲ್ಲಿ ನಟಿಸಲು ಅವಕಾಶ ಬಂದಿದ್ದರೂ ಕ್ಯಾನ್ಸರ್ ಚಿಕಿತ್ಸೆಗೆ ಅವರನ್ನು ತೊಡಗಿಸಿಕೊಂಡಿದ್ದರು. ಒಂದೆರಡು ಸಿನೆಮಾಗಳಲ್ಲಿ‌ ಮಾತ್ರ ಕೊನೆಯಲ್ಲಿ ಇವರು ನಟಿಸಿ ಮತ್ತೆ ಸಂಪೂರ್ಣವಾಗಿ ಚಿಕಿತ್ಸೆಗಾಗಿಯೇ ಜೀವನ ಸವೆದಿರುತ್ತಾರೆ ಕೊನೆಯಲ್ಲಿ ಉಸಿರಾಟ ತೊಂದರೆ ಬಂದಿರುವುದಾಗಿ ತಿಳಿದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಇಂಜೆಕ್ಷನ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ.

ಇದನ್ನೂ ಓದಿ : Harish Rai: KGF ಚಾಚಾ..ನಟ ಹರೀಶ್ ರಾಯ್ ಇನ್ನಿಲ್ಲ..!

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=ouBPhn5iTQwNIPSm

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page