BBK12: ಬಿಗ್ ಬಾಸ್ ಸೀಸನ್ 12 ರಲ್ಲಿ ಈ ವಾರ ಮನೆಯಿಂದ ಬಂದ ಪತ್ರಗಳು ಸ್ಪರ್ಧಿಗಳ ಕೈ ತಲುಪುವ ಸಮಯ. ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ತಮ್ಮ ಮನೆಯಿಂದ ಬಂದಿರುವಂತಹ ಪತ್ರಗಳನ್ನು ಓದುವ ಬಯಕೆ. ಈ ಮೂಲಕ ಒಬ್ಬರನ್ನು ಒಬ್ಬರು ನಾಮಿನೇಟ್ ನಿಂದ ಪಾರು ಮಾಡಿಕೊಳ್ಳುವಂತಹ ಸಮಯ ಇದಾಗಿದೆ.
ಈ ವಾರ ಯಾವುದೇ ಟಾಸ್ಕ್ ಗಳು ಇಲ್ಲದೆ ಸ್ಪರ್ಧಿಗಳು ತಮ್ಮ ಮಾತಿನಲ್ಲಿಯೇ ಒಬ್ಬರನ್ನು ಒಬ್ಬರು ನಾಮಿನೇಟ್ ನಿಂದ ಪಾರು ಮಾಡುವ ಸಮಯ ಇದಾಗಿರುವುದರಿಂದ, ಮನೆಯಿಂದ ಬಂದ ಪತ್ರಗಳನ್ನು ಓದಬೇಕು ಎಂದರೆ ಒಂದೋ ತಾನು ಬಿಟ್ಟುಕೊಡಬೇಕು, ಅಥವಾ ತನ್ನ ಪತ್ರ ತಾನೇ ಓದಿ ತನ್ನನ್ನೇ ನಾಮಿನೇಷನ್ ನಿಂದ ಸೇವ್ ಮಾಡಿಕೊಳ್ಳಬೇಕು.
ನಿಮ್ಮ ಪ್ರಕಾರ ಯಾರಿಗೆ ಪತ್ರ ಸಿಗಬೇಕು..?
ಈಗಾಗಲೇ ಮನೆಯ ಹಲವಾರು ಮಂದಿಗೆ ಪತ್ರಗಳು ಸಿಕ್ಕಿವೆ. ಇದರ ಜೊತೆಗೆ ಇದೀಗ ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿ ಅವರಿಗೆ ಕಳೆದ ದಿನ ಪತ್ರ ಬಂದಿದೆ. ಇದರಲ್ಲಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು..? ಯಾರಿಗೆ ಪತ್ರ ಸಿಗಬೇಕು? ಎಂದು ಮನೆಯವರು ಒಮ್ಮತದಿಂದ ನಿರ್ಧಾರ ಮಾಡಬೇಕು, ಹೀಗಿರುವಾಗ ಇಬ್ಬರೂ ಕೂಡ ಬಹಳ ದಿನದಿಂದ ಕಾಯುತ್ತಿದ್ದಾರೆ. ಮನೆಯವರ ಪತ್ರಗಳನ್ನು ಓದುವುದಕ್ಕೆ ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿ ಬಹಳನೇ ಕಣ್ಣೀರಲ್ಲಿ ಕಾಯುತ್ತಿದ್ದಾರೆ.
ಪ್ರೋಮೋದಲ್ಲಿ ರಕ್ಷಿತಾ ಶೆಟ್ಟಿ ಕಣ್ಣೀರು..!
ಇನ್ನು ಯಾರು ಹೆಚ್ಚಿನ ಸಂಖ್ಯೆಯಲ್ಲಿ ಒಬ್ಬರ ಹೆಸರನ್ನು ಹೇಳುತ್ತಾರೋ ಆ ವ್ಯಕ್ತಿಗೆ ಮನೆಯವರ ಪತ್ರವನ್ನು ಓದಲು ಅವಕಾಶ ಸಿಗುತ್ತದೆ. ಹೀಗಾಗಿ ರಿಲೀಸ್ ಆದಂತಹ ಪ್ರಮೋದಲ್ಲಿ ರಕ್ಷಿತಾ ಶೆಟ್ಟಿ ಅಳುತ್ತಿರುವುದು ಕಾಣಬಹುದು. ಮನೆಯವರೆಲ್ಲರೂ ಕೂಡ ರಾಶಿಕಾ ಶೆಟ್ಟಿ ಅವರಿಗೆ ಪತ್ರ ಸಿಗಬೇಕು ಎಂದು ಹೇಳಿದ್ದಾರೆ. ರಘು ಅವರು ರಕ್ಷಿತಾ ಶೆಟ್ಟಿಗೆ ಪತ್ರ ಸಿಕ್ಕರೆ ಒಳ್ಳೆಯದು ಎಂದು ಅಭಿಪ್ರಾಯ ಹೇಳಿದ್ದಾರೆ.
ರಕ್ಷಿತಾ ಬಗ್ಗೆ ಅಶ್ವಿನಿ ಗೌಡ ತಿರುಗೇಟು…!
ಈ ಬಗ್ಗೆ ರಿಲೀಸ್ ಆದಂತಹ ಪ್ರೋಮೊದಲ್ಲಿ ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿಯ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರೆ. ಅವಳು ಮಾತನಾಡುವುದು ಸರಿ ಇಲ್ಲ. ಬಹಳ ತಪ್ಪಾಗಿ ಮಾತನಾಡುತ್ತಾಳೆ. ನನಗೆ ಅದು ವೈಯಕ್ತಿಕವಾಗಿ ನೋವು ತಂದಿದೆ. ಹೀಗಾಗಿ ರಕ್ಷಿತಾ ಶೆಟ್ಟಿಗೆ ಮನೆಯವರ ಪತ್ರ ಸಿಗಬಾರದು. ಹಾಗಾಗಿ ನಾನು ರಾಶಿಕಾ ಶೆಟ್ಟಿ ಅವರಿಗೆ ಪತ್ರ ಸಿಗಬೇಕು ಎಂದು ಹೇಳುತ್ತೇನೆ ಎಂದು ಖಡಕ್ಕಾಗಿ ಮನೆಯವರ ಎದುರು ಹೇಳಿದ್ದಾರೆ. ರಕ್ಷಿತಾ ಮಾತನಾಡಿರುವುದು ತಪ್ಪು. ಅವಳು ಹಾಗೆ ಮಾತನಾಡಬಾರದು ಎಂದು ಅಶ್ವಿನಿ ಗೌಡ ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಇನ್ನು ಇವತ್ತಿನ ಸಂಚಿಕೆಯಲ್ಲಿ ನಿಜಕ್ಕೂ ರಕ್ಷಿತಾ ಹಾಗೂ ರೌಶಿಕಾ ಶೆಟ್ಟಿ ಅವರಲ್ಲಿ ಯಾರಿಗೆ ಮನೆಯವರ ಪತ್ರ ಓದಲು ಸಿಕ್ಕಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ. ನಿಮ್ಮ ಪ್ರಕಾರ ಇವರಿಬ್ಬರಲ್ಲಿ ಯಾರಿಗೆ ಮನೆಯವರ ಪತ್ರ ಸಿಗಬೇಕು ಎಂದು ತಿಳಿಸಿ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











