Vishweshwar Hegde Kageri: ಹೊನ್ನಾವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಂದೇ ಮಾತರಂ ಗೀತೆಯನ್ನು ಹೊಗಳುವ ಭರದಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡುವಂತೆ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಕಾರಿನಲ್ಲಿತ್ತು ಕೋಟಿ ಮೌಲ್ಯದ ಸೊತ್ತು!
ರಾಷ್ಟ್ರಗೀತೆಗೆ ಸರಿಸಮಾನವಾದ ವಂದೇ ಮಾತರಂ ಗೀತೆಯೂ ಇದೆ, ಅದು ರಾಷ್ಟ್ರಗೀತೆಯಾಗಬೇಕೆಂಬ ಕೂಗು ಬಲವಾಗಿತ್ತು ಎಂಬ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೊನ್ನಾವರದ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಮೈ ಭಾರತ್ ಕೇಂದ್ರ ಉತ್ತರ ಕನ್ನಡ ಕಾರವಾರ ಹಾಗೂ ತಾಲೂಕಾಡಳಿತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದ ಭಾಷಣದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ದಯವಿಟ್ಟು ಗಮನಿಸಿ.. ಇಂದು ಎಲ್ಲೆಲ್ಲಿ ಕರೆಂಟ್ ಇರಲ್ಲ..?
ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದೇನು..?
ಬಂಕಿಮ್ ಚಂದ್ರ ಚಟರ್ಜಿ ‘ವಂದೇ ಮಾತರಂ’ ಗೀತೆಯನ್ನು ಬರೆದು 150ನೇ ವರ್ಷಗಳು ಸಂದ ಈ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿದೆ. ನಮ್ಮ ದೇಶದಲ್ಲಿ ಜನಗಣಮನ ರಾಷ್ಟ್ರಗೀತೆಗೆ ಸರಿಸಮಾನವಾದ ವಂದೇ ಮಾತರಂ ಗೀತೆ ಕೂಡ ಇದೆ. ನಾನು ಮತ್ತೆ ಇತಿಹಾಸ ಕೆದಕೋಕೆ ಹೋಗೋದಿಲ್ಲ. ‘ವಂದೇ ಮಾತರಂ’ ಗೀತೆಯೇ ರಾಷ್ಟ್ರಗೀತೆಯಾಗಬೇಕೆನ್ನುವ ಕೂಗು ಬಲವಾಗಿತ್ತು. ಆದರೆ ಅವತ್ತಿನ ನಮ್ಮ ಪೂರ್ವಜರು ‘ವಂದೇ ಮಾತರಂ’ ಇರಲಿ.
ಇದನ್ನೂ ಓದಿ: ಸಾರಿಗೆ ಸಚಿವರನ್ನು ಭೇಟಿ ಮಾಡಿ ಕೂರ್ಗ್ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿದ ಎ.ಎಸ್ ಪೊನ್ನಣ್ಣ
ಹಾಗೆಯೇ ಬ್ರಿಟಿಷ್ ಅಧಿಕಾರಿಗಳನ್ನು ಸ್ವಾಗತಿಸಲು ರಚಿಸಿದ ‘ಜನಗಣಮನ’ವೂ ಇರಲಿ.. ಎಂದು ಎರಡನ್ನು ಸೇರಿಸಿ ಇವತ್ತಿಗೆ ಅದನ್ನು ನಾವು ಒಪ್ಪಿಕೊಂಡು ಪಾಲಿಸುತ್ತಿದ್ದೇವೆ ಎಂದು ಅವರು ಮಾತನಾಡಿದ್ದಾರೆ. ವಂದೇ ಮಾತರಂ ಗೇ 150 ನೇ ವರ್ಷ ಪೂರೈಸಿದ ಹಿನ್ನೆಲೆ ಕಂಠ, ಕಂಠಗಳಲ್ಲಿ ಗೀತೆ ಪ್ರತಿದ್ವನಿಸಬೇಕು. ಶಾಲಾ ಕಾಲೇಜುಗಳಲ್ಲಿ ಹಾಡು ಕಂಠಸ್ಥವಾಗಿ ಮತ್ತೆ ಮೊಳಗಬೇಕು ಎಂದರು. ಈ ವೀಡಿಯೋ ವೈರಲ್ ಆಗುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಗುಡ್ಡೆಮನೆ ಅಪ್ಪಯ್ಯ ಗೌಡರ ವಿರುದ್ದ ಅವಹೇಳನಕಾರಿ ಕಾಮೆಂಟ್..! ಕೆರಳಿದ ಅರೆಭಾಷಿಕರು!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











