Shabarimale: ಪ್ರತೀ ವಾರ್ಷಿಕವಾಗಿ ಮಕರ ಸಂಕ್ರಾಂತಿಯಂದು ಕಾಣಿಸುವ ಪವಿತ್ರ ಜ್ಯೋತಿಗಾಗಿ ಸಹಸ್ರ ಜನರು ಅಯ್ಯಪ್ಪನ ಸನ್ನಿಧಾನಕ್ಕೆ ಬರುತ್ತಾರೆ. ಎಲ್ಲಾ ವರ್ಗದ ಭಕ್ತರಿಗೆ ಪ್ರವೇಶವಿರುವ ಈ ಸನ್ನಿಧಾನವು ನವೆಂಬರ್ 17 ರಂದು ಬಾಗಿಲನ್ನು ತೆರೆದು, ಜನವರಿ14 ರ ಮಕರ ಸಂಕ್ರಮಣ ಮಹೋತ್ಸವಕ್ಕೆ ಅಣಿಯಾಗಲಿದೆ. ಶಬರಿಮಲೆ ಶ್ರೀ ಅಯ್ಯಪ್ಪನ ಸನ್ನಿಧಾನದಲ್ಲಿ ನಡೆಯಲಿರುವ ಮಂಡಲ ಮಹೋತ್ಸವ ಅಂಗವಾಗಿ ದಕ್ಷಿಣ ರೈಲ್ವೆಯು 5 ವಿಶೇಷ ರೈಲು ಸೇವೆಯನ್ನು ಘೋಷಿಸಿರುತ್ತದೆ.
ಅಪಾರ ಸಂಖ್ಯೆಯಲ್ಲಿ ಭಕ್ತರು ಬರಲಿದ್ದು, ಮುಂಚಿತವಾಗಿಯೇ ಎಲ್ಲಾ ತೆರನಾದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಮಂಡಲ ಪೂಜೆ ಡಿಸೆಂಬರ್ 27 ರಂದು ನಡೆಯಲಿದ್ದು, ಮಕರ ಸಂಕ್ರಮಣ ಮಹೋತ್ಸವ ಜನವರಿ 14, 2026 ರಂದು ನಿಗದಿಯಾಗಿದ್ದು, ಈಗಲೇ ಆನ್‌ಲೈನ್ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಹೀಗಾಗಿ, ವಿಶೇಷ ರೈಲು ಘೋಷಣೆಯನ್ನೂ ಮಾಡಲಾಗಿರುತ್ತದೆ.
20 ಸಾವಿರ ಮಂದಿಗೆ ಸ್ಪಾಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸದ್ಯ 5 ರೈಲು ಸೇವೆಯನ್ನು ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಮಾಡಲಾಗುವುದು. ಇದರ ಬುಕ್ಕಿಂಗ್ ಸಹ ಆರಂಭಗೊಳ್ಳಲಿದೆ ಎಂದು ದಕ್ಷಿಣ ರೈಲ್ವೆ ಇಲಾಖೆಯು ತಿಳಿಸಿದೆ. ಮಕರ ಜ್ಯೋತಿಯನ್ನು ನೋಡುವುದು ದುಷ್ಟ ನಾಶ, ಶುಭಾರಂಭ ಮತ್ತು ದಿವ್ಯ ಪ್ರಭಾವವನ್ನು ಸೂಚಿಸುತ್ತದೆ ಎಂದು ನಂಬುತ್ತಾರೆ.
ಇದನ್ನೂ ಓದಿ : Movie : ನವೆಂಬರ್ 7 ಕ್ಕೆ ಮರುಬಿಡುಗಡೆಯಾಗಲಿದೆ ‘ಯಜಮಾನ’ : ಹೊಸ ತಂತ್ರಜ್ಞಾನದೊಂದಿಗೆ ಸಾಹಸ ಸಿಂಹ ವಿಷ್ಣುವರ್ಧನ್
….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wUcWTshTMXo?si=qTp6Zeeu3MaZsdur











