ಬ್ರೇಕಿಂಗ್ ನ್ಯೂಸ್
ಕರ್ನಾಟಕ

Movie : ನವೆಂಬರ್ 7 ಕ್ಕೆ ಮರುಬಿಡುಗಡೆಯಾಗಲಿದೆ ‘ಯಜಮಾನ’ : ಹೊಸ ತಂತ್ರಜ್ಞಾನದೊಂದಿಗೆ ಸಾಹಸ ಸಿಂಹ ವಿಷ್ಣುವರ್ಧನ್

Movie : ಸಾಹಸಸಿಂಹ ವಿಷ್ಣುವರ್ಧನ್ ಅಭಿನಯಿಸಿದ 25 ವರ್ಷದ ಬಳಿಕ ಇದೀಗ ಮರು ಬಿಡುಗಡೆಯಾಗಲು ಸಜ್ಜಾಗುತ್ತಿದೆ ‘ಯಜಮಾನ’ ಚಲನಚಿತ್ರ. ಆಧುನಿಕ ತಂತ್ರಜ್ಞಾನಗಳೊಂದಿಗೆ ಮರು ಬಿಡುಗಡೆ ಮಾಡಲು ಈಗಾಗಲೇ ಸಿದ್ಧವಾಗಿರುತ್ತದೆ. ಯಜಮಾನ ಸಿನೆಮಾದ ಆಡಿಯೋ ಮತ್ತು ವೀಡಿಯೋ ಗುಣಮಟ್ಟದ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮತ್ತಷ್ಟು ಹೊಸತನ್ನು ನವೀಕರಿಸಲಾಗಿರುತ್ತದೆ.

ಬುಕ್ ಮೈ ಶೋ ನಲ್ಲಿ ಟಿಕೇಟ್ ಬುಕ್ಕಿಂಗ್ ಗೆ ಅವಕಾಶ :
ನವೆಂಬರ್ 7 ರಿಂದ ರಾಜ್ಯದ ಕೆಲವು ಮುಖ್ಯ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಗೆ ನಿರ್ಧಾರವಾಗಿದೆ. ಹಾಗೂ ಈಗಾಗಲೇ ಬುಕ್ ಮೈ ಶೋ ನಲ್ಲಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದ್ದು, ಇದೇ ತಿಂಗಳು 07, 08, 09 ರಂದು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಯಜಮಾನ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಹೊಸ ತಂತ್ರಜ್ಞಾನಗಳ ಅಳವಡಿಕೆ ;
ಯಜಮಾನ ಸಿನೆಮಾದಲ್ಲಿ ವಿಷ್ಣುವರ್ಧನ್, ಶಶಿಕುಮಾರ್, ಅಭಿಜಿತ್, ಪ್ರೇಮಾ, ರಮೇಶ್ ಭಟ್, ಅವಿನಾಶ್, ಪವಿತ್ರಾ ಲೋಕೇಶ್, ಟೆನಿಸ್ ಕೃಷ್ಣ, ಎಂ.ಎನ್ ಲಕ್ಷ್ಮೀ ದೇವಿ, ಶೋಭರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಅಲ್ಲದೇ, ಈ ಹಳೆಯ ಜನಪ್ರಿಯ ಚಲನಚಿತ್ರವನ್ನು ಅದರ ಮಟ್ಟಕ್ಕಿಂತ ಉತ್ತಮಗೊಳಿಸಲು ಪ್ರಯತ್ನಿಸಲಾಗಿದೆ. ದೃಶ್ಯ ಹಾಗೂ ಧ್ವನಿಯಲ್ಲಿಯೂ ಹೊಸ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಹೊಸತನವನ್ನು ತರಿಸಲಾಗಿದೆ. ಥಿಯೇಟರ್ ನಲ್ಲಿ ಕುಟುಂಬ ಸಹಿತ ನೋಡಬಹುದಾದ ಚಲನಚಿತ್ರವಾಗಿದೆ.

ಇದನ್ನೂ ಓದಿ : Malavika Avinash: ನ. 7ರಂದು ದೇಶದೆಲ್ಲೆಡೆ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ: ನಟಿ ಮಾಳವಿಕ ಅವಿನಾಶ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wUcWTshTMXo?si=qTp6Zeeu3MaZsdur

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page