ಬೀದರ್ : ಇಂದು ಮುಂಜಾನೆ ಭಾಲ್ಕಿ ತಾಲೂಕಿನ ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ನೀಲಂನಳ್ಳಿ ತಾಂಡಾದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತರಾಗಿದ್ದಾರೆ.
ಈ ಭೀಕರ ಅಪಘಾತದಲ್ಲಿ ತೆಲಂಗಾಣದ ನಾರಾಯಣಖೇಡ್ ಮೂಲದ ನವೀನ್, ರಾಚಪ್ಪ ಹಾಗೂ ನಾಗರಾಜ್ ಎಂಬವವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕಾಶಿನಾಥ್ ಮತ್ತು ಪ್ರತಾಪ್ಎಂಬುವವರಲ್ಲಿಕಾಶಿನಾಥ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಾಪ್ ಎಂಬವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಗಾಣಗಾಪುರದ ದೇವಾಲಯಕ್ಕೆ ಹೋಗಿ ಇಂದು ಬೆಳಗ್ಗೆ ಹುಮನಾಬಾದ ದಾರಿಯಾಗಿ ತೆಲಂಗಾಣದ ನಾರಾಯಣ ಖೇಡ್ ಕಡೆಗೆ ಪಯಣ ಮಾಡುತ್ತಿದ್ದರು. ಮಾರ್ಗಮಧ್ಯೆ ಇವರು ಪ್ರಯಣಿಸುತ್ತಿದ್ದ ಕಾರು ಮತ್ತು ಗೂಡ್ಸ್ ವಾಹನ ಢಿಕ್ಕಿಯಾಗಿದೆ. ಭೀಕರ ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಧನ್ನೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: KMF : ಬೆಲೆ ಏರಿಕೆಯತ್ತ ನಂದಿನಿ ತುಪ್ಪ : ಸಾಮಾನ್ಯ ಜನರ ಆಕ್ರೋಶ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wUcWTshTMXo?si=qTp6Zeeu3MaZsdur











