KMF : ನಂದಿನಿ ತುಪ್ಪಕ್ಕೆ ಬಹು ಬೇಡಿಕೆಯಿದೆ. ಇದರಿಂದ ಕೆ ಎಮ್ ಎಫ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಜಿಎಸ್ ಟಿ ಕಡಿತದ ಬಳಿಕ ಗ್ರಾಹಕರೆಲ್ಲರೂ ಖುಷಿಯಾಗಿದ್ರು. ಆದ್ರೆ ಮತ್ತೆ ನಂದಿನಿ ತುಪ್ಪಕ್ಕೆ ಬೆಲೆಯನ್ನು ಏರಿಸಿದ್ದು. ಸಾಮಾನ್ಯ ಜನರಿಗೆ ಕೈಗೆಟುಕದಂತೆ ಮಾಡುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಮಹಾಮಂಡಳಿ ಇದು ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಹಾಲು ಉತ್ಪಾದನಾ ಸಹಕಾರಿ ಸಂಸ್ಥೆಯಾಗಿದೆ. ಕೆ.ಎಮ್.ಎಫ್ ಪ್ರಮುಖ ಬ್ರಾಂಡ್ “ನಂದಿನಿ”. ಇದು ಹಾಲು, ತುಪ್ಪ, ಬೆಣ್ಣೆ, ಚೀಸ್, ಐಸ್ ಕ್ರೀಂ ಹಾಗೂ ಅನೇಕ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ. ಆದರೆ, ಸಾಮಾನ್ಯವಾಗಿ ಹಾಲನ್ನು ಎಲ್ಲರೂ ಖರೀದಿಸುವ ಕಾರಣ, ಹಾಲಿನ ಬೇಡಿಕೆಯ ಹಿನ್ನಲೆ ದರವನ್ನು ಹೆಚ್ಚಿಸಲಾಗಿತ್ತು.
ಒಂದು ಲೀಟರ್ ನಂದಿನಿ ತುಪ್ಪದ ದರ ರೂ.90 ಏರಿಕೆಯಾಗಿದ್ದು, ಒಂದು ಲೀಟರ್ ತುಪ್ಪಕ್ಕೆ 700 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ. ಇದು ಭಾರೀ ದೊಡ್ಡ ಆಘಾತ ನೀಡಿದರ ಜೊತೆಗೆ, ಹಾಲಿನ ದರವನ್ನೂ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಸುಳಿವು ನೀಡಲಾಗಿರುತ್ತದೆ. ಹಾಗಾಗಿ, ಹೋಟೆಲ್, ಬೇಕರಿ ಇತ್ಯಾದಿ ಹಾಲು ಮತ್ತು ತುಪ್ಪವನ್ನು ಅಧಿಕ ಬಳಕೆ ಮಾಡುವಲ್ಲಿ ಜನರ ಬೇಡಿಕೆಯನುಸಾರ ಹೊರಗೆ ತಿನ್ನುವ ಆಹಾರದಲ್ಲೂ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : Belthangady ಪೊಲೀಸ್ ಉಪವಿಭಾಗ ಘೋಷಣೆ – DYSPಯಾಗಿ ಸಿ.ಕೆ ರೋಹಿನಿ ನೇಮಕ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wUcWTshTMXo?si=qTp6Zeeu3MaZsdur











