ಬ್ರೇಕಿಂಗ್ ನ್ಯೂಸ್
ಕರಾವಳಿಬೆಳ್ತಂಗಡಿ

Uppinangady: ಮೊದಲ ಮಹಡಿಯಿಂದ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು

Uppinangady: ಮೊದಲ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ನ. 4 ರಂದು ನಸುಕಿನ ವೇಳೆ ಈ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಬನಾರಿ ನಿವಾಸಿ ಗಣೇಶ್ ನಾಯ್ಕ್‌ (60) ಮೃತಪಟ್ಟ ದುರ್ದೈವಿ.

ಗಣೇಶ್ ನಾಯ್ಕ್‌ ಉಪ್ಪಿನಂಗಡಿಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಕಾರಿಡಾರ್‌ನಿಂದ ಆಯತಪ್ಪಿ ಪಕ್ಕದಲ್ಲಿ ಹರಿಯುವ ತೋಡಿಗೆ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿ ಮೃತರ ಮಗ ಜಗದೀಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Belagavi: ಕಬ್ಬು ಬೆಳೆಗಾರರು ಭಿಕ್ಷೆ ಬೇಡ್ತಿಲ್ಲ…ನನ್ನ ಮನಸ್ಸು ಕರಗಿ ಹೋಗಿದೆ: ಬಿ.ವೈ.ವಿಜಯೇಂದ್ರ!

======================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/ecLc8CzYwLs?si=vDKDfNx9uUuZJSN2

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 38

You cannot copy content of this page