ಬ್ರೇಕಿಂಗ್ ನ್ಯೂಸ್
ಸುಳ್ಯ

Sullia : ಜಟ್ಟಿಪಳ್ಳ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ನಿಧನ

Sullia : ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ(ರಿ)ದ ಬಿಎಂಎಸ್ ಸಂಯೋಜಿತ ಇದರ ಗೋಪಿಕಾ ನಿಲ್ದಾಣ ಇದರ ಸಂಘದ ಸದಸ್ಯನಾದ ಪ್ರಭಾಕರ ಪಿ ನವೆಂಬರ್ 3 ರಂದು ನಡೆದ ಸುಳ್ಯ ನಗರದ ಬೊಳಿಯಮಜಲು ಹತ್ತಿರ ರಸ್ತೆ ಅಪಘಾತದಲ್ಲಿ ಮಂಗಳೂರಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿರುತ್ತಾರೆ.

ನವೆಂಬರ್ 3 ರಂದು‌ ಜಟ್ಟಿಪಳ್ಳದಲ್ಲಿ ನಡೆದ ಅಪಘಾತ ;
ನ್ಯಾನೋ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ‌ ಪ್ರಭಾಕರ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ವೈದ್ಯರ ಸಲಹೆ‌ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು. ಆದರೂ ಅದು ಫಲಕಾರಿಯಾಗಲಿಲ್ಲ. ಈ ಅಪಘಾತದಲ್ಲಿ ಕಾರು ಹಾಗೂ ರಿಕ್ಷಾ ಹೊಡೆದ ರಭಸಕ್ಕೆ ಜಖಂ ಗೊಂಡಿರುತ್ತದೆ.

ಇದನ್ನೂ ಓದಿ : Mangaluru: ಕಪ್ಪು ಚಿರತೆ ಸಂಚಾರ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

…….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/ecLc8CzYwLs?si=vDKDfNx9uUuZJSN2

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page