ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Mangaluru: ಕದ್ರಿ ಪಾರ್ಕ್‌ ಇನ್ಮುಂದೆ ಟೋಲ್‌ ಗೇಟ್‌ .. 5 ನಿಮಿಷಕ್ಕಿಂತ ಜಾಸ್ತಿ ಪಾರ್ಕ್‌ ಒಳಗಿದ್ರೆ 50ರೂ.ಕಟ್!

Mangaluru: ಕಡಲತಡಿ ಮಂಗಳೂರು ಅಂದ್ರೆ ಪ್ರವಾಸಿಗರ ಫೇವ್ರೆಟ್‌ ಸ್ಥಳ. ದೂರದೂರುಗಳಿಂದ ಕುಡ್ಲದ ಕಡೆಗೆ ಬರುವ ಮಂದಿ ಇಲ್ಲಿನ ಜನ, ಬೀಚ್‌ ಕಂಡು ಫುಲ್‌ ಜೋಶ್‌ ನಲ್ಲಿ ಬರುತ್ತಾರೆ. ಆದ್ರೆ ಇದೀಗ ನೀವು ಇಲ್ಲಿನ ಕದ್ರಿ ಪಾರ್ಕ್‌ ಗೆ ವಾಯುವಿಹಾರಕ್ಕೆ ಬರುತ್ತೀರಿ ಅಂದ್ರೆ ನೀವು ಟೋಲ್‌ ಪೇ ಮಾಡಲೇಬೇಕು ಎಂದು ಸ್ಮಾರ್ಟ್‌ ಸಿಟಿ ಯೋಜನೆ ನಿರ್ಧರಿಸಿದೆ.

ಇದನ್ನೂ ಓದಿ: ಕಪ್ಪು ಚಿರತೆ ಸಂಚಾರ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರಿನ ಕದ್ರಿ ಪಾರ್ಕ್, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿಗೊಂಡು ಕಂಗೊಳಿಸುತ್ತಿದೆ. ಸಾವಿರಾರು ಮಂದಿ ಕದ್ರಿ ಪಾರ್ಕ್‌ಗೆ ವಾಯುವಿಹಾರಕ್ಕೆ ಬಂದು ರಿಲ್ಯಾಕ್ಸ್ ಆಗುತ್ತಾರೆ. ಆದ್ರೆ ಇದೀಗ ಪಾರ್ಕ್‌ನ ರಸ್ತೆಗೆ ಟೋಲ್ ಸಿಸ್ಟಮ್ ರೀತಿಯ ಪಾರ್ಕಿಂಗ್ ಶುಲ್ಕಕ್ಕೆ ಸ್ಮಾರ್ಟ್ ಸಿಟಿ ನಿರ್ಧಾರ ಕೈಗೊಳ್ಳಲಾಗಿದೆ.

ಜನವರಿಯಿಂದ ಕದ್ರಿ ಪಾರ್ಕ್‌ ಗೆ ಬರುವವರು ಟೋಲ್‌ ಕಟ್ಟಬೇಕು..!

ಪತ್ರೀ ನಿತ್ಯ ಸಾವಿರಾರು ಮಂದಿ , ಕದ್ರಿ ಪಾರ್ಕ್ಗೆಗೆ ವಾಯುವಿಹಾರಕ್ಕೆ ಬರುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ಆದ್ರೆ ಇನ್ನು ಮುಂದೆ ಜನವರಿಯಿಂದ ಕದ್ರಿ ಪಾರ್ಕ್ಗೆ ಬರುವವರಿಗೆ ಟೋಲ್ ರೀತಿಯಲ್ಲೇ ಹಣ ಕಟ್ ಆಗುವ ಬಿಸಿ ತಟ್ಟಲಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ನಿರ್ಮಿಸಲಾದ ಅಂಗಡಿಗಳನ್ನು ಖಾಸಗಿ ಸಂಸ್ಥೆ ಟೆಂಡರ್ ಮೂಲಕ ಪಡೆದುಕೊಂಡಿದೆ. ಇದೇ ಸಂಸ್ಥೆ ಕದ್ರಿ ಪಾರ್ಕ್ನ ಅಂಗಡಿ, ರಸ್ತೆ ಫುಟ್‌ಪಾತ್, ಪಾರ್ಕಿಂಗ್ ಜಾಗವನ್ನು ನಿರ್ವಹಣೆ ಮಾಡಲಿದೆ. ಆದರೆ ಟೆಂಡರ್ ಪಡೆದ ಸಂಸ್ಥೆಗೆ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ಹೀಗಾಗಿ ಕದ್ರಿ ಪಾರ್ಕ್ ರಸ್ತೆಗೆ ಟೋಲ್‌ಗೇಟ್ ರೀತಿ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ.

ಇದನ್ನೂ ಓದಿ: ಸೂಸೈಡ್‌ ಗೆ ಯತ್ನಿಸುತ್ತಿದ್ದ ತಂದೆ ಮಗಳ ರಕ್ಷಿಸಿದ ಪಣಂಬೂರು ಪೊಲೀಸರು!

5 ನಿಮಿಷಕ್ಕಿಂತ ಹೆಚ್ಚಾದ್ರೆ 50 ರೂ ಹಣ ಕಟ್..!

ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ವಾಹನದ ನಂಬರ್ ಪ್ಲೇಟ್ ಇಮೇಜ್ ಸೆರೆಹಿಡಿದು ವಾಹನದ ಫಾಸ್ಟ್ ಟ್ಯಾಗ್‌ಗೆ ಲಿಂಕ್ ಮಾಡಲಾಗುತ್ತದೆ. 5 ನಿಮಿಷದ ಒಳಗೆ ತೆರಳಿದ್ರೆ ಯಾವುದೇ ಶುಲ್ಕ ಕಟ್ ಆಗಲ್ಲ. ಹೆಚ್ಚಾದ್ರೆ, 50 ರೂ. ಹಣ ಕಟ್ ಆಗಲಿದೆ. ಸ್ಮಾರ್ಟ್ ಸಿಟಿ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 140

You cannot copy content of this page