ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

Mangaluru: ಕಪ್ಪು ಚಿರತೆ ಸಂಚಾರ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Mangaluru: ರಾತ್ರಿ ವೇಳೆ ಕರಿಚಿರತೆಯೊಂದು ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದು ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಜಪೆ ಸಮೀಪದ ನೆಲ್ಲಿತೀರ್ಥ ದೇವಸ್ಥಾನದ ಪರಿಸರದಲ್ಲಿ ಕಪ್ಪು ಚಿರತೆ ಸಂಚಾರ ಕಂಡು ಬಂದಿದೆ.

ನ. 3ರ ಸೋಮವಾರ ಮುಂಜಾನೆ ಸಮಯದಲ್ಲಿ ಕಪ್ಪು ಚಿರತೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿರುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ನೆಲ್ಲಿತೀರ್ಥ ಬಳಿ ಜನವರಿಯಲ್ಲಿ ಒಂದು ಕಪ್ಪು ಚಿರತೆ ಕಂಡು ಬಂದಿತ್ತು . ಇತ್ತೀಚಿನ ದಿನಗಳಲ್ಲಿ ಆಗಾಗ ಕಪ್ಪುಚಿರತೆ ಕಾಣ ಸಿಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಕಪ್ಪು ಚಿರತೆ ಸಂಚಾರದ ಕುರಿತಂತೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಆ ಪ್ರದೇಶಲ್ಲಿ ಕಪ್ಪು ಚಿರತೆ ಸೇರಿದಂತೆ, ಸಾಮಾನ್ಯ ಚಿರತೆಯ ಸಂಚಾರವಿದೆ. ಕುರುಚಲು ಕಾಡು – ಗುಡ್ಡ ಪ್ರದೇಶವಾಗಿರುವುದರಿಂದ ಚಿರತೆಗಳು ವಾಸ ಮಾಡುತ್ತಿವೆ. ಸಾರ್ವಜನಿಕರು ರಾತ್ರಿ ವೇಳೆ ಹಾಗೂ ಹಗಲು ಹೊತ್ತಿನಲ್ಲಿ ನಿರ್ಜನ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರ ವಹಿಸಬೇಕು ಎಂದಿದ್ದಾರೆ.
ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ

ಕಳೆದ ವರ್ಷ ಎಡಪದವಿನಲ್ಲಿ ಕಪ್ಪು ಚಿರತೆಯೊಂದು ಶಕುಂತಲಾ ಆಚಾರ್ಯ ಎಂಬವರ ಮನೆಯ ಬಾವಿಗೆ ಬಿದ್ದಿತ್ತು. ಅದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದರು.

ಇದನ್ನೂ ಓದಿ: Mangaluru Crime: ಸೂಸೈಡ್‌ ಗೆ ಯತ್ನಿಸುತ್ತಿದ್ದ ತಂದೆ ಮಗಳ ರಕ್ಷಿಸಿದ ಪಣಂಬೂರು ಪೊಲೀಸರು!

=========================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page