ಬ್ರೇಕಿಂಗ್ ನ್ಯೂಸ್
ವಾಣಿಜ್ಯ

Water Bottle : ಹೆಚ್ಚಿನ ಸೆಲೆಬ್ರಿಟಿಗಳು ಈ ಬಣ್ಣದ ನೀರಿನ ಬಾಟಲಿಯನ್ನು‌ ಖರೀದಿಸುತ್ತಾರೆ…!

Water Bottle : ಮನೆಯಿಂದ ಹೊರಗಡೆ ಹೋಗುವಾಗ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಎಲ್ಲರಿಗೆ ಇರೋದಿಲ್ಲ. 10 ರೂ. / 20 ರೂ. ಕೊಟ್ರೆ ಅಂಗಡಿಯಲ್ಲೇ ಸಿಗುತ್ತೆ, ಬ್ಯಾಗ್ ಗೆ ಯಾಕೆ ಭಾರ ಅಂತ ಹಾಗೇ ಸುಮ್ಮನೆ ಕೈ ಬೀಸಿಕೊಂಡು ಹೋಗ್ತಾರೆ. ಬಾಯಾರಿದಾಕ್ಷಣ ಹೊರಗೆ ನೀರಿನ ಬಾಟಲಿ ಖರೀದಿಸುತ್ತೇವೆ. ಆದರೆ ಬಾಟಲಿಯ ಮುಚ್ಚಳದ ಬಣ್ಣದ ಬಗ್ಗೆ ಈಗಾಗಲೇ ಹಲವು ವರದಿಗಳು ತಿಳಿಸಿದಂತೆ ನೀರಿನ‌ ಬಾಟಲಿಯ ನೀಲಿ,‌ ಹಸಿರು, ಕೆಂಪು,‌‌‌ ಕಪ್ಪು, ಬಿಳಿ ಅಥವಾ ಹಳದಿ ಬಣ್ಣಕ್ಕೆ ವಿಶೇಷ ಅರ್ಥಗಳಿವೆ.

ಮಿನರಲ್ ವಾಟರ್ ಯಾವ ಬಣ್ಣದ ನೀರಿನ ಬಾಟಲಿಯ ಮುಚ್ಚಳವನ್ನು ಹೊಂದಿದೆ…?

ನೀರಿನ ಬಾಟಲಿಗೆ ನೀಲಿ ಬಣ್ಣದ ಮುಚ್ಚಳವಿದ್ದರೆ ಅದು ಖನಿಜಯುಕ್ತ ನೀರು ಎಂದರ್ಥ. ಇದು ಮಿನರಲ್ ವಾಟರ್ ಆಗಿದ್ದು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ನೋಡಬಹುದಾಗಿದೆ. ಸಾಮಾನ್ಯವಾಗಿ ಜನರು ಹೊರಗಡೆ ಹೋದಾಗ ಮಿನರಲ್ ವಾಟರ್ ಕೊಡಿ ಎಂದು ಕೇಳಿ ಖರೀದಿಸುತ್ತಾರೆ. ಹಾಗೇ ನೀರಿನ ಬಾಟಲಿಯಲ್ಲಿ ಹಸಿರು ಬಣ್ಣದ ಮುಚ್ಚಳವಿದ್ದರೆ ಆ ಬಾಟಲಿಗಳಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಎಂದರ್ಥ. ಕೆಲವು ಕಂಪನಿಗಳು ನೀರಿಗೆ ಪರಿಮಳವಿರುವ ರುಚಿಗಳನ್ನು ಸೇರಿಸಿರುತ್ತವೆ. ಹಾಗೇ ಕೆಲವು ಬಾಟಲಿಗಳ ಕವರಿನ ಮೇಲೆ ಈ ಬಗ್ಗೆ ಮಾಹಿತಿಗಳನ್ನೂ ಬರೆದಿರುತ್ತಾರೆ.
ಇನ್ನು ಬಿಳಿ ಬಣ್ಣದ ಕ್ಯಾಪ್ ಎಂದರೆ, ಈ ನೀರು ಸಾಮಾನ್ಯ ಕುಡಿಯುವ ನೀರು ಆಗಿದೆ ಎಂದರ್ಥ. ಹಾಗೆ ನೋಡುದಾದ್ರೆ
ಹೊಳೆಯುವ ಕೆಂಪು ಮುಚ್ಚಳವು ಕಾರ್ಬೊನೇಟೆಡ್ ನೀರನ್ನು ಸೂಚಿಸಿದರೆ, ಹಳದಿ ಮುಚ್ಚಳವು ವಿಟಮಿನ್ ಗಳು ಮತ್ತು ಎಲೆಕ್ಟ್ರೋಲೈಟ್ಗಳಲ್ಲಿ ಸಮೃದ್ಧವಾಗಿರುವ ನೀರನ್ನು ಸೂಚಿಸುತ್ತದೆ. ಹಾಗೂ ಈ ಕಪ್ಪು ಬಣ್ಣದ ಕ್ಯಾಪ್ ಇರುವ ನೀರಿನ ಬಾಟಲಿಗಳು ಬಹಳ ಅಪರೂಪ. ಈ ಬಣ್ಣದ ಮುಚ್ಚಳವಿರುವ ನೀರಿನ ಬಾಟಲಿಗಳು ಪ್ರೀಮಿಯಂ ನೀರಿನ ಉತ್ಪನ್ನಗಳಿಗೆ ಮಾತ್ರ ಬಳಸಲಾಗುತ್ತದೆ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ.

ಅದೇನೋ ಗೊತ್ತಿಲ್ಲ…. ಹೊರಗಡೆ ನೀರಿನ ಬಾಟಲಿಗಳನ್ನು ಖರೀದಿಸಿ, ಕುಡಿದು ಅಲ್ಲೇ ಹತ್ತಿರದ ಕಸದ ತೊಟ್ಟಿಗೆ ಬಿಸಾಕಿ ಅಥವಾ ಇನ್ನೂ ಕೆಲವರು ಹೋಗೋ ಹಾದಿಯಲ್ಲೇ ಅದನ್ನು ಕಾಲಲ್ಲಿ ತುಳಿಯುತ್ತಾ ಹೋಗ್ತಾರೆ. ಆದ್ರೆ ಇವೆಲ್ಲದರ ಮಧ್ಯೆ ಪರಿಸರಕ್ಕೆ ನಾವು ನೀಡುತ್ತಿರುವ ಕೊಡುಗೆ ‘ಮತ್ತೆ ಪ್ಲಾಸ್ಟಿಕ್…?’. ಎಲ್ಲೆಂದರಲ್ಲಿ ಬಿಸಾಕುವ ನೀರಿನ ಬಾಟಲಿಗಳನ್ನು ಖರೀದಿಸಿ ಕುಡಿಯುವುದರ ಬದಲು, ಮನೆಯಿಂದಲೇ ಒಂದು ನೀರಿನ ಬಾಟಲಿಗಳನ್ನು ಬ್ಯಾಗ್ ಗೆ ಹಾಕಿಕೊಂಡು ಹೋದರೆ, ಪರಿಸರಕ್ಕೂ ಉಪಯೋಗ ನಿಮ್ಮ ಆರೋಗ್ಯಕ್ಕೂ ಉತ್ತಮ…!

ಇದನ್ನೂ ಓದಿ : Look In Option : ವಿಮಾನ‌ ಪ್ರಯಾಣಿಕರಿಗೆ ಹೊಸ ಸೌಲಭ್ಯ : 48 ಗಂಟೆಯೊಳಗಾಗಿ ಲುಕ್ ಇನ್ ಆಪ್ಷನ್

…………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/ecLc8CzYwLs?si=FcFxnejr7i_nsNjA

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page