ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mysore : ಅಕ್ರಮವಾಗಿ ತಲೆಎತ್ತಿರುವ ರೆಸಾರ್ಟ್ ಗಳು : ‘ಸೇವ್ ಕಬಿನಿ’ ತಂಡದಿಂದ ಅಕ್ರಮ ರೆಸಾರ್ಟ್ ಗಳ ಪಟ್ಟಿ ಬಿಡುಗಡೆ

Mysore : ಕರ್ನಾಟಕದ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಕಬಿನಿ ಅಣೆಕಟ್ಟಿನ ಹಿನ್ನೀರಿನ ಸಲುವಾಗಿ ಅನೇಕ ಆರೋಪಗಳು ಕೇಳಿಬರುತ್ತಿವೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲು ಸುಂದರವಾದ ಪ್ರಕೃತಿ‌ ಸೌಂದರ್ಯ ಹಾಗೂ ವನ್ಯಜೀವಿಗಳು, ಪಕ್ಷಿಗಳು, ದೋಣಿ ವಿಹಾರ, ಅತಣ್ಯ ಸಫಾರಿ ಹೀಗೆ ಅನೇಕ ತಾಣಗಳಿವೆ. ಅಲ್ಲದೇ ಇದು ನಾಗರಹೊಳೆಯ ವನ್ಯಜೀವಿ ಕಾರಿಡಾರ್ ಗೇ ಹೊಂದಿಕೊಂಡಿವೆ.

2021 ರಲ್ಲಿ ವರದಿಯಾದ ಕಬಿನಿ ಹಿನ್ನೀರಿನ ಪ್ಲಾಸ್ಟಿಕ್ ತ್ಯಾಜ್ಯಗಳು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯ ನಡೆದಿತ್ತು. ಆದರೆ ಮತ್ತೆ ಈಗ ಅದೇ ಜಾಗದಲ್ಲಿ
ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್‌ಗಳೇ ಕಾರಣವೆಂದು ಆರೋಪಿಸಿ ‘ಸೇವ್ ಕಬಿನಿ’ ತಂಡವು 15 ರೆಸಾರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಧಿಕಾರಿಗಳ ಶಾಮೀಲಿನಿಂದಾಗಿ ರೈತರ ಪ್ರಾಣಹಾನಿಯಾಗುತ್ತಿದೆ. ಕೂಡಲೇ ಅಕ್ರಮವಾಗಿ ನಿರ್ಮಿಸಿರುವ ಎಲ್ಲ ರೆಸಾರ್ಟ್‌ಗಳನ್ನು ತೆರವುಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸಬೇಕೆಂದು ಸರ್ಕಾರ ರೈತ ಮುಖಂಡರು ಮತ್ತು ವಕೀಲರು ತೀವ್ರವಾಗಿ ಆಗ್ರಹಿಸಿದ್ದಾರೆ.

ʻಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ದಾಳಿ ತೀವ್ರಗೊಂಡಿದೆ. ಕಾಡನ್ನು ನಾಶ ಮಾಡಿ, ಕಟ್ಟಡಗಳು‌ ಬೆಳೆಯುತ್ತಿವೆ. ಕಬಿನಿ ಹಿನ್ನೀರಿನಲ್ಲಿ ಅಕ್ರಮವಾಗಿ ರೆಸಾರ್ಟ್‌ ನಿರ್ಮಿಸಲಾಗಿರುವುದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಮುಖ್ಯ ಕಾರಣʼ ಎಂದು ‘ಸೇವ್ ಕಬಿನಿ’ ತಂಡ ಗಂಭೀರ ಆರೋಪವನ್ನೂ ಮಾಡಿದೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು, ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್ ಸೇರಿದಂತೆ 15 ಅಕ್ರಮ ರೆಸಾರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಅವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.ಅಷ್ಟೇ ಅಲ್ಲದೆ ಕಾಡಿನ‌ ಪ್ರದೇಶದಲ್ಲಿ ಯಾವುದೇ ರೆಸಾರ್ಟ್ ಗಳು ತೆಲೆಎತ್ತಬಾರದು ಎಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ : RFID : ಶಾಲಾ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಹೊಸ ಟ್ರ್ಯಾಕಿಂಗ್ ಸಿಸ್ಟಂ

……………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/ecLc8CzYwLs?si=FcFxnejr7i_nsNjA

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page