ಬ್ರೇಕಿಂಗ್ ನ್ಯೂಸ್
ದೇಶ

Look In Option : ವಿಮಾನ‌ ಪ್ರಯಾಣಿಕರಿಗೆ ಹೊಸ ಸೌಲಭ್ಯ : 48 ಗಂಟೆಯೊಳಗಾಗಿ ಲುಕ್ ಇನ್ ಆಪ್ಷನ್

New Delhi: ವಿಮಾನ‌ ಮೂಲಕ ಪ್ರಯಾಣ ಮಾಡುವುದು ಈಗ ಸುಲಭ. ಹಿಂದೆಯೆಲ್ಲಾ ಕೆಲವೇ ಕೆಲವು ಮಂದಿ ಅತ್ಯುತ್ತಮ ಹುದ್ದೆಯಲ್ಲಿರುವವರು ಮಾತ್ರ ಪ್ರಯಾಣಿಸುತ್ತಿದ್ದರು. ಆದರೀಗ ಭಾರತದಾದ್ಯಂತ ನಾಲ್ಕೂವರೆ ಲಕ್ಷಕ್ಕೂ ಅಧಿಕ ಜನರು ವಿಮಾನ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಅದೆಷ್ಟೋ ದೂರವಿದ್ದರೂ ಬೆಳಗ್ಗೆಯಿಂದ ಸಂಜೆಯಾಗುವಷ್ಟರಲ್ಲಿ ನಿರೀಕ್ಷಿಸಿದ ಜಾಗಕ್ಕೆ ತಲುಪುತ್ತಾರೆ.

ಹೀಗೆ ವಿಮಾನದಲ್ಲಿ ಪ್ರಯಾಣ ಮಾಡುವ ಅದೆಷ್ಟೋ ಜನರು ಒಂದಲ್ಲಾ ಒಂದು ಕಾರಣದಿಂದ ತಮ್ಮ ವಿಮಾನದ ಪ್ರಯಾಣದ ದಿನಾಂಕವನ್ನ ಬದಲಾಯಿಸಬೇಕಾಗುತ್ತದೆ ಅಥವಾ ವಿಮಾನದ ಪ್ರಯಾಣವನ್ನೇ ರದ್ದು ಮಾಡಬೇಕುವ ಸಂದರ್ಭ ಬರುತ್ತದೆ. ಈ ವೇಳೆ ಬುಕ್​ ಮಾಡಿದ ಟಿಕೆಟ್​ನ ಹಣ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ; ಅಥವಾ ಸಿಕ್ಕರೂ ಆ ಶುಲ್ಕ, ಈ ಶುಲ್ಕ ಎಂದು ಕಟ್​ ಮಾಡಿ, ಕೊನೆಗೆ ಅಲ್ಪ ಸ್ವಲ್ಪ ವಾಪಸ್ಸು ಕಳುಹಿಸುತ್ತಾರಷ್ಟೇ ಆದ್ರೆ ಇಂತಹ ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹೌದು… ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ದೇಶದ ವಿಮಾನ ಪ್ರಯಾಣಿಕರಿಗೆ ಬಹು ನಿರೀಕ್ಷಿತವಾದ ಹೊಸ ಸೌಲಭ್ಯವೊಂದನ್ನು ಘೋಷಿಸಿದ್ದು, ಅದರ ಪ್ರಕಾರ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ಬಳಿಕ 48 ಗಂಟೆಗಳೊಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶ ನೀಡುವ ‘ಲುಕ್-ಇನ್ ಆಯ್ಕೆ’ (Look-in option) ಎಂಬ ಹೊಸ ವ್ಯವಸ್ಥೆ ಪ್ರಸ್ತಾಪಗೊಂಡಿದ್ದು. ಈ ಕ್ರಮವು ದೇಶದ ಕೋಟ್ಯಾಂತರ ಪ್ರಯಾಣಿಕರಿಗೆ‌ ಬಹು ದೊಡ್ಡ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಇದುವರೆಗೆ ವಿಮಾನಯಾನ ಸಂಸ್ಥೆಗಳು ರದ್ದತಿ ವೇಳೆ ಭಾರೀ ಶುಲ್ಕ ವಿಧಿಸುತ್ತಿದ್ದವು. ಪ್ರಯಾಣದ ದಿನಾಂಕ ಬದಲಿಸಿದರೂ ತಿದ್ದುಪಡಿ ಶುಲ್ಕ ವಿಧಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಂದ ಬಂದ ಅಸಂಖ್ಯಾತ ದೂರುಗಳನ್ನು ಪರಿಗಣಿಸಿ, ಡಿಜಿಸಿಎ ಗ್ರಾಹಕ ಪರವಾಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ.

ಇದನ್ನೂ ಓದಿ : Madikeri: ಅಬ್ಬಬ್ಬಾ ಅಪಾಯವನ್ನು ಆಹ್ವಾನಿಸುತ್ತಿದೆ ಮರಳಿನ ತಡೆಗೋಡೆ; ಬ್ಯಾರಿಕೇಡ್ ಅಳವಡಿಸಲು ಒತ್ತಾಯ..!

…………..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/ecLc8CzYwLs?si=FcFxnejr7i_nsNjA

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page