ಬ್ರೇಕಿಂಗ್ ನ್ಯೂಸ್
ಕರ್ನಾಟಕ

RFID : ಶಾಲಾ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಹೊಸ ಟ್ರ್ಯಾಕಿಂಗ್ ಸಿಸ್ಟಂ

Tracking System : ಭಾರತದಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಇರುವಂತಹ ಟ್ರ್ಯಾಕಿಂಗ್ ಸಿಸ್ಟಂ ತರಲು ಸರ್ಕಾರ ಯೋಜಿಸುತ್ತಿದೆ. ಇದು ಶಾಲಾ‌ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಲಾಗುತ್ತದೆ. ಇದು ಕೇವಲ ಅಮೇರಿಕಾ, ಚೀನಾ ಹಾಗೂ ಸಿಂಗಾಪುರದಂತಹ ಹೆಸರುವಾಸಿ ಸಂಸ್ಥೆಗಳಲ್ಲಿ ಮಾತ್ರವೇ ಈ ವ್ಯವಸ್ಥೆಯಿತ್ತು. ಇದನ್ನು ರೇಡಿಯೋ ಫ್ರೀಕ್ವೆನ್ಸಿ ಐಡಿ ಆಧಾರಿತವಾದ ಟ್ರ್ಯಾಕಿಂಗ್ ಸಿಸ್ಟಂ (RFID based tracking system) ಅನ್ನು ಅಳವಡಿಸಬಹುದು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಯೋಜನೆ ಜಾರಿಗೆ ಬಂದರೆ, ಮಕ್ಕಳ ಸುರಕ್ಷತೆಯನ್ನು ಪೋಷಕರು ಮತ್ತು ಶಾಲೆಗಳು ಖಚಿತಪಡಿಸಿಕೊಳ್ಳಬಹುದಾದಂತಹ ವ್ಯವಸ್ಥೆ ಏರ್ಪಡಲಿದೆ. ಈ ವರದಿ ಪ್ರಕಾರ, ಮಕ್ಕಳನ್ನು ರಿಯಲ್ ಟೈಮ್​ನಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಾಗುವಂತಹ ಮಾದರಿ ವ್ಯವಸ್ಥೆಯನ್ನು ಬಿಐಎಸ್ ಅಭಿವೃದ್ಧಿಪಡಿಸುತ್ತಿದೆ. ಶಾಲಾ ಬಸ್ಸುಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೇಗೆ ಖಚಿತಪಡಿಸಬಹುದು ಎಂಬುವುದನ್ನು ಇದರಲ್ಲಿ ತಿಳಿಸಲಾಗುವುದು.

ಮಕ್ಕಳ ಮೇಲಿನ‌‌ ದೌರ್ಜನ್ಯ, ಅಪಹರಣ ಇತ್ಯಾದಿ ಕೇಸುಗಳಿಂದ ಭಾರತದಲ್ಲಿ ಅನೇಕ ಘಟನೆಗಳು ನಡೆದಿರುವುದಾಗಿಯೂ ಮಕ್ಕಳ‌ ಮೇಲೆ ಹೆಚ್ಚಿನ ನಿಗಾ ವಹಿಸುವ ಸಲುವಾಗಿ ಆ ಯೋಜನೆಯು ಬಹಳ ಪ್ರಯೋಜನಕಾರಿಯಾಗಲಿದೆ. ಮಕ್ಕಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡಿ ಟ್ಯಾಗ್​ಗಳನ್ನು ನೀಡಲಾಗುತ್ತದೆ. ಶಾಲಾ ಬಸ್ಸುಗಳಲ್ಲಿ ಆರ್​ಎಫ್​ಐಡಿ ರೀಡರ್​ಗಳನ್ನು ಇಡಲಾಗುತ್ತದೆ. ಇದರ ಜೊತೆಗೆ ಜಿಪಿಎಸ್, ಜಿಎಸ್​ಎಂ ಕಮ್ಯೂನಿಕೇಶನ್ ಮಾಡ್ಯೂಲ್, ಮತ್ತು ಐಪಿ ಆಧಾರಿತ ಕ್ಯಾಮೆರಾಗಳನ್ನೂ ಬಸ್ಸುಗಳಲ್ಲಿ ಅಳವಡಿಸಲಾಗಿರುತ್ತದೆ. ಮಗು ಬಸ್ಸನ್ನು ಎಲ್ಲಿ ಹತ್ತಿದ್ದು, ಎಲ್ಲಿ ಇಳಿದಿದ್ದು ಎಂಬುದೆಲ್ಲವೂ ರಿಯಲ್ ಟೈಮ್​ನಲ್ಲಿ ದಾಖಲಾಗುತ್ತದೆ. ಮಗುವಿನ ಪೋಷಕರು ಇದನ್ನು ರಿಯಲ್ ಟೈಮ್​ನಲ್ಲಿ ನೋಡಬಹುದು. ಶಾಲಾ ಆಡಳಿತವೂ ಕೂಡ ಎಲ್ಲಾ ಶಾಲಾ ಬಸ್ಸುಗಳಲ್ಲಿನ ಮಕ್ಕಳ ಚಲನವಲನಗಳನ್ನು ರಿಯಲ್ ಟೈಮ್​ನಲ್ಲಿ ನೋಡಬಹುದಾಗಿದೆ.

ಬೆಂಗಳೂರು, ದೆಹಲಿ, ಮುಂಬೈ ಮೊದಲಾದ ನಗರಗಳ ಕೆಲ ಪ್ರತಿಷ್ಠಿತ ಶಾಲೆಗಳಲ್ಲಿ ಬಸ್ಸುಗಳಿಗೆ ಜಿಎಸ್​ಎಂ ಅಥವಾ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ಸಿಸ್ಟಂ ಚಾಲನೆಯಲ್ಲಿವೆ. ಆರ್​ಎಫ್​ಐಡಿ ಆಧಾರಿತವಾದ ಟ್ರ್ಯಾಕಿಂಗ್ ಸಿಸ್ಟಂ ಅಮೆರಿಕ ಮೊದಲಾದ ದೇಶಗಳಲ್ಲಿ ಅಳವಡಿಕೆ ಆಗಿದೆ. ಈ RFID ಶಾಲಾ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಾಧ್ಯವಾದರೂ ಕೂಡಾ ಕೆಲವೊಮ್ಮೆ ದುರ್ಬಳಕೆಯಾಗುವ ಸಾಧ್ಯತೆ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸುತ್ತಿರುತ್ತಾರೆ. ಆರ್​ಎಫ್​ಐಡಿ ಟ್ರ್ಯಾಕಿಂಗ್ ಸಿಸ್ಟಂ ಆನ್​ಲೈನ್​ನಲ್ಲಿ ಇರುವುದರಿಂದ, ಮಕ್ಕಳಿರುವ ಸ್ಥಳ ಮತ್ತಿತರ ದತ್ತಾಂಶವು ತಪ್ಪಾದ ಜನರ ಕೈಗೆ ಸಿಕ್ಕಿಬಿಟ್ಟರೆ ದುರ್ಬಳಕೆಯಾಗಬಹುದು ಎಂದು ಸೈಬರ್ ಸೆಕ್ಯೂರಿಟಿ ತಜ್ಞರು ಅಭಿಪ್ರಯಿಸುತ್ತಾರೆ.

ಇದನ್ನೂ ಓದಿ : Karwar: ಕಾರವಾರ ಸಮುದ್ರ ತೀರಕ್ಕೆ ಬಂತು ಲಕ್ಷಾಂತರ ಮೀನುಗಳು..! ಜನ ಶಾಕ್‌!!

……

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/ecLc8CzYwLs?si=wupdMrGKCuwmrqDg

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page