Relationship: ಮದುವೆಯಾದ ನಂತರ ಗಂಡ ಹೆಂಡತಿ ಸಂಬಂಧ ಗಟ್ಟಿಯಾಗಿರಲು ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಬೇಕು,ಇಲ್ಲವಾದಲ್ಲಿ ಪ್ರತೀ ದಿನ ನೆಮ್ಮದಿಯೇ ಇಲ್ಲದಂತಾಗುತ್ತದೆ ಅನ್ನೋದು ಸತ್ಯ.
ಮದುವೆಯಾದ ಬಳಿಕ ಅನೇಕ ಜನ ನೆಮ್ಮದಿಯೇ ಇಲ್ಲ ಅಂತ ಹೇಳೋರು ಹೆಚ್ಚು. ಅದ್ಯಾಕೆ ಮದ್ವೆ ಆದೆನೋ ಎಂದು ಹೇಳುವ ಮಂದಿ ಬಹಳ ಜನ ಇದ್ದಾರೆ. ಇನ್ನು ಮದುವೆಯಾಗಲು ರೆಡಿ ಇರುವ ಮಂದಿ, ಅಯ್ಯೋ ನಮಗೆ ಹುಡುಗ, ಹುಡುಗೀನೇ ಸಿಗ್ತಿಲ್ಲ ಅಂತ ಕೆಲವರು ಹೇಳೋದಾಗಿದೆ. ಜೀವನ ಸಂಗಾತಿ ಇದ್ದರೆ ಕಷ್ಟ ನಷ್ಟಗಳನ್ನು ಒಟ್ಟಾಗಿ ತೆಗೆದುಕೊಂಡು ಜೀವನ ಸರಿದೂಗಿಸಬಹುದು ಅನ್ನೋ ಸತ್ಯ ನಾವು ತಿಳಿದುಕೊಳ್ಳಲೇಬೇಕು.
ಯುವಕರಿಗೆ ಮದುವೆ ಅಂದ್ರೆ ಫೀವರ್ ಯಾಕೆ..?
ಇಂದಿನ ಯುವಕರು ಬಹುತೇಕರು ಮದ್ವೆ ಬೇಡ ಅಂತ ಫಿಕ್ಸ್ ಆಗಿರೋದು ನಿಮ್ಮ ಗಮನಕ್ಕೂ ಬಂದಿರಬಹುದು. ಮದುವೆ ಆಗಲು ನಿರ್ಧಾರ ಕೈಗೊಂಡರೆ ಹುಡುಗಿಯರ ಎಕ್ಸ್ ಪೆಕ್ಟೇಶನ್ ಲೆವೆಲ್ ಕೇಳಿದ್ರೆ ಹುಡುಗರು ಶಾಕ್ ಆಗೋ ತರ ಇರುತ್ತದೆ. ಹಾಗಾಗಿ ಹುಡುಗಿಯರು ಸಿಗುತ್ತಿಲ್ಲ ಎಂದು ಹೇಳೋರೆ ಹೆಚ್ಚಾಗಿದ್ದಾರೆ. ಮದುವೆಗೆ ಹುಡುಗಿಯರನ್ನು ಹುಡುಕೋದಕ್ಕಿಂತ ಸನ್ಯಾಸತ್ವ ಸ್ವೀಕರಿಸೋದೆ ಬೆಸ್ಟ್ ಅಂತ ಹುಡುಗರು ಯೋಚನೆ ಮಾಡುವ ಹಂತಕ್ಕೆ ತಲುಪಿದ್ದಾರೆ. ದುಬಾರಿ ಮನೆ, ಕಾರುಗಳಿದ್ದರೆ ಮಾತ್ರ ಹುಡುಗಿಯರು ಒಪ್ಪುವುದು ಅಂತ ಹುಡುಗರು ಮಾತನಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಹುಡುಗಿ ಕೇಳ್ತಾಳೆ ಅಂದ್ರೆ ಹೇಗಪ್ಪಾ ಈ ಹುಡುಗೀನ ಸಾಕೋದು ಅಂತ ಹುಡುಗರು ಚಿಂತೆ ಮಾಡುತ್ತಾರೆ.
ಮದುವೆ ಆಗಿಲ್ಲ ಅಂದ್ರೆ, ಯಾಕೆ ಇನ್ನೂ ಆಗಿಲ್ಲ ಅಂತ ಕೇಳ್ತಾರೆ..!
ಇನ್ನು ಮನೆಯವರ ಒತ್ತಾಯಕ್ಕೆ ಮದುವೆ ಆಗೋ ಮಂದಿಯ ಪಾಡಂತೂ ವಿಪರೀತ. ತಂದೆ ತಾಯಿಯ ಪ್ರೀತಿಗೋಸ್ಕರ ಶ್ರೀಮಂತ ಹುಡುಗನನ್ನು ಮದುವೆಯಾಗುವ ಹುಡುಗಿಯರ ನೋವು ಒಂದು ಕಡೆಯಾದರೆ, ಪ್ರೀತಿಸಿದ ಹುಡುಗಿಗೋಸ್ಕರ ತಂದೆ ತಾಯಿಯನ್ನು ಒಪ್ಪಿಸಲು ಒದ್ದಾಡುವ ಹುಡುಗರ ಪಾಡು ಇನ್ನೊಂಡೆದೆ. ಹೀಗಾಗಿ ಮದುವೆ ಎಂಬ ಬಂಧನದಲ್ಲಿ ಸಿಲುಕುವ ಮುಂಚೆ ಸಾಕಷ್ಟು ಜನ ಗೊಂದಲಕ್ಕೀಡಾಗುತ್ತಾರೆ. ಇನ್ನು ಹೆಚ್ಚಾಗಿ ಮದುವೆಗೆ ಹುಡುಗ ಅಥವಾ ಹುಡುಗಿಯನ್ನು ನೋಡಿ ಫಿಕ್ಸ್ ಆದ ನಂತರ ಜಾತಕ ಕೂಡಿ ಬಂದಿಲ್ಲ ಅಂತ ನಿಗದಿ ಆಗಿರುವ ಮದುವೆಗಳು ಕ್ಯಾನ್ಸಲ್ ಆಗೋದುಂಟು.
ಪ್ರೀತಿಯಲ್ಲಿ ನಂಬಿಕೆಯಿಲ್ಲದೇ ಇರುವುದು..!
ಮದುವೆಯಾಗಲು ಯುವಕರು ಭಯ ಪಡೋದಕ್ಕೆ ಇನ್ನೊಂದು ಪ್ರಮುಖ ಅಂಶ ಅಂದ್ರೆ, ಈಗಿನ ಯುವಕ ಯುವತಿಯರಿಗೆ ತಮ್ಮ ತಮ್ಮಲ್ಲಿ ನಂಬಿಕೆಯೇ ಇರಲ್ಲ. ಸಿಟಿಗಳಲ್ಲಿ ಓದಿ ಬೆಳೆದಿರುವವರು ಚಿಕ್ಕ ವಯಸ್ಸಿನಲ್ಲಿಯೇ ಮೆಚ್ಯೂರ್ಡ್ ಆಗಿ ಯೋಚಿಸೋದನ್ನು ಕಲಿತು, ಪೌಢಾವಸ್ಥೆಗೆ ಬಂದಾಗ ಜಗತ್ತನ್ನು ನೋಡೋ ರೀತಿಯೇ ಬದಲಾಗಿರುತ್ತದೆ. ಫ್ರೆಂಡ್ಸ್ , ಪಾರ್ಟಿ ಅಂತ ಹೊರ ಜಗತ್ತಿನಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳುವರು ಹೆಚ್ಚಾಗಿದ್ದಾರೆ. ಇದರಿಂದ ಭಾವನೆಗಳಿಗೆ ಬೆಲೆಯೇ ಕೊಡದಿರುವ ಮನಸ್ಥಿತಿ ಯುವಕರಲ್ಲಿ ಉಂಟಾಗಿದೆ. ಇದರಿಂದ ಓದಿರುವ ಹುಡುಗಿಯರನ್ನು ಮದುವೆ ಆದರೆ ಜೀವನವೇ ಹಾಳಾಗಬಹುದು ಎಂದು ಯೋಚನೆ ಮಾಡುವ ಹಂತಕ್ಕೆ ಯುವಕರು ತಲುಪಿರೋದಂತು ಸತ್ಯ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











